Aadhaar Authentication: ಮನೆಯಲ್ಲಿ LPG ಗ್ಯಾಸ್ ಬಳಸುವವರಿಗೆ ಹೊಸ ರೂಲ್ಸ್, ಈ ಕೆಲಸ ಮಾಡದಿದ್ದರೆ LPG ರದ್ದು
LPG ಬಳಕೆದಾರರಿಗೆ ಆಧಾರ್ ದೃಡೀಕರಣ ಸಕ್ರಿಯಗೊಳಿಸಿದ ಸರ್ಕಾರ
Aadhaar Authentication Update: ಸದ್ಯ ಕೇಂದ್ರದ ಮೋದಿ ಸರ್ಕಾರ ದೇಶದ ಜನತೆಗಾಗಿ ಉಜ್ವಲ ಯೋಜನೆಯಡಿ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ನೀಡುತ್ತಿದೆ. ದೇಶದ ಲಕ್ಷಾಂತರ ಜನರು ಈ ಯೋಜನೆಯಡಿ ಸಬ್ಸಿಡಿ ದರದಲ್ಲಿ LPG ಗ್ಯಾಸ್ ಸಿಲಿಂಡರ್ ಅನ್ನು ಪಡೆಯುತ್ತಿದ್ದಾರೆ.
ಸದ್ಯ ಕೇಂದ್ರ ಸರ್ಕಾರ ಈ ಯೋಜನೆಯಡಿ LPG ಗ್ಯಾಸ್ ಸಿಲಿಂಡರ್ ಪಡೆಯುತ್ತಿರುವವರಿಗೆ ಬಿಗ್ ಅಪ್ಡೇಟ್ ಹೊರಡಿಸಿದೆ. LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಹೊಸ ನಿಯಮವನ್ನು ರೂಪಿಸಿದೆ ಎನ್ನಬಹುದು. ಕೇಂದ್ರ ಈ ಹೊಸ ನಿಯಮದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಪಹಲ್ ಮತ್ತು ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಬಿಗ್ ನ್ಯೂಸ್
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ LPG ಗ್ರಾಹಕರಿಗೆ ಆಧಾರ್ ದೃಢೀಕರಣವನ್ನು ಸರ್ಕಾರ ಸಕ್ರಿಯಗೊಳಿಸಿದೆ. ಸರ್ಕಾರದ ಪ್ರಕಾರ, ವಿವಿಧ ಯೋಜನೆಗಳ ಪ್ರಯೋಜನಗಳು ಅರ್ಹ ಮತ್ತು ಉದ್ದೇಶಿತ ಫಲಾನುಭವಿಗಳಿಗೆ ತಲುಪುವುದನ್ನು ಈ ದೃಡೀಕರಣವು ಖಚಿತಪಡಿಸುತ್ತದೆ. ಪಹಲ್ ಯೋಜನೆಯಡಿ ಮನೆಯ ಬಡ ಮಹಿಳೆಯರಿಗೆ ಉಚಿತ LPG ಸಂಪರ್ಕ ನೀಡಲಾಗುತ್ತದೆ. ಹೆಚ್ಚುವರಿಯಾಗಿ, 14.2 ಕೆಜಿಗೆ ಸಮಾನವಾದ ದೇಶೀಯ LPG ಯ 12 ಮರುಪೂರಣಗಳಿಗೆ ರೂ.300 ಸಬ್ಸಿಡಿ ನೀಡಲಾಗುತ್ತದೆ. ಇದು ಉದ್ದೇಶಿತ ಫಲಾನುಭವಿಗಳಿಗೆ ಪ್ರಯೋಜನಗಳ ವಿತರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಹೇಳಿದೆ.
LPG ಬಳಕೆದಾರರಿಗೆ ಆಧಾರ್ ದೃಡೀಕರಣ ಸಕ್ರಿಯಗೊಳಿಸಿದ ಸರ್ಕಾರ
ಸದ್ಯ ಕೇಂದ್ರ ಸರ್ಕಾರ ಪಹಲ್ ಮತ್ತು ಉಜ್ವಲ ಯೋಜನೆಯ LPG ಸಿಲಿಂಡರ್ ಗ್ರಾಹಕರಿಗೆ ಆಧಾರ್ ದೃಡೀಕರಣವನ್ನು ಸಕ್ರಿಯಗೊಳಿಸಿದೆ. ಆಧಾರ್ ದೃಢೀಕರಣವು ವಿವಿಧ ಯೋಜನೆಗಳ ಪ್ರಯೋಜನಗಳು ಅರ್ಹ ಮತ್ತು ಉದ್ದೇಶಿತ ಫಲಾನುಭವಿಗಳಿಗೆ ತಲುಪುವುದನ್ನು ಖಚಿತಪಡಿಸುವ ಒಂದು ಹಂತವಾಗಿದೆ. ವಿವಿಧ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMC ಗಳು) ಒದಗಿಸಿದ ಮೊಬೈಲ್ ಅಪ್ಲಿಕೇಶನ್ ಗಳನ್ನು ಬಳಸಿಕೊಂಡು ಇದನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಇದರಿಂದಾಗಿ ದೃಡೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಗ್ರಾಹಕರಿಗೆ ಸುಲಭವಾಗುತ್ತದೆ. ಗ್ರಾಹಕರು ತಮ್ಮ ಸಿಲಿಂಡರ್ ವಿತರಣೆಯ ಸಮಯದಲ್ಲಿ ಬಯೋಮೆಟ್ರಿಕ್ ಆಧಾರ್ ದೃಡೀಕರಣವನ್ನು ಪೂರ್ಣಗೊಳಿಸಬಹುದು. ನೀವು ಇನ್ನೂ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಮಾಡದಿದ್ದರೆ, ನೀವು LPG ವಿತರಕರ ಶೋರೂಮ್ ಗೆ ಭೇಟಿ ನೀಡಿ ಅಥವಾ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಬಹುದು.