Aadhar Card: ರಾತ್ರೋರಾತ್ರಿ ಆಧಾರ್ ಕಾರ್ಡ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ, ಈ ಕೆಲಸಕ್ಕೆ ಆಧಾರ್ ಅಗತ್ಯವಿಲ್ಲ.
ಇನ್ನುಮುಂದೆ ಈ ಕೆಲಸವನ್ನ ಮಾಡಿಕೊಳ್ಳಲು Aadhaar Card ಅಗತ್ಯ ಇಲ್ಲ.
Aadhaar Card Is Not Mandatory For Birth And Death Registration: ಆಧಾರ್ ಕಾರ್ಡ್ (Aadhar Card) ದೇಶದಲ್ಲಿ ಪ್ರಮುಖವಾದ ದಾಖಲೆಯಾಗಿದೆ ಮತ್ತು ಆದರೆ ಕಾರ್ಡ್ ಇಲ್ಲದೆ ಹಲವು ಕೆಲಸಗಳನ್ನ ಮಾಡಲು ಸಾಧ್ಯವಿಲ್ಲ. ಸದ್ಯ ಆಧಾರ್ ಕಾರ್ಡ್ ನಿಯಮದಲ್ಲಿ ಈಗಾಗಲೇ ಕೆಲವು ಬದಲಾವಣೆಯನ್ನ ಜಾರಿಗೆ ತರಲಾಗಿದೆ.
ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನ ಸಡಿಲ ಮಾಡಲಾಗಿದ್ದು ಜನರು ಕೆಲವು ಕೆಲಸಗಳನ್ನ ಆಧಾರ್ ಕಾರ್ಡ್ ಇಲ್ಲದೆ ಮಾಡಬಹುದಾಗಿದೆ. ಇದೀಗ ಆಧಾರ್ ಕಾರ್ಡ್ ನಿಯಮದಲ್ಲಿ ಇನ್ನೊಂದು ಬದಲಾವಣೆಯನ್ನ ಜಾರಿಗೆ ತರಲಾಗಿದ್ದು ಜನರು ಇನ್ನುಮುಂದೆ ಈ ಕೆಲಸವನ್ನ ಮಾಡಿಕೊಳ್ಳಲು Aadhaar Card ಅಗತ್ಯ ಇಲ್ಲ.
ಇನ್ನುಮುಂದೆ ಈ ಕೆಲಸಗಳಿಗೆ ಆಧಾರ್ ಕಾರ್ಡ್ ಅಗತ್ಯವಿಲ್ಲ
ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜನನ ಮತ್ತು ಮರಣಗಳ ನೋಂದಣಿ ಸಮಯದಲ್ಲಿ ಒದಗಿಸಲಾದ ಗುರುತಿನ ವಿವರವನ್ನು ಧ್ರಡೀಕರಿಸಲು ಆಧಾರ್ ಡೇಟಾ ಬೇಸ್ ಅನ್ನು ಬಳಸಲು ರಿಜಿಸ್ಟ್ರಾರ್ ಜನರಲ್ ಕಚೇರಿಗೆ ಅನುಮತಿ ನೀಡಿದೆ. ಈ ವೇಳೆ ಜನನ ಮತ್ತು ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ ಎಂದು ಮಾಹಿತಿ ನೀಡಿದೆ.
ಇನ್ನುಮುಂದೆ ಜನನ ಮತ್ತು ಮರಣ ನೋಂದಣಿಗೆ ಆಧಾರ್ ಕಾರ್ಡ್ ಅಗತ್ಯ ಇರುವುದಿಲ್ಲ. ಆಧಾರ್ ಕಾರ್ಡ್ ಇಲ್ಲದೇನೆ ವ್ಯಕ್ತಿಯ ಜನನ ಮತ್ತು ಮರಣ ನೋಂದಣಿಯನ್ನು ಮಾಡಿಸಬಹುದು. ಜೂನ್ 27 2023 ರಂದು ಈ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ.
ಮಾರ್ಗಸೂಚಿಗಳನ್ನು ಅನುಸರಿಸುದು ಅಗತ್ಯ
ನಿಯಮದ ಪ್ರಕಾರ ಆಧಾರ್ ಪರಿಶೀಲನೆಯನ್ನು ಬಳಸಲು ಉದ್ದೇಶಿಸಿರುವ ರಾಜ್ಯ ಸರ್ಕಾರಗಳು ಅದನ್ನು ಸಮರ್ಥಿಸಲು ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತವೆ ಮತ್ತು UIDAI ಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ಮುಂದೆ ಇಡುತ್ತವೆ. 2020 ರಲ್ಲಿ ಆ ನಿಯಮಗಳನ್ನು ಐಟಿ ಸಚಿವಾಲಯವು ತಿಳಿಸಿದೆ ಅದರಲ್ಲಿ ಕೇಂದ್ರ ಸರ್ಕಾರವು ಉತ್ತಮ ಆಡಳಿತಕ್ಕಾಗಿ ಸಾರ್ವಜನಿಕ ಹಣದ ವ್ಯರ್ಥವನ್ನು ತಡೆಯಲು ಮತ್ತು ಜೀವನವನ್ನು ಸುಲಭಗೊಳಿಸಲು ಆಧಾರ್‌ಗಾಗಿ ಸಂಸ್ಥೆಗಳಿಗೆ ವಿನಂತಿಸಬೇಕು ಎಂದು ಹೇಳಲಾಗಿದೆ.
ಹೊಸ ಮಗುವಿನ ಜನನದ ಮೇಲೆ ಗುರುತಿಸುವುದು ಕಡ್ಡಾಯ
ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಹೊಸ ಮಗುವಿನ ಜನನದ ಸಂದರ್ಭದಲ್ಲಿ ಪೋಷಕರು ಮತ್ತು ಮಾಹಿತಿದಾರರ ಗುರುತನ್ನು ನೀಡುವುದು ಅವಶ್ಯಕವಾಗಿದೆ. ಕೇಂದ್ರದ ಪರವಾಗಿ ಈ ವ್ಯವಸ್ಥೆಯು ಜನನ ಅಥವಾ ಮರಣದ ಸಂದರ್ಭದಲ್ಲಿ ಹುಟ್ಟಿದ ಸಮಯದಲ್ಲಿ ಮಗುವಿನ ಪೋಷಕರು ಮತ್ತು ಮಾಹಿತಿದಾರರ ಗುರುತನ್ನು ಹಾಗೂ ಮರಣದ ಸಂದರ್ಭದಲ್ಲಿ ಪೋಷಕರು, ಸಂಗಾತಿಯ ಮತ್ತು ಮಾಹಿತಿದಾರರ ಗುರುತನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಅಳವಡಿಸಲಾಗಿದೆ.