IPS Officer: 1 ದಿನಕ್ಕೆ IPS ಆಫೀಸರ್ ಆದ 9 ವರ್ಷದ ಹುಡುಗ, ಇದರ ಹಿಂದಿದೆ ಒಂದು ಮಲಕುಲುಕುವ ಸತ್ಯ.

1 ದಿನಕ್ಕೆ IPS ಆಫೀಸರ್ ಆದ 9 ವರ್ಷದ ಹುಡುಗ

A 9 Year Old Boy Became An IPS Officer: ಸಾಮಾನ್ಯವಾಗಿ ಹೆಚ್ಚಿನ ಜನರು ಐಎಎಸ್, ಐಪಿಎಸ್ ಆಗುವ ಕನಸನ್ನು ಕಾಣುತ್ತಾರೆ. ಐಎಎಸ್, ಐಪಿಎಸ್ ಆಗುವುದು ಕನಸು ಕಂಡಷ್ಟು ಸುಲಭದ ಮಾತಲ್ಲ. ಇದಕ್ಕಾಗಿ UPSC ಪರೀಕ್ಷೆ ಪಾಸ್ ಮಾಡಬೇಕಾಗುತ್ತದೆ. ಎಲ್ಲ ಪರೀಕ್ಷೆಯಲ್ಲಿ ಪಾಸ್ ಆದರೆ ಮಾತ್ರ ಪೊಲೀಸ್ ಅಧಿಕಾರಿಯಾಗಲು ಸಾಧ್ಯವಾಗುತ್ತದೆ. ಆದರೆ ಇಲ್ಲೊಂದು ಅಚ್ಚರಿಯ ಪ್ರಕರಣ ನಡೆದಿದೆ.

ಹೌದು, ಕೇವಲ 9 ವರ್ಷದ ಬಾಲಕ ಐಪಿಎಸ್ ಆಧಿಕಾರಿಯಾಗಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದ್ಲಲಿ ಈ ವಿಷಯ ಬಾರಿ ವೈರಲ್ ಆಗುತ್ತಿದೆ. ಅಷ್ಟಕ್ಕೂ 9 ವರ್ಷದ ಬಾಲಕ ಐಪಿಎಸ್ ಅಧಿಕಾರಿಯಾಗಲು ಹೇಗೆ ಸಾಧ್ಯ…? ಎನ್ನುವ ಬಗ್ಗೆ ನಿಮ್ಮಲ್ಲಿ ಪ್ರಶ್ನೆ ಹುಟ್ಟಿರಬಹುದು. ಇದರ ಬಗ್ಗೆ ಮಾಹಿತಿ ತಿಳಿಯಲು ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

A 9 Year Old Boy Became An IPS Officer
Image Credit: Prabhatkhabar

1 ದಿನಕ್ಕೆ IPS ಆಫೀಸರ್ ಆದ 9 ವರ್ಷದ ಹುಡುಗ
ಉತ್ತರ ಪ್ರದೇಶದ ವಾರಣಾಸಿಯ 9 ವರ್ಷದ ಬಾಲಕ ರಣವೀರ್ ಭಾರ್ತಿಗೆ ಐಪಿಎಸ್ ಅಧಿಕಾರಿಯಾಗುವ ಕನಸು ಇದ್ದಿತ್ತು. ಆದರೆ ಬ್ರೈನ್ ಟ್ಯೂಮರ್ ಅವರ ಕನಸನ್ನು ಕೊಳ್ಳುತ್ತಿದೆ. ಹೌದು, 9 ವರ್ಷದ ಬಾಲಕ ರಣವೀರ್ ಭಾರ್ತಿ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾರೆ. ಹೀಗಾಗಿ ವಾರಣಾಸಿ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪಿಯೂಷ್ ಮೊರ್ಡಿಯಾ ಅವರ ಕನಸನ್ನು ನನಸು ಮಾಡಲು ಹೊರಟಿದ್ದಾರೆ. ಸದ್ಯ 9 ವರ್ಷದ ಬಾಲಕ ರಣವೀರ್ ಭಾರ್ತಿ 1 ದಿನಕ್ಕೆ IPS ಆಫೀಸರ್ ಆಗಿ ತನ್ನ ಕನಸನ್ನು ನನಸು ಮಾಡಿಕೊಂಡಿದ್ದಾನೆ.

ಇದರ ಹಿಂದಿದೆ ಒಂದು ಮಲಕುಲುಕುವ ಸತ್ಯ
ವಾರಣಾಸಿಯ ಎಡಿಜಿ ವಲಯ ವಾರಣಾಸಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ರಣವೀರ್ ಭಾರ್ತಿ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “9 ವರ್ಷದ ರಣವೀರ್ ಭಾರ್ತಿ ಅವರು ವಾರಣಾಸಿಯ ಮಹಾಮಾನ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ರಣವೀರ್ ಐಪಿಎಸ್ ಅಧಿಕಾರಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

ಆದ್ದರಿಂದ ಮಗುವಿನ ಆಸೆಯನ್ನು ಕಚೇರಿಯಲ್ಲಿ ಪೂರೈಸಲಾಯಿತು” ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ. ವೈರಲ್ ವಿಡಿಯೋದಲ್ಲಿ, ಹುಡುಗ ರಣವೀರ್ ಭಾರ್ತಿ ಖಾಕಿ ಸಮವಸ್ತ್ರವನ್ನು ಧರಿಸಿ ಕ್ಯಾಬಿನ್‌ನಲ್ಲಿ ಕುಳಿತು ಅಧಿಕಾರಿಗಳನ್ನು ಭೇಟಿಯಾಗಿ ಕೈಕುಲುಕುತ್ತಿರುವುದನ್ನು ಕಾಣಬಹುದು. ಬಾಲಕನ ಆಸೆ ಈಡೇರಿಸಿದ ಪೊಲೀಸರ ಕೆಲಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಯಂ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಾರಿ ವೈರಲ್ ಆಗಿದ್ದು, ನೋಡುಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

9 year old becomes IPS officer for a day
Image Credit: Economic Times

Join Nadunudi News WhatsApp Group