Aadhaar Update Rule: ಆಧಾರ್ ಕಾರ್ಡ್ ವಿಷಯವಾಗಿ ಹೊಸ ನಿಯಮ ಜಾರಿಗೆ ತಂದ ಕೇಂದ್ರ, ಇನ್ನುಮುಂದೆ ಒಮ್ಮೆ ಮಾತ್ರ ಅವಕಾಶ.
ಆಧಾರ್ ಕಾರ್ಡ್ ನಲ್ಲಿ ಇನ್ನುಮುಂದೆ ಈ ಮಾಹಿತಿ ಒಮ್ಮೆ ಮಾತ್ರ ಬದಲಾಯಿಸಬಹುದು.
Aadhaar Card Address Change Latest Update: ಸದ್ಯ ದೇಶದಲ್ಲಿ Aadhaar card ಮುಖ್ಯ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ದೇಶದ ಪ್ರತಿ ಪ್ರಜೆ ಕೂಡ ಆಧಾರ್ ಕಾರ್ಡ್ ಅನ್ನು ಹೊಂದುವದು ಕಡ್ಡಾಯವಾಗಿದೆ. ಇತ್ತೀಚೆಗಂತೂ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಅನೇಕ ನಿಯಮವನ್ನು ಜಾರಿಗೊಳಿಸುತ್ತಿದೆ.
ಆಧಾರ್ ಮೂಲಕ ಜನಸಾಮಾನ್ಯರಿಗೆ ಯಾವುದೇ ತೋಂದರೆ ಆಗಬಾರದು ಎನ್ನುವ ದೃಷ್ಟಿಯಲ್ಲಿ ಸರ್ಕಾರ ಆಧಾರ್ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಸದ್ಯ ದೇಶದಲ್ಲಿ ತಂತ್ರಜ್ಞಾನದ ಬೆಳವಣಿಗೆಯ ಜೊತೆಗೆ ವಂಚನೆಗೂ ಕೂಡ ಹೆಚ್ಚುತ್ತಿದೆ.
ಆಧಾರ್ ಕಾರ್ಡ್ ಹೊಂದಿರುವವರಿಗೆ ಬಿಗ್ ಅಪ್ಡೇಟ್
ಇನ್ನು ಎಲ್ಲಾ ಕೆಲಸಗಳಿಗೆ ಆಧಾರ್ ಕಾರ್ಡ್ ಮುಖ್ಯ ದಾಖಲೆಯಾಗಿರುವ ಕಾರಣ ಆಧಾರ್ ನ ಮಾಹಿತಿಯಲ್ಲಿ ಯಾವುದೇ ತಪ್ಪಿರಬಾರದು. ಹೀಗಾಗಿ ನೀವು ನಿಮ್ಮ ಆಧಾರ್ ಮಾಹಿತಿಯಲ್ಲಿ ತಪ್ಪಿದ್ದರೆ ಇಂದೇ ಸರಿಪಡಿಸಿಕೊಳ್ಳಿ. ಆದರೆ ನಿಮ ಆಧಾರ್ ನಲ್ಲಿ ಮಾಹಿತಿ ತಿದ್ದುಪಡಿಗೆ ಅದರದ್ದೇ ಆದ ನಿಯಮಗಳಿರುತ್ತದೆ.ನೀವು ಮಿತಿಗಿಂತ ಆಧಾರ್ ನಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಲು UIDAI ಅವಕಾಶ ನೀಡುವುದಿಲ್ಲ. ಇದೀಗ ಆಧಾರ್ ನಲ್ಲಿ ಯಾವ ಯಾವ ಮಾಹಿತಿ ಬಲಾವಣೆಗೆ ಮಿತಿಯನ್ನು ಅಳವಡಿಸಲಾಗಿದೆ..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಆಧಾರ್ ಕಾರ್ಡ್ ವಿಷಯವಾಗಿ ಹೊಸ ನಿಯಮ ಜಾರಿಗೆ ತಂದ ಕೇಂದ್ರ
ಇನ್ನು ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆನ್ಲೈನ್ ನಲ್ಲಿ ಸಾಕಷ್ಟು ಮಾರ್ಗಗಳಿವೆ. ಇನ್ನು ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ ಸಾಮಾನ್ಯವಾಗಿ ಕೆಲವು ತಪ್ಪುಗಳು ಆಗುತ್ತವೆ.
ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿಯಲ್ಲಿ ತಪ್ಪಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ಮಾಹಿತಿ ತಪ್ಪಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ UIDAI ಸೂಚನೆ ನೀಡಿದೆ. ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ಬಯೋಮೆಟ್ರಿಕ್, ಪಿಂಗರ್ ಫ್ರಿನ್ಟ್ ಹಾಗೂ ಫೋಟೋವನ್ನು ಕೂಡ ನವೀಕರಿಸಬಹುದು.
ಆಧಾರ್ ನಲ್ಲಿನ ಮಾಹಿತಿ ಬದಲಾವಣೆಗೆ ಇನ್ನುಮುಂದೆ ಒಮ್ಮೆ ಮಾತ್ರ ಅವಕಾಶ
*ಆನ್ಲೈನ್ ನ ಮುಕಾಂತರ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ ಹಾಗೂ ಹೆಸರನ್ನು ಬದಲಾವಣೆಯನ್ನು ಕೂಡ ಮಾಡಬಹುದು. ಆಧಾರ್ ಕಾರ್ಡ್ ನಲ್ಲಿನ ಲಿಂಗ ಬದಲಾವಣೆ ಒಮ್ಮೆ ಮಾತ್ರ ಮಾಡಲು ಸಾಧ್ಯ.
*ಆದರೆ ಜನ್ಮ ದಿನಾಂಕ ಮತ್ತು ಹೆಸರಿನ ಬದಲಾವಣೆಯನ್ನು ಎರಡು ಭಾರಿ ಮಾತ್ರ ಮಾಡಲು ಸಾಧ್ಯ.
*ಇನ್ನು ಆಧಾರ್ ನಲ್ಲಿನ ವಿಳಾಸ ಬದಲಾವಣೆ ಹೆಚ್ಚಿನ ಜನರು ಮಾಡುತ್ತಾರೆ. ಆಧಾರ್ ವಿಳಾಸ ಬದಲಾವಣೆಗೆ UIDAI ಯಾವುದೇ ಮಿತಿ ನಿಗದಿಪಡಿಸಿಲ್ಲ.
*ಇನ್ನು ಮೊಬೈಲ್ ಸಂಖ್ಯೆಯ ಬದಲಾವಣೆಗೆ ಯಾವುದೇ ಮಿತಿ ಇಲ್ಲ. ಮಿತಿಗಿಂತ ಹೆಚ್ಚು ಬಾರಿ ಮಾಹಿತಿಯನ್ನು ಬದಲಿಸುವ ಅಗತ್ಯವಿದ್ದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಬದಲಿಸಿಕೊಳ್ಳಬಹುದು.