Aadhaar Authentication: ಇನ್ನುಮುಂದೆ ಇವರನ್ನ ಭೇಟಿಮಾಡಲು ಆಧಾರ್ ದೃಡೀಕರಣ ಕಡ್ಡಾಯ, ಕೇಂದ್ರದ ಇನ್ನೊಂದು ಘೋಷಣೆ.
ಆಧಾರ್ ಕಾರ್ಡ್ ದೃಡೀಕರಣದ ವಿಷಯವಾಗಿ ಇನ್ನೊಂದು ಆದೇಶ ಹೊರಡಿಸಿದ ಕೇಂದ್ರ ಸರ್ಕಾರ.
Aadhaar Authentication Mandatory For Prisoners And Visitors: ಇದೀಗ ಜೈಲಿನಲ್ಲಿನ ಕೈದಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗುರುತಿನ ವಂಚನೆಯನ್ನು ತಡೆಯಲು ಗೃಹ ಸಚಿವಾಲಯ (Ministry of Home Affairs) ಮಹತ್ವದ ಕ್ರಮವನ್ನು ತೆಗೆದುಕೊಂಡಿದೆ. ಕೈದಿಗಳ ಭದ್ರತೆ ಮತ್ತು ಸುರಕ್ಷತೆಯನ್ನು ಬಲಪಡಿಸುವ ಸರ್ಕಾರದ ಉಪಕ್ರಮದ ಭಾಗವಾಗಿ ಎಲ್ಲಾ ಕೈದಿಗಳು ಮತ್ತು ಸಂದರ್ಶಕರು ಈಗ ತಮ್ಮ Aadhaar Digital ID ಬಳಸಿಕೊಂಡು ಆ ಪ್ರಕಾರ ದೃಢೀಕರಣವನ್ನು ಪಡೆದುಕೊಳ್ಳಬೇಕಿದೆ.
ದೇಶಾದ್ಯಂತ ಸುಮಾರು 1,300 ಜೈಲುಗಳಲ್ಲಿ ಬಂಧಿಯಾಗಿರುವ ಕೈದಿಗಳು ಮತ್ತು ಅವರನ್ನು ನೋಡಲು ಬರುವ ಸಂದರ್ಶಕರನ್ನು ಆಧಾರ್ ದೃಢೀಕರಣಕ್ಕೆ ಒಳಪಡಿಸುವಂತೆ ಗೃಹ ಸಚಿವಾಲಯ ಉಪಕ್ರಮವವೊಂದನ್ನು ಜಾರಿಗೆ ತಂದಿದೆ. ಇದರ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಕೈದಿಗಳು ಮತ್ತು ಸಂದರ್ಶಕರಿಗೆ ಆಧಾರ್ ದೃಢೀಕರಣ ಕಡ್ಡಾಯ
MHA ಕೈದಿಗಳ ಸುರಕ್ಷಿತ ಪಾಲನೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಜೈಲು ಕೈದಿಗಳು ಮತ್ತು ಅವರ ಸಂದರ್ಶಕರ ಆಧಾರ್ ದೃಢೀಕರಣವನ್ನು ಬಳಸಿಕೊಳ್ಳುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿತ್ತು. ರಾಷ್ಟ್ರೀಯ ಮಾಹಿತಿ ಕೇಂದ್ರದ (NIC) ಇಪ್ರಿಸನ್ಸ್ ತಂಡವು ಕೈದಿಗಳ ಭದ್ರತೆ ಮತ್ತು ಸುರಕ್ಷತೆಗಾಗಿ ಇಪ್ರೈಸನ್ಸ್ (ePrisons) ಪ್ಲಾಟ್‌ಫಾರ್ಮ್ ಮೂಲಕ ಕೈದಿಗಳು ಮತ್ತು ಸಂದರ್ಶಕರ ಆಧಾರ್ ದೃಢೀಕರಣಕ್ಕಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ದಾಖಲೆಯನ್ನು ಅಭಿವೃದ್ಧಿಪಡಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.
