Central Government Rules On Social Media: ಏಪ್ರಿಲ್ 1 ನೇ ತಾರೀಕಿನಿಂದ ಹೊಸ ಹಣಕಾಸು ವರ್ಷ (New Financial Year) ಆರಂಭ ಆಗಲಿದೆ ಮತ್ತು ಹೊಸ ಹಣಕಾಸು ವರ್ಷದಲ್ಲಿ ಸುರಕ್ಷತೆಯ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶದಲ್ಲಿ ಹಲವು ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ ಎಂದು ಹೇಳಬಹುದು. ಅದೇ ರೀತಿಯಲ್ಲಿ ಈಗ ಕೇಂದ್ರ ಸರ್ಕಾರ ಜನರು ಸಂದೇಶ ಕಳುಹಿಸಲು ಬಳಸುವ ಪ್ರಮುಖ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ (WhatsApp) ಮತ್ತು ಇಮೇಲ್ ಮೇಲೆ ಈಗ ನಿಗಾ ವಹಿಸಲು ಮುಂದಾಗಿದೆ. ವಾಟ್ಸಾಪ್ ಮತ್ತು ಇಮೇಲ್ ಬಳಸುವವರಿಗೆ ಈಗ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ ಮತ್ತು ಜಾರಿಗೆ ಬಂದಿರುವ ಹೊಸ ನಿಯಮದ ಪ್ರಕಾರ ಮುಂದಿನ ದಿನಗಳಲ್ಲಿ ನಿಮ್ಮ ವಾಟ್ಸಾಪ್ ಮತ್ತು ಇಮೇಲ್ ಸಂದೇಶಗಳನ್ನು ಓದಲು ನಿರ್ಧಾರ ಮಾಡಲಾಗಿದೆ.
ವಾಟ್ಸಾಪ್ ಮತ್ತು ಇಮೇಲ್ ಬಳಸುವವರಿಗೆ ಹೊಸ ರೂಲ್ಸ್
ದೇಶದಲ್ಲಿ ಅನೇಕ ವಂಚನೆಯ ಪ್ರಕರಣ ಮತ್ತು ಸಾಮಾಜಿಕ ಜಾಲತಾಣದಲ್ಲಿ (Soaicla Media) ಪ್ರಮುಖ ಪ್ರಕರಣಗಳು ನಡೆಯುತ್ತಿರುವುದರ ಕಾರಣ ಈಗ ಕೇಂದ್ರ ಸರ್ಕಾರ ಜನರು ಹೆಚ್ಚು ಬಳಕೆ ಮಾಡುವ ವಾಟ್ಸಾಪ್ ಮತ್ತು ಇಮೇಲ್ ಮೇಲೆ ನಿಗಾ ವಹಿಸಲು ನಿರ್ಧಾರ ಮಾಡಿದೆ ಮತ್ತು ಜನರ ವಾಟ್ಸಾಪ್ ಸಂದೇಶ ಹಾಗು ಇಮೇಲ್ ಗಳನ್ನೂ ಓದಲು ನಿರ್ಧಾರ ಮಾಡಲಾಗಿದೆ. ಹಾಗಾದರೆ ಕೇಂದ್ರ ಸರ್ಕಾರ ಜನರ ವಾಟ್ಸಾಪ್ ಮತ್ತು ಇಮೇಲ್ ಸಂದೇಶವನ್ನು ಏಕೆ ತಿಳಿದುಕೊಳ್ಳಲು ತೀರ್ಮಾನ ಮಾಡಿದೆ ಮತ್ತು ಯಾರ ಯಾರ ವಾಟ್ಸಾಪ್ ಸಂದೇಶವನ್ನು ಕೇಂದ್ರ ರೀಡ್ ಮಾಡಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮ್ಮ ವಾಟ್ಸಾಪ್ ನಲ್ಲಿ ಇಮೇಲ್ ಒಡಲಿದೆ ಕೇಂದ್ರ ಸರ್ಕಾರ
ಕಾನೂನು ಬಾಹಿರ ಚಟುವಟಿಕೆಯನ್ನು ತಗೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಾಮಾಜಿಕ ಜಾಲತಾಣವಾದ ವಾಟ್ಸಾಪ್, ಫೇಸ್ಬುಕ್, ಟೆಲಿಗ್ರಾಮ್ ಮತ್ತು ಇಮೇಲ್ ಮೇಲೆ ನಿಗಾ ವಹಿಸಲು ತೀರ್ಮಾನ ಮಾಡಿದೆ. ಆದಾಯ ತೆರಿಗೆ ಮಸೂದೆ 2025 ರ ನಿಬಂಧನೆಯ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆ ನಿಮ್ಮ ಸಾಮಾಜಿಕ ಜಾಲತಾಣದ ಸಂದೇಶ ನೋಡಲು ತೀರ್ಮಾನವನ್ನು ಮಾಡಿದೆ.
