Ads By Google

ಇನ್ನುಮುಂದೆ ಈ ಕೆಲಸಗಳಿಗೆ ಆಧಾರ್ ಕಾರ್ಡ್ ಕೊಡುವ ಅವಶ್ಯಕತೆ ಇಲ್ಲ, ಆಧಾರ್ ಇದ್ದವರಿಗೆ ಗುಡ್ ನ್ಯೂಸ್.

Aadar not important 1
Ads By Google

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಯಾವುದೇ ಕೆಲಸವನ್ನ ಮಾಡಬೇಕು ಅಂದರೂ ಕೂಡ ಅದಕ್ಕೆ ಆಧಾರ್ ಕಾರ್ಡ್ ಅತ್ಯವಶ್ಯಕವಾಗಿ ಬೇಕೇ ಬೇಕು ಎಂದು ಹೇಳಬಹುದು. ಆಧಾರ್ ಕಾರ್ಡ್ ಇಲ್ಲದೆ ಇತೀಚಿನ ದಿನಗಳಲ್ಲಿ ಯಾವುದೇ ಕೆಲಸವನ್ನ ಮಾಡಲು ಸಾಧ್ಯವಿಲ್ಲ ಎಂದು ಹೇಳಬಹುದು. ಸರ್ಕಾರೀ ಕೆಲಸ ಮಾತ್ರವಲ್ಲದೆ ಈಗ ಖಾಸಗಿ ಕೆಲಸಗಳಿಗೂ ಕೂಡ ಆಧಾರ್ ಕಾರ್ಡ್ ಅತ್ಯಾವಶ್ಯವಾಗುತ್ತಿದೆ ಎಂದು ಹೇಳಬಹುದು. ಇನ್ನು ಆಧಾರ್ ಕಾರ್ಡ್ ನಲ್ಲಿ ಒಬ್ಬ ವ್ಯಕ್ತಿಯ ಸಂಪೂರ್ಣ ಮಾಹಿತಿ ಇರುವ ಕಾರಣ ಯಾವುದೇ ಒಂದು ಕೆಲಸವನ್ನ ಮಾಡಬೇಕು ಅಂದರೂ ಕೂಡ ನಮಗೆ ಆಧಾರ್ ಕಾರ್ಡ್ ಅತ್ಯಾವಶ್ಯವಾಗಿ ಬೇಕೇ ಬೇಕು ಎಂದು ಹೇಳಬಹುದು.

ಇನ್ನು ಈಗ ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಇನ್ನುಮುಂದೆ ಈ ಕೆಲಸಗಳಿಗೆ ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲವಾಗಿದೆ. ಹಾಗಾದರೆ ಇನ್ನುಮುಂದೆ ಯಾವ ಯಾವ ಕೆಲಸಗಳಿಗೆ ಆಧಾರ್ ಕಾರ್ಡ್ ಬೇಕಾಗಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ದೇಶದಲ್ಲಿ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ತಲುಪಿಸಿ. ಹೌದು ದೇಶದಲ್ಲಿ ಇನ್ನು ಅನೇಕ ಜನರು ಇನ್ನು ಕೂಡ ಆಧಾರ್ ಕಾರ್ಡ್ ಮಾಡಿಸಿಕೊಳ್ಳದಿರುವ ಕಾರಣ ಕೇಂದ್ರ ಸರ್ಕಾರ ಕೆಲವು ಅಗತ್ಯ ಕೆಲಸಗಳಿಗೆ ಆಧಾರ್ ಅಗತ್ಯವನ್ನ ತೆಗೆದುಹಾಕಿದೆ.

ಇನ್ನು ಕೇಂದ್ರ ಸರ್ಕಾರ ನೀಡಿರುವ ಅಧಿಸೂಚನೆಯ ಪ್ರಕಾರ ಪಿಂಚಣಿದಾರರು ಇನ್ನುಮುಂದೆ ತಮ್ಮ ಲೈಫ್ ಸರ್ಟಿಫಿಕೇಟ್ ಪಡೆಯಲು ಆಧಾರ್ ಕಾರ್ಡ್ ತೋರಿಸುವ ಅಗತ್ಯ ಇರುವುದಿಲ್ಲ. ಇನ್ನು ಇಲ್ಲಿಯತನಕ ಜೀವನ ಪ್ರಮಾಣಪತ್ರವನ್ನ ಸಲ್ಲಿಸಲು ಆಧಾರ್ ಕಾರ್ಡ್ ನಕಲು ಪ್ರತಿಯನ್ನ ನೀಡಬೇಕಾಗಿತ್ತು, ಆದರೆ ಸರ್ಕಾರ ಈಗ ಈ ಭಾದ್ಯತೆಯನ್ನ ರದ್ದು ಮಾಡಿದೆ. ಇನ್ನು ಇದರ ಜೊತೆಗೆ ಇನ್ನುಮುಂದೆ ಸಂದೇಶ್ ಆಯಪ್ ಮತ್ತು ಸರ್ಕಾರಿ ಕಚೇರಿಗಳ ಬಯೋಮೆಟ್ರಿಕ್ಸ್ ಹಾಜರಾತಿ ವ್ಯವಸ್ಥೆಗೆ ಆಧಾರ್ ಇನ್ನು ಮುಂದೆ ಅಗತ್ಯವಿರುವುದಿಲ್ಲ.

ಹೌದು ದೇಶದ ಕೋಟ್ಯಂತರ ಪಿಂಚಣಿದಾರರಿಗೆ ಜೀವ ಪ್ರಮಾಣಪತ್ರಕ್ಕಾಗಿ ಆಧಾರ್ ಅಗತ್ಯವನ್ನು ಸರ್ಕಾರ ರದ್ದುಪಡಿಸಿದೆ. ಇನ್ನುಮುಂದೆ ಅಧಿಕಾರಿಗಳು ಪಿಂಚಣಿದಾರರ ಬಳಿ ಆಧಾರ್ ಕಾರ್ಡ್ ಕಾರ್ಡ್ ಕೇಳುವ ಹಾಗಿಲ್ಲ ಮತ್ತು ಪಿಂಚಣಿದಾರರು ಬಯಸಿದರೆ ಮಾತ್ರ ಅವರಿಂದ ಆಧಾರ್ ಕಾರ್ಡ್ ಪ್ರತಿಯನ್ನ ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಾತಿಗಾಗಿ ಸಂದೇಶ್ ಆಯಪ್ ಕಡ್ಡಾಯಗೊಳಿಸಲಾಗಿದೆ, ಆದರೆ ಈಗ ಇದಕ್ಕಾಗಿ ಸಹ ಆಧಾರ್ ಪರಿಶೀಲನೆಯನ್ನು ಸ್ವಯಂಪ್ರೇರಿತವಾಗಿ ಮಾಡಲಾಗಿದೆ. ಸ್ನೇಹಿತರೆ ಈ ಮಾಹಿತಿಯನ್ನ ದೇಶದಲ್ಲಿ ಆಧಾರ್ ಕಾರ್ಡ್ ಬಳಕೆ ಮಾಡುತ್ತಿರುವ ಎಲ್ಲರಿಗೂ ತಲುಪಿಸಿ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field