Aadhar Link: BPL ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್, ಸೆಪ್ಟೆಂಬರ್ ತನಕ ಈ ರೇಷನ್ ಉಚಿತ.

ಈ ಚಿಕ್ಕ ಕೆಲಸ ಮಾಡಿದರೆ ಸೆಪ್ಟೆಂಬರ್ ತನಕ ಈ ಎಲ್ಲಾ ರೇಷನ್ ಧಾನ್ಯ ಉಚಿತ

Aadhar Link For Ration Card: ಸರ್ಕಾರವು ‘ಒಂದು ರಾಷ್ಟ್ರ-ಒಂದು ಪಡಿತರ ಚೀಟಿ’ ಎಂದು ಘೋಷಿಸಿದಾಗಿನಿಂದ, ಪಡಿತರ ಚೀಟಿಯನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಒಂದಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಜನರು ವಿವಿಧೆಡೆ ಉಚಿತ ಪಡಿತರ ಚೀಟಿಯ ಲಾಭ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸರ್ಕಾರಕ್ಕೆ ಬಂದಿದೆ.

ಇಂತಹ ಪರಿಸ್ಥಿತಿಯಲ್ಲಿ ಇದನ್ನು ತಡೆಯುವ ನಿಟ್ಟಿನಲ್ಲಿ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಒತ್ತು ನೀಡಲಾಗುತ್ತಿದೆ. ಸದ್ಯ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಈ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದಾರೆ.

Aadhar Link For Ration Card
Image Credit: Quora

BPL ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್
ನೀವು ಪಡಿತರ ಚೀಟಿ ಅಥವಾ ಆಹಾರ ಸಬ್ಸಿಡಿ ಖಾತೆಯೊಂದಿಗೆ ನಿಮ್ಮ ಆಧಾರ್ ಅನ್ನು ಇನ್ನೂ ಲಿಂಕ್ ಮಾಡಿಲ್ಲದಿದ್ದರೆ, ನಿಮಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ಪಡಿತರ ಚೀಟಿಯನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡುವ ಗಡುವನ್ನು ಸರ್ಕಾರ ವಿಸ್ತರಿಸಿದೆ.

ಆಹಾರ ಸಬ್ಸಿಡಿ ಖಾತೆಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಪಡಿತರ ಚೀಟಿಗಳೊಂದಿಗೆ ಆಧಾರ್ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ.

Linking Aadhaar and Ration Card
Image Credit: Informalnewz

ಸೆಪ್ಟೆಂಬರ್ ತನಕ ಈ ರೇಷನ್ ಉಚಿತ
ಆಧಾರ್ ಅನ್ನು ಪರಿಶೀಲಿಸಲು ಅಥವಾ ಲಿಂಕ್ ಮಾಡಲು ಹೊಸ ಗಡುವು ಜೂನ್ 30, 2024 ರ ಬದಲಿಗೆ ಸೆಪ್ಟೆಂಬರ್ 30 ಆಗಿದೆ. ಈ ಗಡುವನ್ನು ಸರ್ಕಾರ ಈ ಹಿಂದೆ ಹಲವು ಬಾರಿ ವಿಸ್ತರಿಸಿದೆ. ಪಡಿತರ ಚೀಟಿಯನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ. ಫೆಬ್ರವರಿ 2017 ರಲ್ಲಿ ಪಿಡಿಎಸ್ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿತ್ತು.

Join Nadunudi News WhatsApp Group

ಆಧಾರ್ ಮತ್ತು ಪಡಿತರ ಚೀಟಿಯನ್ನು ಲಿಂಕ್ ಮಾಡದಿದ್ದರೆ ಜುಲೈ 1 ರಿಂದ ಫಲಾನುಭವಿಗಳಿಗೆ ಅಗ್ಗದ ಪಡಿತರ ಮತ್ತು ಉಚಿತ ಪಡಿತರ ಪ್ರಯೋಜನ ಸಿಗುವುದಿಲ್ಲ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗುತ್ತಿದೆ. ಆದರೆ ಈಗ ಸರ್ಕಾರವು ಕೊನೆಯ ದಿನಾಂಕವನ್ನು ಮೂರು ತಿಂಗಳು ವಿಸ್ತರಿಸಿದೆ, ಅಂದರೆ ಸೆಪ್ಟೆಂಬರ್ 30 ರವರೆಗೆ, ಅರ್ಹ ಫಲಾನುಭವಿಗಳು ಪಡಿತರ ಪ್ರಯೋಜನವನ್ನು ಪಡೆಯುತ್ತಾರೆ.

 

ಆನ್‌ ಲೈನ್‌ ನಲ್ಲಿ ಪಡಿತರ ಚೀಟಿಯನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡುವುದು ಹೇಗೆ
ಈ ರೀತಿಯಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಜೊತೆ ಲಿಂಕ್ ಮಾಡಿ
*ಗ್ರಾಹಕರು ಮೊದಲು ತನ್ನ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.

*ಬ್ಯಾಂಕಿಂಗ್ ನ ಪೋರ್ಟಲ್ ತೆರೆದ ನಂತರ Login ಆಗಿ ನಂತ KYC ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

*ಅಲ್ಲಿ ಕೇಳಲಾಗುವ ಎಲ್ಲ ವೈಯಕ್ತಿಕ ಮಾಹಿತಿಯಾದ, ಹೆಸರು, ವಿಳಾಸ, ಹುಟ್ಟಿದ ದಿನಾಂಕ ಎಲ್ಲ ಮಾಹಿತಿಯನ್ನು ನಮೂದಿಸಿ.

*ಆಧಾರ್, ಪಾನ್ ಹಾಗೆ ಇತರ್ ಅಗತ್ಯ ಮಾಹಿತಿಯ ಪ್ರತಿಯನ್ನು ಎರಡು ಬದಿ ಸ್ಕಾನ್ ಮಾಡಿ ಅಪ್ಲೋಡ್ ಮಾಡಿ.

*ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ Submit ಆಯ್ಕೆಯನ್ನು ಆರಿಸಿ. ನಂತರ ನಿಮಗೆ ಸೇವಾ ವಿನಂತಿಯನ್ನು ನೀಡಲಾಗುತ್ತದೆ.

*ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನವೀಕರಣ ಮಾಹಿತಿಯನ್ನು ಗ್ರಾಹಕರ ಮೇಲ್ ಅಥವಾ ಮೊಬೈಲ್ ಸಂದೇಶದ ಮೂಲಕ ರವಾನೆ ಮಾಡಲಾಗುತ್ತದೆ.

Aadhar Card And Ration Card
Image Credit: sg

Join Nadunudi News WhatsApp Group