ಮಾರ್ಗಸೂಚಿಗಳಿಗೆ ಜೈಲು ಅಧಿಕಾರಿಗಳು ಬದ್ಧರಾಗಿರಬೇಕು
*ಸೆಪ್ಟೆಂಬರ್ 29, 2023 ರ ಅಧಿಸೂಚನೆಯ ದೃಢೀಕರಣ ಪ್ರಕ್ರಿಯೆಯು ಸ್ವಯಂಪ್ರೇರಿತ ಆಧಾರದ ಮೇಲೆ ಇರುತ್ತದೆ ಹಾಗೆ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳ ಜೈಲು ಅಧಿಕಾರಿಗಳು ಕಾಲಕಾಲಕ್ಕೆ ಕೇಂದ್ರ ಸರ್ಕಾರವು ನಿಗದಿಪಡಿಸಿದಂತೆ ಆಧಾರ್ ದೃಢೀಕರಣದ ಬಳಕೆಯ ಎಲ್ಲಾ ಸಂಬಂಧಿತ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
*ಭಾರತದ ಕೇಂದ್ರ ಸರ್ಕಾರವು ನಿಗದಿಪಡಿಸಿದ ಆಧಾರ್ ದೃಢೀಕರಣದ ಬಳಕೆಯ ಕುರಿತಾದ ಮಾರ್ಗಸೂಚಿಗಳಿಗೆ ಜೈಲು ಅಧಿಕಾರಿಗಳು ಬದ್ಧರಾಗಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
*ವರ್ಷದ ಆರಂಭದಲ್ಲಿ ಕೈದಿಗಳು ಮತ್ತು ಸಂದರ್ಶಕರ ಆಧಾರ್ ದೃಢೀಕರಣವನ್ನು ಸ್ವಯಂಪ್ರೇರಿತವಾಗಿ ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಸಚಿವಾಲಯ ನೀಡಿದೆ.
*ಕೈದಿಗಳು ಮತ್ತು ಸಂದರ್ಶಕರಿಗೆ ಕ್ರಮವಾಗಿ ಮಾರ್ಚ್ 6 ಮತ್ತು ಸೆಪ್ಟೆಂಬರ್ 29 ರಂದು ಆಧಾರ್ ದೃಢೀಕರಣವನ್ನು ನಡೆಸಲು ಜೈಲು ಇಲಾಖೆಗಳಿಗೆ ಸಚಿವಾಲಯ ಅನುಮತಿ ನೀಡಿದೆ.
ಆಧಾರ್ ಅಂಥೆಟಿಕೇಷನ್ ಮೂಲಕ ಕಾರ್ಯ ಸುಲಭ
ಕೈದಿಗಳು ಮತ್ತು ಅವರ ಸಂದರ್ಶಕರನ್ನು ದೃಢೀಕರಿಸುವ ಕ್ರಮದ ಬಗ್ಗೆ ಮಾತನಾಡಿದ MHA “ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಜೈಲು ಭದ್ರತೆಯು ಎಲ್ಲಾ ರಾಜ್ಯಕ್ಕೆ ನಿರ್ಣಾಯಕ ಸಮಸ್ಯೆಗಳಲ್ಲಿ ಒಂದಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೈದಿಗಳ ಸಂಖ್ಯೆಯೊಂದಿಗೆ, ಜೈಲು ಅಧಿಕಾರಿಗಳು ಅವರನ್ನು ನಿರ್ವಹಿಸುವ ಮತ್ತು ಅವರ ದಾಖಲೆಗಳನ್ನು ಗುರುತಿಸುವಲ್ಲಿ ಹೆಣಗಾಡುತ್ತಿದ್ದಾರೆ, ಹೀಗಾಗಿ ಆಧಾರ್ ಅಂಥೆಟಿಕೇಷನ್ ಮೂಲಕ ಇದನ್ನು ಸುಲಭ ಮಾಡಲು ಉಪಕ್ರಮವನ್ನು ತೆಗೆದುಕೊಳ್ಳಾಗಿದೆ” ಎಂದು ಹೇಳಿದ್ದಾರೆ.