Home Loan: ಈ ರೀತಿಯ ಹೋಮ್ ಲೋನ್ ಪಡೆದವರಿಗೆ ಹೊಸ ನಿಯಮ

ಗೃಹ ನಿರ್ಮಾಣ ಮಾಡುವ ಸಲುವಾಗಿ ಹೋಂ ಲೋನ್‌(Home Loan) ಪಡೆಯಬಹುದೇ ಎಂಬ ಅನುಮಾನ ಕೂಡಾ ಕಾಡುತ್ತದೆ ಇಲ್ಲಿದೆ ಮಾಹಿತಿ

Home Loan Rules: ಅನೇಕ ಸಂಧರ್ಭದಲ್ಲಿ ಜನರು ಜಂಟಿ ಖಾತೆ ತೆರೆಯುತ್ತಾರೆ. ಸಂಘ ಸಂಸ್ಥೆಗಳ ವ್ಯವಹಾರ ಮಾಡುವವರು, ಪೋಷಕರು – ಮಕ್ಕಳು, ಗಂಡ- ಹೆಂಡತಿ ಹೀಗೆ ಅನೇಕರಿ ಜಂಟಿ ಖಾತೆ ತೆರೆಯುತ್ತಾರೆ.ಆದರೆ ಈ ರೀತಿ ಖಾತೆ ಮೂಲಕ ಯಾವುದೇ ದೊಡ್ಡ ಪ್ರಮಾಣದ ಲೋನ್‌ ಪಡೆಯಬಹುದೇ ಎಂಬ ಅನುಮಾನ ಅನೇಕರಿಗೆ ಕಾಡುತ್ತದೆ. ಅದರಲ್ಲಿಯೂ ಗೃಹ ನಿರ್ಮಾಣ ಮಾಡುವ ಸಲುವಾಗಿ ಹೋಂ ಲೋನ್‌(Home Loan) ಪಡೆಯಬಹುದೇ ಎಂಬ ಅನುಮಾನ ಕೂಡಾ ಕಾಡುತ್ತದೆ.

ಮನೆ ಕಟ್ಟುವುದು ಸುಲಭ ಕಾರ್ಯ ಅಲ್ಲ. ಎಷ್ಟೋ ಬಾರಿ ಹಣ ಇದ್ದವರಿಗೂ ಮನೆ ಕಟ್ಟುವ ಸಲುವಾಗಿ ಸಾಲ ಸೂಲ ಮಾಡಿಯಾದರೂ ಮನೆ ಕಟ್ಟಲು ಮುಂದಾಗುತ್ತಾರೆ.ಮನೆ ಕಟ್ಟಲು ಕಟ್ಟಡ ಸಾಮಾಗ್ರಿ ಮರಳು ಇನ್ನಿತರ ಅಂಶಗಳ ಬೆಲೆ ಅಧಿಕವಾಗಿದೆ. ಕೂಲಿ ಆಳುಗಳು ಲಭ್ಯ ಆಗುತ್ತಿಲ್ಲ ಈ ಎಲ್ಲ ಸಮಸ್ಯೆ ನಡುವೆ ಕಟ್ಟಲು ಸೇವಿಂಗ್ ಹಣ ಇಲ್ಲದೆ ಲೋನ್ ಮೊರೆ ಹೊಕ್ಕು ತಿಂಗಳ ಸಂಬಳ ಲೋನ್ ಪಾಲಾಗುವುದಕ್ಕೆ ಪರದಾಟ ಪಡುತ್ತಿದ್ದಾರೆ‌.

Home Loan Rules
Image Source: India Today

ಬ್ಯಾಂಕ್ ಗಳು ಮನೆಕಟ್ಟಲು ಸಾಲ ನೀಡುತ್ತಿದ್ದರೂ ಅಧಿಕಬಡ್ಡಿ ಬರಿಸಲೇ ಬೇಕು. ಗೃಹ ಸಾಲ ಮಾಡುವಾಗ ಒಬ್ಬರಿಗೆ ಹೊರೆಯಾದರೆ ದೀರ್ಘಾವಧಿ ವರೆಗೆ ಸಂಕಷ್ಟ ತಪ್ಪಿದ್ದಲ್ಲ. ಹಾಗಾಗಿ ಈ ವ್ಯವಸ್ಥೆ ಬದಲು ಲೋನ್ ಪಡೆಯುವಾಗಲೇ ಜಂಟಿಯಾಗಿ ಲೋನ್ ಪಡೆದರೆ ಅನೇಕ ಪ್ರಯೋಜನವನ್ನು ಪಡೆಯಬಹುದಾಗಿದೆ.

ಯಾವೆಲ್ಲ ಪ್ರಯೋಜನ ಸಿಗಲಿದೆ?

