Karnataka Bandh: ಶನಿವಾರ ಅಖಂಡ ಕರ್ನಾಟಕ ಬಂದ್, ಏನಿರುತ್ತೆ ಏನಿರಲ್ಲ ನೋಡಿ

Karnataka Bandh March 22: ಸದ್ಯ ಮರಾಠಿ ಪುಂಡರ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಹೇಳಬಹುದು. ಹೌದು ಕನ್ನಡಿಗರಿಗೆ ಮರಾಠರಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇಷ್ಟೆಲ್ಲ ಸಮಸ್ಯೆ ಆಗುತ್ತಿದ್ದರೂ ಕೂಡ ಕರ್ನಾಟಕ ಸರ್ಕಾರ ಇದಕ್ಕೆ ಪರಿಹಾರ ಕೊಡುತ್ತಿಲ್ಲ. ಇನ್ನು ಮರಾಠಿ ಪುಂಡರ ದಬ್ಬಾಳಿಕೆ ಕಡಿಮೆ ಮಾಡಬೇಕು ಮತ್ತು ಅವರಿಂದ ಇಲ್ಲಿತನಕ ಆದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬೇಕು ಅನ್ನುವ ಉದ್ದೇಶದಿಂದ ಮಾರ್ಚ್ 22 ಶನಿವಾರ ಕರ್ನಾಟಕ ಬಂದ್ (Karnataka Bandh) ಕರೆ ನೀಡಲಾಗಿದೆ. ಇನ್ನು ಈ ಕರ್ನಾಟಕದ ಈ ವರ್ಷದ ಮೊದಲ ಬಂದ್ ಆಗಿರಲಿದೆ ಮತ್ತು ಈ ಕರ್ನಾಟಕ ಬಂದ್ ಜನರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಹೇಳಬಹುದು. ಹಾಗಾದರೆ ಮಾರ್ಚ್ 22 ಶನಿವಾರದಂದು ಕರ್ನಾಟಕ ಬಂದ್ ಹೇಗಿರಲಿದೆ ಮತ್ತು ಯಾರ ಯಾರಾ ಬೆಂಬಲ ಸಿಕ್ಕಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

ಬೆಳಗಾವಿಯಲ್ಲಿ ಮಾರಾರಿ ಪುಂಡರ ದಬ್ಬಾಳಿಕೆ
ಹೌದು, ಬೆಳಗಾವಿಯಲ್ಲಿ ಮರಾಠಿ ಪುಂಡರ ದಬ್ಬಾಳಿಕೆ ಹೆಚ್ಚಾಗಿದೆ, ನಮ್ಮ ಕರ್ನಾಟಕದಲ್ಲೇ ಇದ್ದುಕೊಂಡು ನಮ್ಮಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ಕಾರಣಗಳಿಂದ ಅವರ ದಬ್ಬಾಳಿಕೆಗೆ ಪೂರ್ಣವಿರಾಮ ಹಾಕಬೇಕು ಮತ್ತು ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾರ್ಚ್ 22 ಶನಿವಾರದಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಅಖಂಡ ಕಾರನಾಟಕ ಬಂದ್ ಗೆ ಅಧ್ಯಕ್ಷ ವಾಟಾಳ್ ನಾಗರಾಜ್ (Vatal NagaraJ) ಅವರ ನೇತೃತ್ವದಲ್ಲಿ ಸಭೆ ಕರೆದು ತೀರ್ಮಾನ ತಗೆದುಕೊಳ್ಳಲಗಿದೆ.

ಕರ್ನಾಟಕ ಬಂದ್ ಕಾರಣ ಏನಿರುತ್ತೆ ಏನಿರಲ್ಲ ನೋಡಿ
ಕರ್ನಾಟಕ ಬಂದ್ BMTC ಮತ್ತು KSRTC ಸಂಸ್ಥೆ ಕೂಡ ಬೆಂಬಲ ನೀಡಿದೆ. ಹೌದು ಮಾರ್ಚ್ 22 ಶನಿವಾರ ಕರ್ನಾಟಕ ಬಂದ್ ಇರಲಿದ್ದು ಸರ್ಕಾರೀ ಬಸ್ಸುಗಳು ರಸ್ತೆಗೆ ಇಳಿಯುವುದಿಲ್ಲ. ಕಳೆದ ಸರ್ಕಾರೀ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ಈ ಕಾರಣಗಳಿಂದ KSRTC ಮತ್ತು BMTC ನೌಕರರು ಈ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಇನ್ನು ಮೇತ್ರಿ ಬಂದ್ ಮಾಡಲು ಕೂಡ ಕರೆ ನೀಡಲಾಗಿದೆ. ಕನ್ನಡಿಗರ ಮೇಲೆ ಆಗಿರುವ ದೌರ್ಜನ್ಯಕ್ಕೆ ಎಲ್ಲರೂ ಕೂಡ ಬೆಂಬಲಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ.

ರಸ್ತೆಗೆ ಬರಲ್ಲ ಉಬೆರ್, ಟ್ಯಾಕ್ಸಿ ಮತ್ತು ಓಲಾ
ಮಾರ್ಚ್ 22 ರ ಕರ್ನಾಟಕ ಬಂದ್ ಗೆ ಉಬೆರ್, ಟ್ಯಾಕ್ಸಿ ಮತ್ತು ಓಲಾ ಚಾಲಕರು ಕೂಡ ಬೆಂಬಲ ಸೂಚಿಸಿದ್ದಾರೆ. ಶನಿವಾರ ನೀವು ಟ್ಯಾಕ್ಸಿ, ಉಬೆರ್ ಅಥವಾ ಓಲಾ ಮಾಡಿಕೊಂಡು ಸುತ್ತಾಡಬೇಕು ಅಂದುಕೊಂಡಿದ್ದರೆ ನೀವು ಅದನ್ನು ಮುಂದೂಡುವುದು ಉತ್ತಮ. ಇನ್ನು ಅಂಗಡಿ ಮುಂಗಟ್ಟುಗಳು, ಬಾರ್ ಆಂಡ್ ರೆಸ್ಟೋರೆಂಟ್, ಹೋಟೆಲ್ ಮಾಲೀಕರು ಕೂಡ ಈ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಅಗತ್ಯ ವಸ್ತುಗಳು, ಮೆಡಿಕಲ್ ಮತ್ತು ಹಾಲು ಮಾರಾಟ ಎಂದಿನಂತೆ ಇರಲಿದ್ದು ಜನರಿಗೆ ಅಗತ್ಯ ವಸ್ತುಗಳು ಸಿಗಲಿದೆ.

Leave a Comment