Aadhaar Card: ಆಧಾರ್ ಕಾರ್ಡ್ ಇದ್ದವರಿಗೆ ಸೆಪ್ಟೆಂಬರ್ 14 ದಿಂದ ಹೊಸ ನಿಯಮ, ಈ ಕೆಲಸಕ್ಕೆ ಕಟ್ಟಬೇಕು ಶುಲ್ಕ.

ಆಧಾರ್ ಕಾರ್ಡ್ ಇದ್ದವರಿಗೆ ಸೆಪ್ಟೆಂಬರ್ 14 ರಿಂದ ಹೊಸ ನಿಯಮ.

Aadhaar Card Free Of Cost Update: ಭಾರತೀಯ ಪ್ರಜೆಗಳಿಗೆ ಆಧಾರ್ ಕಾರ್ಡ್ (Aadhaar Card) ಮುಖ್ಯ ದಾಖಲೆಯಾಗಿದೆ. ಆಧಾರ್ ಕಾರ್ಡ್ ಗೆ ಸಂಭಂದಿಸಿದಂತೆ ಅನೇಕ ಅಪ್ಡೇಟ್ ಗಳನ್ನೂ ಯುಐಡಿಎಐ ಜಾರಿಗೊಳಿಸುತ್ತಿದೆ. ಇನ್ನು ನೂತನ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗಂತೂ ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗಿದೆ. ಆಧಾರ್ ಕಾರ್ಡ್ ಅನ್ನು 10 ವರ್ಷ ಗಳ ಬಳಿಕ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ.

ಜನರಿಗೆ ಯಾವುದೇ ಕೆಲಸ ಮಾಡಬೇಕಿದ್ದರೂ ಆಧಾರ್ ಕಾರ್ಡ್ ಬೇಕಿದೆ. ಆದರೆ ಇತ್ತೀಚಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು UIDAI ಈಗಾಗಲೇ ಆದೇಶ ಹೊರಡಿಸಿದೆ. ಹತ್ತು ವರ್ಷದಿಂದ ಒಮ್ಮೆಯೂ ಅಪ್ಡೇಟ್ ಮಾಡದೆ ಇರುವ ಆಧಾರ್ ಕಾರ್ಡ್ ನವೀಕರಣ ಕಡ್ಡಾಯವಾಗಿದೆ. ಇದೀಗ ಆಧಾರ್ ಕಾರ್ಡ್ ಅಪ್ಡೇಟ್ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. 

UIDAI offers free Aadhaar update
Image Credit: News18

UIDAI ನೀಡಿದೆ ಉಚಿತ ಆಧಾರ್ ನವೀಕರಣ
ಈ ಹಿಂದೆ ಜೂನ್ 14 ರ ತನಕ ಆಧಾರ್ ನವೀಕರಣ ಪ್ರಕ್ರಿಯೆ ಉಚಿತವಾಗಿ ಸಿಗುತ್ತಿತ್ತು. ನಿಮ್ಮ ಆಧಾರ್ ಕಾರ್ಡ್ ನವೀಕರಣ ಬಾಕಿ ಇದ್ದರೆ ಜೂನ್ 14 ರ ನಂತರ ಆಧಾರ್ ನವೀಕರಣಕೆ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನುವ ಮಾಹಿತಿ ಹರಿದಾಡಿತ್ತು. ಆದರೆ ಇದೀಗ ಉಚಿತ ಆಧಾರ್ ನವೀಕರಣ ಗಡುವನ್ನು ಯುಐಡಿಎಐ ವಿಸ್ತರಿಸಿದೆ.

ಈ ದಿನದವರೆಗೂ ಸಿಗಲಿದೆ ಉಚಿತ ಆಧಾರ್ ನವೀಕರಣ
ಮೈ ಆಧಾರ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲಿ ಆಧಾರ್ ಅನ್ನು ನವೀಕರಿಸಿಕೊಳ್ಳಬಹುದು. https://myaadhaar.uidai.gov.in/ ಗೆ ಭೇಟಿ ನೀಡುವ ಮೂಲಕ ಆಧಾರ್ ವಿವರ ಮತ್ತು ವಿಳಾಸದ ದಾಖಲೆಗಳನ್ನು ಆನ್ಲೈನ್ ನಲ್ಲಿ ಫ್ರೀ ಆಫ್ ಕಾಸ್ಟ್ ನಲ್ಲಿ ನವೀಕರಿಸಿಕೊಳ್ಳಬಹುದು. ಇದೀಗ ಯುಐಡಿಎಐ ಉಚಿತ ಆಧಾರ್ ನವೀಕರಣ ಪ್ರಕ್ರಿಯೆಗೆ ಸೆಪ್ಟೆಂಬರ್ 14 , 2023 ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ. ಇನ್ನು ಸೆಪ್ಟೆಂಬರ್ ತನಕ ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು.

aadhar card update process
Image Credit: Hindustantimes

ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಅಪ್ಡೇಟ್
* https://myaadhaar.uidai.gov.in/ ನಲ್ಲಿ ಲಾಗಿನ್ ಮಾಡಬೇಕು.

Join Nadunudi News WhatsApp Group

*ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ ನಂತರ ಅದನ್ನು ನಮೂದಿಸಿ ಲಾಗಿನ್ ಆಗಬೇಕು.

*ನಂತರ ನೀವು ಸೂಕ್ತ ಮಾಹಿತಿಯನ್ನು ನೀಡಿ, ಅದಕ್ಕೆ ಬೇಕಾಗುವ ದಾಖಲೆಗಳನ್ನು ಅಪ್ಲೋಡ್ ಮಾಡಿ.

*ಅರ್ಜಿ ಸಲ್ಲಿಕೆಯ ಬಳಿಕ URN ಜನರೇಟ್ ಆಗುತ್ತದೆ. ಈ URN ಸಂಖ್ಯೆ ನಿಮಗೆ ದಾಖಲೆ ಪರಿಶೀಲನೆಗೆ ಅಗತ್ಯವಾಗುತ್ತದೆ.

Join Nadunudi News WhatsApp Group