ದೇಶದ ಹಣಕಾಸು ಸಚಿವೆಯಾದ ನಿರ್ಮಲ ಸೀತಾರಾಮನ್ (Nirmala sitharaman) ಅವರು ಇತ್ತೀಚಿಗೆ ಹೊಸ ಹಣಕಾಸು ಮಸೂದೆಯನ್ನು ಮಂಡಿಸಿದ್ದರು. ಕಾನೂನು ಬಾಹಿರ ಚಟುವಟಿಕೆ ಮತ್ತು ಅಕ್ರಮ ಹಣಕಾಸು ವ್ಯವಹಾರ ತಡೆಗಟ್ಟುವುದು ಈ ಮಸೂದೆಯ ಪ್ರಮುಖವಾದ ಉದ್ದೇಶ ಕೂಡ ಆಗಿತ್ತು. ಜನರು ಸಾಮಾಜಿಕ ಜಾಲತಾಣ ಬಳಸಿಕೊಂಡು ಕಾನೂನು ಬಾಹಿರ ಚಟುವಟಿಕೆ ಮತ್ತು ಹಣಕಾಸಿನ ಚಟುವಟಿಕೆ ಮಾಡುತ್ತಿದ್ದಾರೆ ಮತ್ತು ಇದರಲ್ಲಿ ಕ್ರಿಪ್ಟೋ ಕರೆನ್ಸಿ ಕೂಡ ಸೇರಿದೆ. ಡಿಜಿಟಲ್ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಕಾನೂನು ಬಾಹಿರ ಹಣಕಾಸು ವಹಿವಾಟು ಆಗುತ್ತಿರುವುದರ ಕಾರಣ ಈಗ ಕೇಂದ್ರ ಸರ್ಕಾರ ಜನರ ಸಾಮಾಜಿಕ ಕಲತಾಣಗಳ ಖಾತೆಗಳ ಮೇಲೆ ನಿಗಾ ವಹಿಸಲು ತೀರ್ಮಾನವನ್ನು ಮಾಡಿದೆ.
ನಿಮಗೆ ತಿಳಿಯದೆ ನಿಮ್ಮ ಫೋನ್ ಗೆ ಎಂಟ್ರಿ ಕೊಟ್ಟ ತೆರಿಗೆ ಅಧಿಕಾರಿಗಳು
ಹೌದು, ತೆರಿಗೆ ಅಧಿಕಾರಿಗಳು ನಿಮಗೆ ತಿಳಿಯದೆ ಹಾಗೆ ಸಾಮಾಜಿಕ ಜಾಲತಾಣದ ಹಲವು ಸಂದೇಶಗಳನ್ನು ರೀಡ್ ಮಾಡಲಿದ್ದಾರೆ. ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ ಸುಮಾರು 250 ಕೋಟಿ ರೂ ಅಕ್ರಮ ವಹಿವಾಟುಗಳು ಸಾಮಾಜಿಕ ಜಾಲತಾಣದ ಮೂಲಕ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ವಾಟ್ಸಾಪ್ ಸಂವಹನದ ಮೂಲಕ ಸುಮಾರು 200 ಕೋಟಿಗೂ ಅಧಿಕ ಕಪ್ಪು ಹಣ ಪತ್ತೆ ಮಾಡಲಾಗಿದೆ. ಈ ಕಾರಣಗಳಿಂದ ಈಗ ಕೇಂದ್ರ ಸರ್ಕಾರ ಜನರ ವಾಟ್ಸಾಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಲು ತೀರ್ಮಾನವನ್ನು ಮಾಡಿದೆ.