Tobacco: ಪಾನ್ ಮಸಾಲಾ, ತಂಬಾಕು ತಿನ್ನುವವರಿಗೆ ಇಂದಿನಿಂದ ಹೊಸ ನಿಯಮ, ಸರ್ಕಾರದ ಎಚ್ಚರಿಕೆ.

ಪಾನ್ ಮಸಾಲಾ, ತಂಬಾಕು ತಿನ್ನುವವರಿಗೆ ಎಚ್ಚರಿಕೆ ನೀಡಿದ ಸರ್ಕಾರ.

Tobacco New Rule: ಆಗಸ್ಟ್ ಆರಂಭದಲ್ಲಿ ಅನೇಕ ನಿಯಮಗಳು ಬದಲಾಗಲಿವೆ. ಈಗಾಗಲೇ ಗ್ಯಾಸ್ ಸಿಲಿಂಡರ್, ಬ್ಯಾಂಕ್ ರೂಲ್, ಆದಾಯ ನಿಯಮ ಸೇರಿದಂತೆ ಇನ್ನಿತರ ನಿಯಮಗಳು ಬದಲಾಗಿವೆ. ಜನರು ವ್ಯವಹಾರ ಮಾಡುವ ಮುನ್ನ ಬದಲಾಗಿರುವ ಎಲ್ಲಾ ನಿಯಮದ ಬಗ್ಗೆ ಮಾಹಿತಿ ತಿಳಿಯುವುದು ಸೂಕ್ತ.

ಹಣಕಾಸು ಸಚಿವಾಲಯವು ಇತ್ತೀಚಿಗೆ ಆದಾಯ ತೆರಿಗೆ, ಜಿಎಸ್ ಟಿ ನಿಯಮದಲ್ಲಿ ಬಾರಿ ಬದಲಾವಣೆಯನ್ನು ತಂದಿದೆ. ಈ ಎಲ್ಲಾ ನಿಯಮದ ಬದಲಾವಣೆಯ ಜೊತೆಗೆ ಮತ್ತೊಂದು ನಿಯಮ ಜಾರಿಗೊಳಿಸಲಾಗಿದೆ.

A new rule for tobacco users
Image Credit: Thehindu

ಪಾನ್ ಮಸಾಲಾ ಅಥವಾ ತಂಬಾಕು ಸೇವನೆ
ದೇಶದಲ್ಲಿ ಪಾನ್ ಮಸಾಲಾ (Pan Masaal), ತಂಬಾಕು (Tobacco ) ತಿನ್ನುವವರ ಸಂಖ್ಯೆ ಹೆಚ್ಚಿದೆ. ತಂಬಾಕು ಅಥವಾ ಯಾವುದೇ ರೀತಿಯ ಪಾನ್ ಮಸಾಲಾ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ವಿಚಾರ ಎಲ್ಲರಿಗೆ ತಿಳಿದೇ ಇದೆ. ಆದರೂ ಕೂಡ ಪಾನ್ ಮಸಾಲಾ, ತಂಬಾಕು ತಿನ್ನುವುದನ್ನು ಜನರು ಕಡಿಮೆ ಮಾಡುತ್ತಿಲ್ಲ. ಇನ್ನು ಪಾನ್ ಮಸಾಲಾ, ತಂಬಾಕಿನ ಪ್ಯಾಕೆಟ್ ಗಳಲ್ಲಿ ಇವುಗಳು ಹಾನಿಕಾರಣ ಎಂದು ಸೂಚನೆ ನೀಡಿದ್ದರೂ ಕೂಡ ಇವುಗಳ ಮಾರಾಟ ಹಾಗೂ ಖರೀದಿ ಕಡಿಮೆಯಾಗುತ್ತಿಲ್ಲ.

ಪಾನ್ ಮಸಾಲಾ, ತಂಬಾಕು ತಿನ್ನುವವರಿಗೆ ಇಂದಿನಿಂದ ಹೊಸ ನಿಯಮ
ಇನ್ನು ಕೆಲವು ಪ್ರದೇಶದಲ್ಲಿ ತಂಬಾಕು ಅಥವಾ ಪಾನ್ ಮಸಾಲವನ್ನು ನಿಷೇದಿಸಲಾಗಿದೆ. ಇನ್ನು ಪಾನ್ ಮಸಾಲಾ ಮತ್ತು ತಂಬಾಕಿನ ಮೇಲೆ ಸರ್ಕಾರವು ತೆರಿಗೆಯನ್ನು ಸಂಗ್ರಹಿಸುತ್ತದೆ. ತೆರಿಗೆಯು GST ರೂಪದಲ್ಲಿ ಸರ್ಕಾರಕ್ಕೆ ತಲುಪುತ್ತದೆ. ಇದೀಗ ಹಣಕಾಸು ಸಚಿವಾಲಯ ಪಾನ್ ಮಸಾಲಾ ಮತ್ತು ತಂಬಾಕಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ.

Tobacco New Rule updates
Image Credit: Medical

ಅಕ್ಟೊಬರ್ 1 ರಿಂದ ನಿಯಮದಲ್ಲಿ ಬದಲಾವಣೆ
ಪಾನ್ ಮಸಾಲಾ, ತಂಬಾಕು ಮತ್ತು ಇತರ ರೀತಿಯ ವಸ್ತುಗಳ ರಫ್ತಿನ ಇಂಟಿಗ್ರೇಟೆಡ್ ಜಿಎಸ್ ಟಿಯ ಸ್ವಯಂಚಾಲಿತ ಮರುಪಾವತಿ ಪ್ರಕ್ರಿಯೆ ಅಕ್ಟೊಬರ್ 1 ರಿಂದ ನಿಲ್ಲಲಿದೆ. ಹಣಕಾಸು ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದೆ.

Join Nadunudi News WhatsApp Group

ಸಚಿವಾಲಯ ನೀಡಿದ ಮಾಹಿತಿಯ ಪ್ರಕಾರ, ಎಲ್ಲಾ ವಸ್ತುಗಳ ರಫ್ತುದಾರರು ತಮ್ಮ ಮರುಪಾವತಿ ಹಕ್ಕುಗಳೊಂದಿಗೆ ನ್ಯಾಯವ್ಯಾಪ್ತಿಯ ತೆರಿಗೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ಮತ್ತು ಅವರ ಅನುಮೋದನೆಯನ್ನು ಪಡೆಯಬೇಕಾಗಿದೆ. ತೆರಿಗೆ ವಂಚನೆಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Join Nadunudi News WhatsApp Group