Fish Aadhar Card: ಈಗ ಮೀನುಗಳಿಗೂ ಕೂಡ ಆಧಾರ್ ಕಾರ್ಡ್ ಮಾಡಿಸಲಾಗುತ್ತದೆ, ಮೀನಿನ ಹೆಸರಿಗೂ ಬಂತು ಆಧಾರ್ ಕಾರ್ಡ್
ಮೀನುಗಳಿಗೆ ಆಧಾರ ಕಾರ್ಡ್ ಮಾಡುವ ಕುರಿತು ಚಿಂತನೆ, ಇನ್ನುಮುಂದೆ ಮೀನುಗಳು ಕೂಡ ಆಧಾರ್ ಕಾರ್ಡ್ ಹೊಂದಲಿದೆ
Fish Aadhaar Card: ದೇಶದ ಎಲ್ಲಾ ನಾಗರಿಕರು ಆಧಾರ್ ಕಾರ್ಡ್(Aadhar Card) ಹೊಂದುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಇಲ್ಲಿಯವರೆಗೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಆಧಾರ್ ಕಾರ್ಡ್ ಹೊಂದುವ ಬಗ್ಗೆ ಕೇಳಿದ್ದೇವೆ. ಆದರೆ ಈಗ ಮೀನುಗಳಿಗೂ ಆಧಾರ್ ಕಾರ್ಡ್ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಮೀನುಗಾರಿಕಾ ಸಚಿವಾಲಯದ ಸಚಿವ ಸಂಜಯ್ ನಿಶಾದ್ ಈ ಮಾಹಿತಿ ನೀಡಿದ್ದಾರೆ. ಲಕ್ನೋದ ಮೀನುಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಮನುಷ್ಯರಂತೆ ಮೀನುಗಳಿಗೂ ಆಧಾರ್ ಕಾರ್ಡ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಇದರಿಂದ ಮೀನು ಯಾವ ನದಿಗೆ ಸೇರಿದೆ ಎಂಬ ಮಾಹಿತಿಯೂ ಸಿಗಲಿದೆ ಎನ್ನಲಾಗಿದೆ .
ಮೀನುಗಳಿಗೆ ಆಧಾರ್ ಕಾರ್ಡ್ ಮಾಡಲಾಗುತ್ತಿದೆ
ಲಕ್ನೋದ ಮೀನುಗಾರಿಕೆ ಸಂಶೋಧನಾ ಕೇಂದ್ರದಲ್ಲಿ ಮನುಷ್ಯರಂತೆ ಮೀನುಗಳಿಗೂ ಆಧಾರ್ ಕಾರ್ಡ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಇದರಿಂದ ಮೀನು ಯಾವ ನದಿಗೆ ಸೇರಿದೆ ಎಂಬ ಮಾಹಿತಿಯೂ ಸಿಗಲಿದೆ. ಗಂಗಾ ನದಿಗೆ ಅಟಲ್ ಘಾಟ್‌ನಿಂದ ಒಂದು ಲಕ್ಷ ಮೀನು ಮರಿಗಳನ್ನು ಬಿಡುವ ಯೋಜನೆ ಇದೆ ಎಂಬ ವರದಿ ಎಲ್ಲಾ ಕಡೆ ಹರಿದಾಡುತ್ತಿದೆ.
ಗಂಗಾ ನದಿಯಲ್ಲಿ ಆಧಾರ್ ಕಾರ್ಡ್ ಹೊಂದಿರುವ ಮೀನು
ಇಡೀ ದೇಶದಲ್ಲಿ ಮೊದಲ ಬಾರಿಗೆ ಆಧಾರ್ ಕಾರ್ಡ್ ಹೊಂದಿರುವ ಮೀನುಗಳನ್ನು ಗಂಗಾ ನದಿಗೆ ಬಿಡುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಉತ್ತರ ಪ್ರದೇಶದ ಮೀನುಗಾರಿಕಾ ಸಚಿವಾಲಯದ ಸಚಿವ ಸಂಜಯ್ ನಿಶಾದ್ ಹೇಳಿದ್ದಾರೆ. ಈ ಮೂಲಕ ನದಿ ದಡದಲ್ಲಿ ವಾಸಿಸುವ ಜನರಿಗೆ ಉದ್ಯೋಗ ಸಿಗಲಿದ್ದು, ಮೀನುಗಾರಿಕೆಗೂ ಉತ್ತೇಜನ ದೊರೆಯಲಿದೆ. ಇದಕ್ಕಾಗಿ ಚಿಕ್ಕ ಚಿಕ್ಕ ಸಮಿತಿಗಳನ್ನು ರಚಿಸಿ ಕೆಲಸ ಮಾಡಲಾಗುತ್ತಿದೆ.
ಚಿಪ್ ಮೀನಿನ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ. ಆ ಮೂಲಕ ಯಾವ ನದಿಯಲ್ಲಿ ಯಾವ ಮೀನುಗಳಿವೆ ಎಂಬುದನ್ನು ಪತ್ತೆ ಹಚ್ಚುವುದು ಸುಲಭವಾಯಿತು. ಗಂಗಾ ನದಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಮೀನುಗಳನ್ನು ಬಿಡಲಾಗುತ್ತಿದೆ ಎನ್ನುತ್ತಾರೆ ಸಂಜಯ್ ನಿಶಾದ್. ಇದರಿಂದಾಗಿ ಜಲಚರಗಳ ಸಮತೋಲನವು ಸುಧಾರಿಸುತ್ತದೆ. ಇದು ಪರಿಸರದ ಮೇಲೆ ಅನುಕೂಲಕರ ಪರಿಣಾಮ ಬೀರುತ್ತದೆ. ಈ ಹೊಸ ಉಪಕ್ರಮವನ್ನು ಪ್ರಾರಂಭಿಸಿದ ನಂತರ, ಮುಂಬರುವ ದಿನಗಳಲ್ಲಿ ಮೀನುಗಾರಿಕೆ ಸಚಿವಾಲಯವು ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತದೆ. ಈ ಮೂಲಕ ಮೀನುಗಾರಿಕೆ ಮಾಫಿಯಾಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ.