Aadhaar Info: ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಜಾರಿಗೆ ಬಂತು ಹೊಸ ರೂಲ್ಸ್, ಇನ್ನುಮುಂದೆ ಎರಡು ಬಾರಿ ಮಾತ್ರ ಅವಕಾಶ.

ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯನ್ನು ಎಷ್ಟು ಬಾರಿ ಬದಲಾವಣೆ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ಮಾಹಿತಿ.

Aadhaar Card Information Change: Aadhaar Card ಗೆ ಸಂಬಂಧಿಸಿದಂತೆ UIDAI ಇತ್ತೀಚಿಗೆ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಸದ್ಯ ಆಧಾರ್ ಕಾರ್ಡ್ ಸರ್ಕಾರೀ ಹಾಗೂ ಸರ್ಕಾರೇತರ ಕೆಲಸಗಳಿಗೆ ಮುಖ್ಯ ದಾಖಲೆಯಾಗಿದೆ. ಆಧಾರ್ ಮಾಹಿತಿ ಇಲ್ಲದೆ ನೀವು ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎನ್ನಬಹುದು. ಕೇಂದ್ರ ಸರ್ಕಾರ ಇನ್ನಿತರ ವೈಯಕ್ತಿಕ ದಾಖಲೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಈಗಾಗಲೇ ಆದೇಶ ಹೊರಡಿಸಿದೆ.

ಸರ್ಕಾರದ ಆದೇಶದ ಮೇರೆಗೆ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಎಲ್ಲ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಿದ್ದಾರೆ. ಇನ್ನು ಆಧಾರ್ ಕಾರ್ಡ್ ಮಾಹಿತಿ ಬದಲಾವಣೆಗೆ UIDAI ಪ್ರತ್ಯೇಕ ನಿಯಮವನ್ನು ಪರಿಚಯಿಸಿದೆ. ಇದೀಗ ಆಧಾರ್ ಕಾರ್ಡ್ ನಲ್ಲಿ ಮಾಹಿತಿಯನ್ನು ಎಷ್ಟು ಬಾರಿ ಬದಲಾಯಿಸಬಹುದು ಎನ್ನುವ ನಿಯಮಗಳ ಬಗ್ಗೆ ತಿಳಿಯೋಣ.

Aadhaar Card Information Change
Image Credit: Economictimes

ಆಧಾರ್ ನಲ್ಲಿನ ಮಾಹಿತಿ ಬದಲಾವಣೆಗೆ UIDAI ನಿಯಮ
ಇನ್ನು ಆಧಾರ್ ಕಾರ್ಡ್ ನಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಆನ್ಲೈನ್ ನಲ್ಲಿ ಸಾಕಷ್ಟು ಮಾರ್ಗಗಳಿವೆ. ಇನ್ನು ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆಧಾರ್ ಕಾರ್ಡ್ ನಲ್ಲಿ ಸಾಮಾನ್ಯವಾಗಿ ಕೆಲವು ತಪ್ಪುಗಳು ಆಗುತ್ತವೆ.

ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿಯಲ್ಲಿ ತಪ್ಪಾಗುತ್ತದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವುದೇ ಮಾಹಿತಿ ತಪ್ಪಿದ್ದಲ್ಲಿ ಸರಿಪಡಿಸಿಕೊಳ್ಳುವಂತೆ UIDAI ಸೂಚನೆ ನೀಡಿದೆ. ಹೆಸರು, ಜನ್ಮ ದಿನಾಂಕ, ವಿಳಾಸ ಸೇರಿದಂತೆ ಬಯೋಮೆಟ್ರಿಕ್, ಪಿಂಗರ್ ಫ್ರಿನ್ಟ್ ಹಾಗೂ ಫೋಟೋವನ್ನು ಕೂಡ ನವೀಕರಿಸಬಹುದು.

aadhar card latest update
Image Credit: News 18

ಆಧಾರ್ ಕಾರ್ಡ್ ನಲ್ಲಿ ಮಾಹಿತಿಯನ್ನು ಎಷ್ಟು ಬಾರಿ ಬದಲಾಯಿಸಬಹುದು..?
ಆನ್ಲೈನ್ ನ ಮುಕಾಂತರ ಆಧಾರ್ ಕಾರ್ಡ್ ನಲ್ಲಿ ಜನ್ಮ ದಿನಾಂಕ ಹಾಗೂ ಹೆಸರನ್ನು ಬದಲಾವಣೆಯನ್ನು ಕೂಡ ಮಾಡಬಹುದು. ಆದರೆ ಜನ್ಮ ದಿನಾಂಕ ಮತ್ತು ಹೆಸರಿನ ಬದಲಾವಣೆಯನ್ನು ಎರಡು ಬಾರಿ ಮಾತ್ರ ಮಾಡಲು ಸಾಧ್ಯ. ಆಧಾರ್ ಕಾರ್ಡ್ ನಲ್ಲಿನ ಲಿಂಗ ಬದಲಾವಣೆ ಒಮ್ಮೆ ಮಾತ್ರ ಮಾಡಲು ಸಾಧ್ಯ.

Join Nadunudi News WhatsApp Group

ಇನ್ನು ಮೊಬೈಲ್ ಸಂಖ್ಯೆಯ ಬದಲಾವಣೆಗೆ ಯಾವುದೇ ಮಿತಿ ಇಲ್ಲ. ಇನ್ನು ಆಧಾರ್ ನಲ್ಲಿನ ವಿಳಾಸ ಬದಲಾವಣೆ ಹೆಚ್ಚಿನ ಜನರು ಮಾಡುತ್ತಾರೆ. ಆಧಾರ್ ವಿಳಾಸ ಬದಲಾವಣೆಗೆ UIDAI ಯಾವುದೇ ಮಿತಿ ನಿಗದಿಪಡಿಸಿಲ್ಲ. ಮಿತಿಗಿಂತ ಹೆಚ್ಚು ಬಾರಿ ಮಾಹಿತಿಯನ್ನು ಬದಲಿಸುವ ಅಗತ್ಯವಿದ್ದರೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಬದಲಿಸಿಕೊಳ್ಳಬಹುದು.

Join Nadunudi News WhatsApp Group