K. Annamalai: ಕೇವಲ ಒಂದೇ ವರ್ಷದಲ್ಲಿ ಪತನವಾಗಲಿದೆ ಕಾಂಗ್ರೆಸ್, ಭವಿಷ್ಯ ನುಡಿದ ಅಣ್ಣಾಮಲೈ.
ಒಂದು ವರ್ಷದೊಳಗೆ ಪತನವಾಗಲಿದೆ ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಅಣ್ಣಾಮಲೈ
K. Annamalai About Congress Government: ನಿನ್ನೆ ಅಷ್ಟೇ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ರಚನೆ ಆಗಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರ ನಡೆಯಲಿದೆ. ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರೆಂಟಿಗಳ ಘೋಷಣೆಯನ್ನು ಮಾಡಿತ್ತು.
ಇದೀಗ ಜನರು ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಗ್ಯಾರೆಂಟಿಗಳ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಪಕ್ಷದವರು ಕಾಂಗ್ರೆಸ್ ಅಧಿಕಾರದ ಮೇಲೆ ಕಿಡಿಕಾರುತ್ತಿದ್ದಾರೆ. ಇದೀಗ ಅಣ್ಣಾಮಲೈ (Annamalai) ಅವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ ಒಂದು ವರ್ಷದೊಳಗೆ ಪತನವಾಗಲಿದೆ ಎಂದ ಅಣ್ಣಾಮಲೈ
ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಸಿದ್ಧರಾಮಾಯ್ಯ ಅವರ ಸರ್ಕಾರ ಒಂದು ವರ್ಷದೊಳಗೆ ಪತನವಾಗಲಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಭವಿಷ್ಯ ನುಡಿದಿದ್ದಾರೆ. ಕರ್ನಾಟಕ ಸರ್ಕಾರವು ಒಂದು ವರ್ಷದ ನಂತರ ಪತನವಾಗಲಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಅಣ್ಣಾಮಲೈ
ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ 2024 ರೊಳಗೆ ಹೊಡೆದಾಡದಿದ್ದರೆ, ಇಬ್ಬರಿಗೂ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕು. ಏಕೆಂದರೆ ಸರ್ಕಾರದ ರಚನೆಯೇ ದೋಷಪೂರಿತವಾಗಿದೆ. ಇಬ್ಬರು ನಾಯಕರು 2.5 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ. ಸಿದ್ದರಾಮಯ್ಯ, ಶಿವಕುಮಾರ್ ಮಾತು ಎಐಸಿಸಿ ತಲಾ 10 ಮಂತ್ರಿಗಳನ್ನು ಹೊಂದಿದ್ದಾರೆ, ಇದು ಯಾವ ರೀತಿಯ ಸರ್ಕಾರದ ರಚನೆ ಎಂದು ಅಣ್ಣಾಮಲೈ ಕಿಡಿಕಾರಿದ್ದಾರೆ.