Hydrogen Car: 1 ಲೀಟರ್ ಗೆ 124 ಕಿಲೋ ಮೀಟರ್ ಮೈಲೇಜ್, ಕೇಂದ್ರದ ಸರ್ಕಾರದಿಂದ ಹೊಸ ಕಾರ್ ಬಿಡುಗಡೆ.

ವಾಹನ ಖರೀದಿಸುವವರಿಗೆ ಕೇಂದ್ರ ಸರ್ಕಾರದ ಬಿಗ್ ಅಪ್ಡೇಟ್, ಮಾರುಕಟ್ಟೆಗೆ ಬರಲಿದೆ ಹೈಡ್ರೋಜನ್ ಚಾಲಿತ ಕಾರ್.

Nitin Gadkari About Hydrogen Cars: ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಮಾದರಿಯ ಕಾರ್ ಗಳು ಲಭ್ಯವಿದೆ. ಇನ್ನು ಪೆಟ್ರೋಲ್, ಡೀಸೆಲ್, ಸಿಎನ್ ಜಿ ಚಾಲಿತ ವಾಹನಗಳನ್ನು ದೇಶದ ಪ್ರತಿಷ್ಠಿತ ವಾಹನ ತಯಾರಕ ಕಂಪನಿಗಳು ಬಿಡುಗಡೆ ಮಾಡಿವೆ. ಇನ್ನು ಇತ್ತೀಚಿಗೆ ಕಚ್ಚಾ ತೈಲಗಳ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ.

ಕಚ್ಚಾ ತೈಲಗಳ ಬೆಲೆಯ ಏರಿಕೆಯ ಪರಿಣಾಮವಾಗಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಗಮನಹರಿಸುತ್ತಿದ್ದಾರೆ. ಇನ್ನು ಕೇಂದ್ರ ಸರ್ಕಾರ ಕಚ್ಚಾ ತೈಲಗಳ ಬೆಲೆಯ ಪರಿಷ್ಕರಣೆಯ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ನಿರ್ಧಾರ ಕೈಗೊಂಡಿದೆ.

A hydrogen powered car will be coming to the market soon
Image Credit: Abplive

ಇನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಪೆಟ್ರೋಲ್, ಡೀಸೆಲ್, ಸಿಎನ್ ಜಿ ಬದಲಾಗಿ ಎಥನಾಲ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಘೋಷಣೆ ಹೊರಡಿಸಿದ್ದರು. ಎಥನಾಲ್ ಚಾಲಿತ ವಾಹನಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದರು.

ಇನ್ನು ಎಥನಾಲ್ ಚಾಲಿತ ವಾಹನಗಳು ಮಾರುಕಟ್ಟೆಗೆ ಬಂದ ಬಳಿಕ ಪೆಟ್ರೋಲ್ ನ ಬೆಲೆ ಲೀಟರ್ ಗೆ 15 ರೂ. ಆಗಲಿದೆ ಎನ್ನುವ ಬಗ್ಗೆ ಕೂಡ ಹೇಳಿಕೆ ನೀಡಿದ್ದರು. ಇದೀಗ ವಾಹನ ಖರೀದಿಸುವವರಿಗೆ ಕೇಂದ್ರ ಸರ್ಕಾರ ಮತ್ತೊಂದು ಬಿಗ್ ಅಪ್ಡೇಟ್ ಅನ್ನು ನೀಡಿದೆ.

ಸದ್ಯದಲ್ಲೆ ಮಾರುಕಟ್ಟೆಗೆ ಬರಲಿದೆ ಹೈಡ್ರೋಜನ್ ಚಾಲಿತ ಕಾರ್
ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಸೇಲ್ ಕಾಣುತ್ತಿದೆ. ಇದೀಗ ಹೈಡ್ರೋಜನ್ ಚಾಲಿತ ಕಾರ್ ಬಿಡುಗಡೆಗೊಳ್ಳುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. ನಿತಿನ್ ಗಡ್ಕರಿ ಅವರು ಸಂಪ್ರಾಯಕ ಇಂಧನಕ್ಕೆ ಪರ್ಯಾಯ ಹುಡುಕಾಟ ನಡೆಸುತ್ತಿದ್ದು ಎಲೆಕ್ಟ್ರಿಕ್, ಫ್ಲೆಕ್ಸ್ ಇಂಧನ, ಹಾಗೂ ಹೈಡ್ರೋಜನ್ ಚಾಲಿತ ಇಂಧನಗಳ ಬಿಡುಗಡೆಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಸಿಎನ್ ಜಿ ಕಾರ್ ಗಳಿಗೆ ಹೋಲಿಸಿದರೆ ಹೈಡ್ರೋಜನ್ ಚಾಲಿತ ವಾಹನಗಳು ಹೆಚ್ಚಿನ ಮೈಲೇಜ್ ನೀಡುತ್ತದೆ.

Join Nadunudi News WhatsApp Group

Nitin Gadkari's Hydrogen Car
Image Credit: Japantimes

ನಿತಿನ್ ಗಡ್ಕರಿ ಅವರ ಹೈಡ್ರೋಜನ್ ಕಾರ್
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಟೊಯೋಟಾ ಮಿರಾಯ್ ಅನ್ನು ಹೈಡ್ರೋಜನ್ ಕಾರ್ ಆಗಿ ಬಳಸುತ್ತಾರೆ. ಕಂಪನಿ ಈ ಕಾರನ್ನು ಬಿಡುಗಡೆ ಮಾಡಿಲ್ಲವಾದರೂ ಇವರು ಇದರ ಪರೀಕ್ಷಕಾ ಮಾದರಿಯನ್ನು ಬಳಸುತ್ತಾರೆ. ಕಂಪನಿಯು ಹೈಡ್ರೋಜನ್ ಪ್ಯುಯೆಲ್ ಸೆಲ್ ತಂತ್ರಜ್ಞಾನವನ್ನು ಬಳಸಿಕೊಂಡು ಟೊಯಾಟಾ ಮಿರಾಯ್ ಅನ್ನು ತಯಾರಿಸಿದೆ.

ಇದರಲ್ಲಿ 1.24 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು 182 PS ಪವರ್ ಮತ್ತು 406 Nm ತಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ 5.2 ಕೆಜಿ ಹೈಡ್ರೋಜನ್ ಟ್ಯಾಂಕ್ ಅನ್ನು ಅಳವಡಿಸಿದ್ದು 646 ಕಿಲೋಮೀಟರ್ ವ್ಯಾಪ್ತಿಯವರೆಗೂ ಓಡಿಸಬಹುದಾಗಿದೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 60 ಲಕ್ಷ ರೂ. ಅನ್ನು ನಿಗದಿಪಡಿಸಲಾಗಿದೆ.

Join Nadunudi News WhatsApp Group