Aadhaar: ಆಧಾರ್ ಕಾರ್ಡ್ ಇದ್ದವರು ಈ ಕೆಲಸ ಮಾಡುವುದು ಕಡ್ಡಾಯ, ಕೇಂದ್ರದ ಸರ್ಕಾರದ ಮಾರ್ಗಸೂಚಿ.

ಆಧಾರ್ ಕಾರ್ಡ್ ಇದ್ದವರು ಮನೆಯಲ್ಲಿ ಕುಳಿತುಕೊಂಡು ಆಧಾರ್ ಕಾರ್ಡ್ ಅಪ್ಡೇಟ್ ಮಾಡಬಹುದು.

Aadhaar Address Change Process: ಇತ್ತೀಚಿನ ದಿನಗಳಲ್ಲಿ ಯುಐಡಿಎಐ (UIDAI) ಆಧಾರ್ ಕಾರ್ಡ್ (Aadhaar Card) ಸಂಭಂದಿತ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ಆಧಾರ್ ಕಾರ್ಡ್ ವ್ಯಕ್ತಿಯ ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ. ಇತ್ತೀಚೆಗಂತೂ ಆಧಾರ್ ಕಾರ್ಡ್ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾಗಿದೆ. ಎಲ್ಲಾ ಯೋಜನೆಗಳ ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್ ಬಹುಮುಖ್ಯ.

ಇನ್ನು ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ಸಣ್ಣ ತಪ್ಪಿದ್ದರು ಕೂಡ ಅರ್ಜಿ ಸಲ್ಲಿಕೆಗೆ ಅಥವಾ ಯಾವುದೇ ರೀತಿಯ ಕೆಲಸಗಳಿದು ಅದು ಅಡ್ಡಿ ಉಂಟುಮಾಡುತ್ತದೆ. ಹೀಗಾಗಿ ಆಧಾರ್ ನಲ್ಲಿ ಯಾವುದೇ ತಪ್ಪಿದ್ದರು ಕೂಡ ಅದನ್ನು ಬದಲಿಸಿಕೊಳ್ಳುವುದು ಸೂಕ್ತ.

ಇನ್ನು ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ತಪ್ಪಿದ್ದಲ್ಲಿ ನೀವು ಮನೆಯಲ್ಲಿ ಕುಳಿತು ಆಧಾರ್ ನಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು. ಈ ಸುಲಭ ವಿಧಾನದ ಮೂಲಕ ಆಧಾರ್ ತಿದ್ದುಪಡಿಯನ್ನು ನೀವು ಮನೆಯಲ್ಲಿಯೇ ಮಾಡಬಹುದು.

How to Change Address in Aadhaar Card
Image Credit: News18

ಆಧಾರ್ ಕಾರ್ಡ್ ನಲ್ಲಿನ ವಿಳಾಸ ಬದಲಾವಣೆ
ಆಧಾರ್ ಕಾರ್ಡ್ ನಲ್ಲಿ ಹೆಚ್ಚಾಗಿ ವಿಳಾಸದ ಮಾಹಿತಿಯಲ್ಲಿ ತಪ್ಪಾಗುತ್ತದೆ. ಆಧಾರ್ ಹೊಂದಿರುವವರು ಕೆಲವು ಬಾರಿ ತಾವು ವಾಸವಿರುವ ಸ್ಥಳವನ್ನು ಬದಲಾಯಿಸುತ್ತಲೇ ಇರುತ್ತಾರೆ. ಹೀಗಾಗಿ ಪ್ರಸ್ತುತ ವಾಸವಿರುವ ವಿಳಾಸದಾದ ಬಗ್ಗೆಯೇ ಆಧಾರ್ ನಲ್ಲಿ ಮಾಹಿತಿ ಇರಬೇಕಾಗುತ್ತದೆ. ಇನ್ನು ಆಧಾರ್ ನಲ್ಲಿನ ವಿಳಾಸ ಬದಲಾವಣೆ ಆನ್ಲೈನ್ ಹಾಗೂ ಆಫ್ಲೈನ್ ನಲ್ಲಿಯೂ ಸಾಧ್ಯವಾಗುತ್ತದೆ. ಆಧಾರ್ ನಲ್ಲಿನ ವಿಳಾಸವನ್ನು ನೀವು ಎಷ್ಟು ಬಾರಿ ಬೇಕಾದರೂ ಬದಲಿಸಿಕೊಳ್ಳಬಹುದು. ವಿಳಾಸ ಬದಲಾವಣೆಗೆ ಯುಐಡಿಎಐ ಯಾವುದೇ ಮಿತಿಯನ್ನು ಅಳವಡಿಸಿಲ್ಲ.

ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸುವ ವಿಧಾನ
* https://myaadhaar.uidai.gov.in / ನಲ್ಲಿ ಲಾಗಿನ್ ಮಾಡಬೇಕು.

Join Nadunudi News WhatsApp Group

*ಅಲ್ಲಿ ಡಾಕ್ಯುಮೆಂಟ್ ಅಪ್ಡೇಟ್ ಆಯ್ಕೆ ಕಾಣುತ್ತದೆ. ಅಲ್ಲಿ ನಿಮ್ಮ ಆಧಾರ್ ವಿವರವನ್ನು ನೀಡಲಾಗುತ್ತದೆ.

*ವಿವರಗಳನ್ನು ಪರಿಶೀಲಿಸಿದ ನಂತರ ಹೈಪರ್ ಲಿಂಕ್ ಅನ್ನು ಆಯ್ಕೆ ಮಾಡಬೇಕು.

Aadhaar Address Change Process
Image Credit: Economictimes

*ಡ್ರಾಫ್ ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಆಯ್ಕೆ ಮಾಡಬೇಕು

*ನಂತರ ಸ್ಕಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಿ ನಂತರ ಶುಲ್ಕ ಪಾವತಿ ಆಯ್ಕೆ ಆರಿಸಬೇಕು.

*ನೀವು ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ನಿಮ್ಮ ವಿಳಾಸವನ್ನು ಸುಲಭವಾಗಿ ಬದಲಿಸಿಕೊಳ್ಳಬಹುದು.

Join Nadunudi News WhatsApp Group