ಸಾಮಾನ್ಯವಾಗಿ ಸಾಲ ನೀಡುವಾಗ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಬಗ್ಗೆ ತಿಳಿದುಕೊಳ್ಳಲಾಗುತ್ತದೆ. ಹಾಗಾಗಿ ಸಾಲ ನೀಡುವಾಗ ಜಂಟಿ ಸಾಲ ತೆರೆದಾಗ ಇಬ್ಬರ ವೇತನ ಕಂಡು ಸಾಲ ಸೌಲಭ್ಯ ನೀಡುವ ಪ್ರಮಾಣ ಅಧಿಕವಾಗಿ ಇರುತ್ತದೆ.
EMI ಇಬ್ಬರಿಗೂ ಹಂಚಿಕೆ ಆಗೊ ಕಾರಣಕ್ಕೆ ಹೊರೆಯಾಗಲಾರದು. ಹಾಗೂ ಸಾಲ ಬೇಗ ಮರುಪಾವತಿಯಾಗಿ ಋಣಮುಕ್ತರಾಗಬಹುದು.
ಪತಿ ಹಾಗೂ ಪತ್ನಿ ಸೇರಿ ಮನೆ ಕಟ್ಟುವ ಕಾರಣಕ್ಕೆ ಸಾಲ ಪಡೆದರೆ ಆಗ ಮುದ್ರಾಂಕ ಶುಲ್ಕ ಇರಲಾರದು. ಇನ್ನು ಕೆಲ ಭಾಗದಲ್ಲಿ ಕಡಿಮೆ ಮುದ್ರಾಂಕ ಶುಲ್ಕ ಇರಲಿದೆ‌. ದಿಲ್ಲಿ, ಹರಿಯಾಣದಲ್ಲಿ ಮಹಿಳೆಯರಿಗೆ ಮುದ್ರಾಂಕ ಶುಲ್ಕ ವಿನಾಯಿತಿ ಇದೆ.

Join Nadunudi News WhatsApp Group

ಗೃಹಸಾಲದ ಮೇಲೆ ಎರಡು ಲಕ್ಷದ ವರೆಗೆ ತೆರಿಗೆ ವಿನಾಯಿತಿ ಲಭ್ಯ ಇರಲಿದ್ದು ಇಬ್ಬರು ಜಂಟಿಯಾಗಿ ಸಾಲ ಪಡೆದಾಗ ನಾಲ್ಕು ಲಕ್ಷದವರೆಗಿನ ಮೊತ್ತಕ್ಕೆ ತೆರಿಗೆ ಹೊರೆ ಇರಲಾರದು.ಜಂಟಿ ಸಾಲ ಪಡೆಯುವಾಗ ಪುರುಷರ ಬದಲು ಮಹಿಳೆ ಇದ್ದರೆ ಆಗ ನಿಮಗೆ ಬಡ್ಡಿ ಮೊತ್ತ ಕಡಿಮೆ ಇರಲಿದೆ. ಗೃಹಸಾಲಾದ ಮೇಲೆ ಬಡ್ಡಿದರ ಕಮ್ಮಿ ಆಗಲಿದೆ.ಒಟ್ಟಾರೆಯಾಗಿ ಸಂಸಾರ ವನ್ನು ಹೊತ್ತೊಯ್ಯುವ ಪತಿ ಪತ್ನಿ ಜೊತೆಗೆನೆಕಟ್ಟುವ ಖರ್ಚು ನಿಭಾಯಿಸಿದರೆ ಎಲ್ಲವೂ ಸುಗಮವಾಗಲಿದೆ. ಖರ್ಚುಗಳು ಎಲ್ಲಿದ್ದರೂ ಇರುವುದೇ ಆಗಿದ್ದು ಜಂಟಿಯಾದಾಗ ತೆರಿಗೆ ವಿನಾಯಿತಿ ಸಿಗಲಿದೆ.

Home Loan Rules
Image Source: Mint

ಹಾಗಾಇ ನೀವು ಇನ್ನು ಮುಂದೆ ಮನೆ ಕಟ್ಟಲು ಪ್ಲಾನ್‌ ಮಾಡುತ್ತಿದ್ದರೆ ಜಂಟಿ ಖಾತೆ ತೆರೆದು ಜಂಟಿಯಾಗಿ ಲೋನ್‌ ತೆಗೆದುಕೊಳ್ಳಿ ಹಾಗಾದಾಗ ನಿಮಗೆ ಅನೇಕ ಲಾಭಗಳು ಕೂಡಾ ಸಿಗಲಿದೆ. ಅಲ್ಲದೆ ಒಬ್ಬರ ಮೇಲೆ ಬೀಳುವ ಹೊರೆ ಡಿವೈಡ್‌ ಆಗುವುದರಿಂದ ಹೆಚ್ಚು ಆರಾಮದಾಯಕವಾಗಿ ಇಎಂಐ ಪಾವತಿ ಮಾಡಬಹುದಾಗಿದೆ.ಅಲ್ಲದೆ ಕೇವಲ ಗೃಹ ಸಾಲ ಮಾತ್ರವಲ್ಲದೆ ವ್ಯವಹಾರ ಮಾಡುವ ಸಲುವಾಗಿ ಇಬ್ಬರು ಪಾರ್ಟ್‌ ನರ್‌ ಗಳು ಕೂಡಾ ಬ್ಯಾಂಕ್‌ ಲೋನ್‌ ಪಡೆದುಕೊಂಡು ಇದರ ಲಾಭ ಪಡೆಯಬಹುದಾಗಿದೆ.

Join Nadunudi News WhatsApp Group