Narendra Modi Lakhpati Didi scheme: ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಈಗಾಗಲೇ ದೇಶದಲ್ಲಿ ಹಲವು ಯೋಜನೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು. ಮಹಿಳೆಯರ ಸಬಲೀಕರಣ ಮತ್ತು ಮಹಿಳೆಯರು ತಮ್ಮ ಕಾಲಮೇಲೆ ತಾವು ನಿಂತುಕೊಳ್ಳಬೇಕು ಅನ್ನುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಈಗಾಗಲೇ ಹಲವು ಹಣಕಾಸು ಯೋಜನೆಯನ್ನು ದೇಶದಲ್ಲಿ ಜಾರಿಗೆ ತಂದಿದೆ.
ಇದರ ನಡುವೆ ಕೇಂದ್ರ ಸರ್ಕಾರ ಈಗ ಮಹಿಳೆಯರಿಗಾಗಿ ಇನ್ನೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆಯ ಮೂಲಕ ಮಹಿಳೆಯರು ಯಾವುದೇ ಬಡ್ಡಿ ಇಲ್ಲದೆ 5 ಲಕ್ಷ ರೂಪಾಯಿ ತನಕ ಸಾಲ ಪಡೆದುಕೊಳ್ಳಬಹುದು. ಹಾಗಾದರೆ ಮಹಿಳೆಯರಿಗೆ ಬಡ್ಡಿ ಇಲ್ಲದೆ 5 ಲಕ್ಷ ರೂ ತನಕ ಸಾಲ ನೀಡುವ ಈ ಯೋಜನೆ ಯಾವುದು ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗಿ ಬೇಕಾದ ದಾಖಲೆಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಮಹಿಳೆಯರಿಗಾಗಿ ಜಾರಿಯಲ್ಲಿದೆ “ಲಖಪತಿ ದೀದಿ” ಯೋಜನೆ (Lakpati Didi Scheme)
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗಾಗಿ “ಲಖಪತಿ ದೀದಿ” ಯೋಜನೆಯನ್ನು ಜಾರಿಗೆ ತಂದಿದೆ ಮತ್ತು ಈ ಯೋಜನೆಯ ಲಾಭವನ್ನು ಈಗಾಗಲೇ ಸಾಕಷ್ಟು ಮಹಿಳೆಯರು ಪಡೆದುಕೊಂಡಿದ್ದಾರೆ. ಮಹಿಳೆಯರ ಸಬಲೀಕರಣ ಮತ್ತು ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಅನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗ “ಲಖಪತಿ ದೀದಿ” ಯೋಜನೆಯನ್ನು ಜಾರಿಗೆ ತಂದಿದೆ. ಈ “ಲಖಪತಿ ದೀದಿ” ಯೋಜನೆಯ ಅಡಿಯಲ್ಲಿ ಮಹಿಳೆಯರು ಬಡ್ಡಿ ಇಲ್ಲದೆ 5 ಲಕ್ಷ ರೂಪಾಯಿ ಸಾಲ ಪಡೆದುಕೊಳಬಹುದು.
“ಲಖಪತಿ ದೀದಿ” ಯೋಜನೆ ಲಾಭ ಪಡೆದುಕೊಳ್ಳುವುದು ಹೇಗೆ
ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಮತ್ತು ಅವರು ಉದ್ಯಮ ಅಥವಾ ವ್ಯಾಪಾರ ಮಾಡಬೇಕು ಅನ್ನುವ ಉದ್ದೇಶದಿಂದ ನರೇಂದ್ರ ಮೋದಿ ಸರ್ಕಾರ ಈ “ಲಖಪತಿ ದೀದಿ” ಯೋಜನೆಯನ್ನು ದೇಶದಲ್ಲಿ ಜಾರಿಗೆ ತಂದಿದೆ. ಮಹಿಳಾ ಸ್ವಸಹಾಯ ಗುಂಪುಗಳಿಗೆ ಸೇರಿದ ಮಹಿಳೆಯರು “ಲಖಪತಿ ದೀದಿ” ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಗ್ರಾಮೀಣ ಪ್ರದೇಶದ ಮಹಿಳೆಯರು ಸ್ವಂತ ಉದ್ಯಮ ಆರಂಭ ಮಾಡಬೇಕು ಮತ್ತು ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಅನ್ನುವ ಉದ್ದೇಶದಿಂದ “ಲಖಪತಿ ದೀದಿ” ಯೋಜನೆಯ ಅಡಿಯಲ್ಲಿ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ.
ಸ್ವಂತ ಉದ್ಯಮ ಅಥವಾ ವ್ಯಾಪಾರ ಮಾಡಲು ಬಯಸುವವರು ಈ “ಲಖಪತಿ ದೀದಿ” ಯೋಜನೆಯ ಅಡಿಯಲ್ಲಿ ಸಹಾಯಧನಕ್ಕಾಗಿ ಸ್ವಸಹಾಯ ಸಂಘದಲ್ಲಿ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಇನ್ನು ಮಹಿಳೆಯರು ತಮ್ಮ ಮೊಬೈಲ್ ಮೂಲಕ ಆನ್ಲೈನ್ ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಯಾವ ಮಹಿಳೆ ಅರ್ಜಿ ಸಲ್ಲಿಸುತ್ತಾಳೋ ಆ ಸ್ವಸಹಾಯ ಗುಂಪಿನವರು ಮಹಿಳೆಯರ ಸಂಪೂರ್ಣ ವಿವರವನ್ನು ಸರ್ಕಾರಕ್ಕೆ ಕಳುಹಿಸಬೇಕು. ಸರ್ಕಾರ ಮಹಿಳೆ ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ಮಾಡಿ ನಂತರ ಮಹಿಳೆ ಈ ಯೋಜನೆಗೆ ಅರ್ಹಳೋ ಇಲ್ಲವೋ ಎಂದು ತಿಳಿದು ಅರ್ಜಿ ಅಂಗೀಕಾರ ಮಾಡುತ್ತದೆ. ಈ “ಲಖಪತಿ ದೀದಿ” ಯೋಜನೆಯ ಅಡಿಯಲ್ಲಿ ಸ್ವಂತ ಉದ್ಯಮ, ವ್ಯಾಪಾರ ಮಾಡಲು ಬಯಸುವ ಮಹಿಳೆಯರು 5 ಲಕ್ಷ ರೂಪಾಯಿ ತನಕ ಯಾವುದೇ ಬಡ್ಡಿ ಇಲ್ಲದೆ ಸಾಲ ಪಡೆದುಕೊಳ್ಳಬಹುದು.