New Toll System: ಇನ್ನೇನು ಹೊಸ ಹಣಕಾಸು ವರ್ಷ ಆರಂಭ ಆಗಲಿದೆ. ಹೌದು, ಏಪ್ರಿಲ್ 1 ನೇ ತಾರೀಕಿನಿಂದ ಹೊಸ ಹಣಕಾಸು ವರ್ಷ ಆರಂಭ ಆಗಲಿದ್ದು ಈ ವರ್ಷದಲ್ಲಿ ನಾವು ಹಣಕಾಸು ಕ್ಷೇತ್ರದಲ್ಲಿ ಹಲವು ಬದಲಾವಣೆ ಕಾಣಬಹುದು. ಇದರ ನಡುವೆ ಹಣಕಾಸು ಕ್ಷೇತ್ರದಲ್ಲಿ ಮಾತ್ರವಲ್ಲದೆ ವಿವಿಧ ಕ್ಷೇತ್ರದಲ್ಲಿ ಹಲವು ಬದಲಾವಣೆ ಆಗಲಿದೆ ಎಂದು ಹೇಳಬಹುದು. ಹೌದು, ಏಪ್ರಿಲ್ 1 ನೇ ತಾರೀಕಿನಿಂದ ಟೋಲ್ ಶುಲ್ಕದ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಆಗುವುದನ್ನು ನಾವು ನೋಡಬಹುದು. ಏಪ್ರಿಲ್ 1 ನೇ ತಾರೀಕಿನಿಂದ ಟೋಲ್ ನಿಯಮದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದ್ದು ರಸ್ತೆಗೆ ಇಳಿಯುವ ಮುನ್ನ ಬದಲಾದ ನಿಯಮದ ಬಗ್ಗೆ ಗಮನ ಕೊಡುವುದು ಅನಿವಾರ್ಯವಾಗಿದೆ. ಹಾಗಾದರೆ ಏಪ್ರಿಲ್ 1 ನೇ ತಾರೀಕಿನಿಂದ ಟೋಲ್ ನಿಯಮದಲ್ಲಿ ಆಗಲಿರುವ ಬದಲಾವಣೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನಾವೀಗ ತಿಳಿಯೋಣ.
ಏಪ್ರಿಲ್ 1 ರಿಂದ ಟೋಲ್ ನಿಯಮದಲ್ಲಿ ಬದಲಾವಣೆ
ದೇಶದಲ್ಲಿ ಟೋಲ್ ತೆರಿಗೆ (toll Tax) ಮತ್ತು ಟೋಲ್ ವ್ಯವಸ್ಥೆಯನ್ನು ಬದಲಾಯಿಸಲು ಈಗ ಕೇಂದ್ರ ಸರ್ಕಾರ ನಿರ್ಧಾರವನ್ನು ಮಾಡಿದೆ ಮತ್ತು ಅದೇ ರೀತಿಯಲ್ಲಿ ಬದಲಾದ ಹೊಸ ನಿಯಮ ಏಪ್ರಿಲ್ 1 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ಬರಲಿದೆ. ಇನ್ನು ಬದಲಾದ ನಿಯಮದ ಪ್ರಕಾರ, ಇನ್ನುಮುಂದೆ ಪ್ರಯಾಣಿಕರು ಟೋಲ್ ಗೇಟ್ (Toll Gate) ಗಳಲ್ಲಿ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದು. ಟೋಲ್ ದರದ ಏರಿಕೆಯಾದ ನಂತರ ವಾಹನಗಳ ಮಾಲೀಕರು ಕಳವಳವನ್ನು ಹೊರಹಾಕುತ್ತಿದ್ದಾರೆ, ಈ ಕಾರಣಗಳಿಂದ ನಾವು ಟೋಲ್ ನಿಯಮದಲ್ಲಿ ಹೊಸ ಬದಲಾವಣೆ ಜಾರಿಗೆ ತರಲು ಮುಂದಾಗಿದ್ದೇವೆ ಎಂದು ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ (Nitin Gadkari) ಅವರು ಹೇಳಿದ್ದಾರೆ.
