Volkswagen Tayron 7 Seater: ವೋಕ್ಸ್‌ವ್ಯಾಗನ್ ತನ್ನ ಹೊಸ 7-ಸೀಟರ್ ಟೇರಾನ್ SUV ಅನ್ನು ಭಾರತದಲ್ಲಿ 2025ರ ದೀಪಾವಳಿ ನಂತರ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಪ್ರೀಮಿಯಂ SUV ಭಾರತೀಯ ಕುಟುಂಬಗಳಿಗೆ ವಿಶಾಲವಾದ ಜಾಗ ಮತ್ತು ಆಧುನಿಕ ತಂತ್ರಜ್ಞಾನವನ್ನು ನೀಡಲಿದೆ. ಸಾಕಷ್ಟು ವರ್ಷಗಳಿಂದ ಜನರ ವಿಶ್ವಾಸವನ್ನು ಗಳಿಸಿಕೊಂಡು ಬಂದಿದ್ದ Volkswagen ಈಗ 7 ಆಸನಗಳ ಹೊಸ ಮಾದರಿಯ Volkswagen Tayron ಕಾರನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಹೊಸ Volkswagen Tayron ಕಾರಿನಲ್ಲಿ ಹಲವು ಹೊಸ ಫ್ಯೂಚರ್ ಮತ್ತು ತಂತ್ರಜ್ಞವನ್ನು ನಾವು ಕಾಣಬಹುದು.
ಟೇರಾನ್‌ನ ವಿಶೇಷತೆಗಳು
ಟೇರಾನ್ SUV ಟಿಗುವಾನ್‌ನ 7-ಸೀಟರ್ ಆವೃತ್ತಿಯಾಗಿದ್ದು, MQB EVO ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿದೆ. ಇದು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ 204 ಎಚ್‌ಪಿ ಶಕ್ತಿ ಮತ್ತು 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ, 7-ಸ್ಪೀಡ್ DSG ಗೇರ್‌ಬಾಕ್ಸ್ ಮತ್ತು ಆಲ್-ವೀಲ್ ಡ್ರೈವ್ (AWD) ಸೌಲಭ್ಯವನ್ನು ಹೊಂದಿದೆ.
ಒಳಾಂಗಣ ಮತ್ತು ತಂತ್ರಜ್ಞಾನ
ಟೇರಾನ್‌ನ ಒಳಾಂಗಣವು ಟಿಗುವಾನ್ R-ಲೈನ್‌ಗೆ ಸಮಾನವಾಗಿದ್ದು, 15-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಮತ್ತು ಆಂಬಿಯೆಂಟ್ ಲೈಟಿಂಗ್‌ನಂತಹ ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರ ಆರ್-ಲೈನ್ ಆವೃತ್ತಿಯು ಕ್ರೀಡಾತ್ಮಕ ಸೀಟುಗಳು ಮತ್ತು ಕಪ್ಪು-ಥೀಮ್ ಒಳಾಂಗಣವನ್ನು ನೀಡುತ್ತದೆ. ಸುರಕ್ಷತೆಗಾಗಿ, ಲೆವೆಲ್ 2 ADAS, 9 ಏರ್‌ಬ್ಯಾಗ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ.
ಟೇರಾನ್ ಕಾರಿನ ಬೆಲೆ ಮತ್ತು ಪೈಪೋಟಿ
ಟೇರಾನ್‌ನ ಬೆಲೆ ಸುಮಾರು 50 ಲಕ್ಷ ರೂಪಾಯಿಗಳಾಗಿರಬಹುದು (ಎಕ್ಸ್-ಶೋರೂಮ್). ಇದು ಸ್ಕೋಡಾ ಕೊಡಿಯಾಕ್, ಜೀಪ್ ಮೆರಿಡಿಯನ್, ಟೊಯೊಟಾ ಫಾರ್ಚುನರ್ ಮತ್ತು ಎಂಜಿ ಗ್ಲೋಸ್ಟರ್‌ನಂತಹ SUVಗಳೊಂದಿಗೆ ಸ್ಪರ್ಧಿಸಲಿದೆ. ಈ SUV ಭಾರತದಲ್ಲಿ CKD (ಕಂಪ್ಲೀಟ್ಲಿ ನಾಕ್ಡ್ ಡೌನ್) ರೂಪದಲ್ಲಿ ಆಗಮಿಸಲಿದ್ದು, ಆಗಮನದಿಂದ ಗ್ರಾಹಕರ ಗಮನ ಸೆಳೆಯುವ ನಿರೀಕ್ಷೆಯಿದೆ. Volkswagen Tayron ಯಾವ ಗ್ರಾಹಕರ ಕೈಸೇರಲಿದೆ ಅನ್ನುವುದರ ಬಗ್ಗೆ ಇನ್ನೇನು ಕೆಲವೇ ದಿನಗಳಲ್ಲಿ ಸ್ಪಷ್ಟ ಮಾಹಿತಿ ತಿಳಿದುಬರಲಿದೆ.