Aadhaar Lock: ಆಧಾರ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಬೇಕು, ಆಧಾರ್ ವಿಷಯವಾಗಿ ಕೇಂದ್ರದ ಘೋಷಣೆ.
ಆಧಾರ್ ಹೊಂದಿರುವ ಎಲ್ಲರು ಈ ನಿಯಮವನ್ನು ಪಾಲಿಸುವ ಮೂಲಕ ವಂಚನೆಯಿಂದ ತಪ್ಪಿಸಿಕೊಳ್ಳಬಹುದು.
Aadhaar Biometric Lock And Unlock: ಸದ್ಯ ದೇಶದಲ್ಲಿ Aadhaar card ಮುಖ್ಯವಾಗಿದೆ. ದೇಶದ ಪ್ರತಿ ಪ್ರಜೆ ಕೂಡ ಆಧಾರ್ ಕಾರ್ಡ್ ಅನ್ನು ಹೊಂದುವದು ಕಡ್ಡಾಯವಾಗಿದೆ. ಇತ್ತೀಚೆಗಂತೂ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಅನೇಕಾ ನಿಯಮವನ್ನು ಜಾರಿಗೊಳಿಸುತ್ತಿದೆ.
ಆಧಾರ್ ಮೂಲಕ ಜನಸಾಮಾನಿರಿಗೆ ಯಾವುದೇ ತೋಂದರೆ ಆಗಬಾರದು ಎನ್ನುವ ದೃಷ್ಟಿಯಲ್ಲಿ ಸರ್ಕಾರ ಆಧಾರ್ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಸದ್ಯ ದೇಶದಲ್ಲಿ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ವಂಚನೆಗೂ ಕೂಡ ಹೆಚ್ಚುತ್ತಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ವಂಚಕರು ವಿವಿಧ ರೀತಿಯಲ್ಲಿ ಜನರನ್ನು ಮೋಸ ಮಾಡುತ್ತಿದ್ದಾರೆ.
ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಜಾರಿಗೆ ಬಂತು ಹೊಸ ರೂಲ್ಸ್
ವಂಚಕರು ಮೋಸ ಮಾಡಲು ಒಂದು ವಿಧದಲ್ಲಿ ಆಧಾರ್ ಕಾರ್ಡ್ ಅನ್ನು ಕೂಡ ಬಳಸಿಕೊಳ್ಳುತ್ತಿದ್ದಾರೆ ಎನ್ನಬಹುದು. ಹೀಗಾಗಿ ಆಧಾರ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಬಹಳ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಆಧಾರ್ ಕಾರ್ಡ್ ನ ಸಣ್ಣ ಮಾಹಿತಿ ಇಟ್ಟುಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಕೆಲಸಕ್ಕೆ ವಂಚಕರು ಕೈಹಾಕಬಹುದು.
ಆಧಾರ್ ನಲ್ಲಿ ವ್ಯಕ್ತಿಯ ಎಲ್ಲ ವೈಯಕ್ತಿಕ ಮಾಹಿತಿ ಇರುತ್ತದೆ. ಹೀಗಾಗಿ ವಂಚಕರು ಹೆಚ್ಚಾಗಿ ಆಧಾರ್ ಮಾಹಿತಿಯನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಾರೆ. ಸದ್ಯ ಹೆಚ್ಚುತ್ತಿರುವ ವಂಚನೆಗೆ ಬ್ರೇಕ್ ಹಾಕಲು ಸರ್ಕಾರ ಆಧಾರ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್ ಪರಿಚಯಿಸಿದೆ. ಆಧಾರ್ ಹೊಂದಿರುವ ಎಲ್ಲರು ಈ ನಿಯಮವನ್ನು ಪಾಲಿಸುವ ಮೂಲಕ ವಂಚನೆಯಿಂದ ತಪ್ಪಿಸಿಕೊಳ್ಳಬಹುದು.
ನೀವು ವಂಚನೆಯಿಂದ ತಪ್ಪಿಸಿಕೊಳ್ಳಲು ತಕ್ಷಣ ಈ ಕೆಲಸ ಮಾಡಿ
ಸದ್ಯ ದೇಶದಲ್ಲಿ ಎಲ್ಲ ಕೆಲಸಗಳಿಗೂ ಆಧಾರ್ ಮುಖ್ಯವಾಗಿದೆ. ಆಧಾರ್ ನ ಜೊತೆಗೆ ಕೆಲವು ಕಡೆ ಬೆರಳಚ್ಚನ್ನು (Biometric) ನೀಡುವುದು ಕಡ್ಡಾಯವಾಗಿದೆ. ಸದ್ಯ ವಂಚಕರು ಇದನ್ನೇ ದುರುಪಯೋಗಪಡಿಸಿಕೊಳ್ಳಲು ಹೊಂಚು ಹಾಕುತ್ತಿದ್ದಾರೆ.
ವ್ಯಕ್ತಿಯ ಬೆರಳಚ್ಚನ್ನು ದುರುಪಯೋಗಪಡಿಸಿಕೊಂಡು ಹಣವನ್ನು ವಂಚನೆ ಮಾಡಲಾಗುತ್ತಿದೆ. ಈ ವಂಚನೆಯನ್ನು ತಪ್ಪಿಸಿಕೊಳ್ಳಲು ನೀವು ನಿಮ್ಮ Biometric ಅನ್ನು Lock ಮಾಡುವುದು ಉತ್ತಮ. ನೀವು ಆನ್ಲೈನ್ ನಲ್ಲಿಯೇ ಸುಲಭವಾಗಿ ನಿಮ್ಮ Biometric ಅನ್ನು ಸಕ್ರಿಯಗೊಳಿಸಿಕೊಳ್ಳಬಹುದು. My Aadhaar Portal ಗೆ ಲಾಗಿನ್ ಆಗುವ ಮೂಲಕ ನೀವು ಸುಲಭವಾಗಿ ನಿಮ್ಮ Aadhaar Lock ಅಥವಾ Unlock ಮಾಡಬಹುದು.