ವಾಹನ ಮಾಲೀಕರಿಗೆ ವಾರ್ಷಿಕ ಪಾಸ್
ಎಕ್ಸ್ಪ್ರೆಸ್ ರಸ್ತೆಗಳನ್ನು ಎಷ್ಟೇ ಸುಧಾರಿಸಿದರು ಕೂಡ ಟೋಲ್ ಗೇಟ್ ಗಳಲ್ಲಿ ವಾಹನಗಳ ಸಾಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾರಣಗಳಿಂದ ವಾಹನಗಳ ಮಾಲೀಕರಿಗೆ ವಾರ್ಷಿಕ ಪಾಸ್ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ವಾರ್ಷಿಕ ಪಾಸ್ ನೀಡಿದರೆ ಪ್ರಯಾಣಿಕರ ಸಮಯ ಉಳಿಯುವುದು ಮಾತ್ರವಲ್ಲದೆ ವಾಹನಗಳ ಸಾಲು ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಇದರ ಜೊತೆಗೆ ಹಲವು ಸ್ಥಳಗಳಲ್ಲಿ ತಡೆರಹಿತ ಟೋಲ್ ಸಿಸ್ಟಮ್ ಜಾರಿಗೆ ತರುವ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮುಂಗಡ ಟೋಲ್ ಸಂಗ್ರಹ ವ್ಯವಸ್ಥೆ ಜಾರಿ
ಟೋಲ್ ಗೇಟ್ ಗಳಲ್ಲಿ ವಾಹನಗಳ ಸರತಿ ಸಾಲು ಕಡಿಮೆ ಮಾಡುವ ಉದ್ದೇಶದಿಂದ ಮುಂಗಡ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ತರಲು ಈಗ ಕೇಂದ್ರ ಸರ್ಕಾರ ಮುಂದಾಗಿದೆ. ಹೌದು, ಡಿಜಿಟಲ್ ಸ್ಕ್ಯಾನರ್ ಸಿಸ್ಟಮ್ ಅಳವಡಿಸಲು ಈಗ ಕೇಂದ್ರ ಮುಂದಾಗಿದೆ ಮತ್ತು ಡಿಜಿಟಲ್ ಸ್ಕ್ಯಾನರ್ ನಿಯಮ ಜಾರಿಗೆ ಬಂದರೆ ವಾಹನದ ನಂಬರ್ ಪ್ಲೇಟ್ ಸ್ಕ್ಯಾನ್ ಸ್ವಯಂಚಾಲಿತವಾಗಿ ಆಗಲಿದೆ ಮತ್ತು ವಾಹನಗಳ ಮಾಲೀಕರು ಟೋಲ್ ಗೇಟ್ ಗಳಲ್ಲಿ ವಾಹನ ನಿಲ್ಲಿಸುವ ಅಗತ್ಯ ಕೂಡ ಇರುವುದಿಲ್ಲ.
ಹೆದ್ದಾರಿ ನಿರ್ಮಾಣದಲ್ಲಿ ಹೂಡಿಕೆ ಮಾಡುವ ಸಲಹೆ ನೀಡಿದ ಗಡ್ಕರಿ
ಹೆದ್ದಾರಿ ವ್ಯವಸ್ಥೆ ಬದಲಾವಣೆ ಮಾಡಿದ ನಿತಿನ್ ಗಡ್ಕರಿ ಅವರು ಬಡವರು ಹೆದ್ದಾರಿ ನಿರ್ಮಾಣದಲ್ಲಿ ಹೂಡಿಕೆ ಮಾಡಬೇಕು ಎಂದು ಹೇಳಿದ್ದಾರೆ. ಇನ್ನು ಬಡವರು ಹೆದ್ದಾರಿ ನಿರ್ಮಾಣದಲ್ಲಿ ಹಣ ಹೂಡಿಕೆ ಮಾಡಿದರೆ ಈ ಹಿಂದೆ ಅವರು ಹೂಡಿಕೆ ಮಾಡಿದ ಹಣಕ್ಕೆ 4.5% ಬಡ್ಡಿ ನೀಡಲಾಗುತ್ತಿತ್ತು, ಆದರೆ ಮುಂದಿನ ದಿನಗಳಲ್ಲಿ ಅದನ್ನು 8.05% ಏರಿಕೆ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದ್ದಾರೆ.