Anna Bhagya 2024: ಈ ತಿಂಗಳ ಅಂತ್ಯದೊಳಗೆ ಈ ಕೆಲಸ ಮಾಡಿದರೆ ಮಾತ್ರ ಸಿಗಲಿದೆ ಅನ್ನಭಾಗ್ಯ ಯೋಜನೆಯ ಹಣ, ಹೊಸ ರೂಲ್ಸ್

ತಿಂಗಳ ಅಂತ್ಯದೊಳಗೆ ಈ ಕೆಲಸ ಮಾಡದಿದ್ದರೆ ಅನ್ನಭಾಗ್ಯ ಯೋಜನೆ ಹಣ ಸಿಗಲ್ಲ

Anna Bhagya Yojana Rules 2024: ರಾಜ್ಯದಲ್ಲಿ ಈಗ ಹಲವು ಯೋಜನೆಗಳು ಜಾರಿಯಲ್ಲಿದೆ ಅದರಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆ (Anna Bhagya Scheme) ಕೂಡ ಒಂದಾಗಿದೆ. ಈ ಯೋಜನೆಯಡಿ ರಾಜ್ಯದ ಕಾಂಗ್ರೆಸ್ ಸರ್ಕಾರ ಐದು ಕೆಜಿ ಅಕ್ಕಿಯ ಬದಲಾಗಿ ಕುಟುಂಬದ ಯಜಮಾನರ ಖಾತೆಗೆ ಹಣ ಜಮೆ ಮಾಡುತ್ತಿದೆ.

ಈ ಯೋಜನೆ ಪ್ರಾರಂಭ ಆಗಿ ಹಲವು ತಿಂಗಳುಗಳು ಕಳೆದಿದ್ದು, ಈಗಾಗಲೇ ಹಲವು ಕುಟುಂಬಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ಹಾಗೆಯೆ ಈಗ ಮುಖ್ಯವಾಗಿ ಅನ್ನಭಾಗ್ಯ ಯೋಜನೆಯ ಕುರಿತು ಹೊಸ ನಿಯಮ ಜಾರಿಗೆ ಬಂದಿದ್ದು, ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಬೇಕಿದ್ದರೆ ಕಡ್ಡಾಯವಾಗಿ ಈ ಕೆಲಸವನ್ನು ಮಾಡಿಕೊಳ್ಳಿ.

Anna Bhagya Yojana Rules 2024
Image Credit: Original Source

ಆಧಾರ್ ಕಾರ್ಡ್ ಹಾಗು ರೇಷನ್ ಕಾರ್ಡ್ ಲಿಂಕ್ ಕಡ್ಡಾಯ ಆಗಿರುತ್ತದೆ

ಈಗಾಗಲೇ ಸರ್ಕಾರ ಹಲವು ಬಾರಿ ಆಧಾರ್ ಹಾಗು ರೇಷನ್ ಕಾರ್ಡ್ ಲಿಂಕ್ ಬಗ್ಗೆ ಮಾಹಿತಿ ನೀಡಿದೆ, ಆದರೂ ಸಹ ಕೆಲವರು ಈ ಕೆಲಸವನ್ನು ಮಾಡಿಲ್ಲಾ ಎನ್ನಲಾಗುತ್ತಿದೆ. ಬ್ಯಾಂಕ್ ಖಾತೆಯ E-KYC ಹಾಗು ಆಧಾರ್, ರೇಷನ್ ಲಿಂಕ್ ಇದು ಬಹಳ ಮುಖ್ಯ ಆಗಿದ್ದು ಪ್ರತಿಯೊಬ್ಬರು ಈ ಕೆಲಸವನ್ನು ಮಾಡಿಕೊಳ್ಳಿ, ಇಲ್ಲ ಅಂತಾದರೆ ನಿಮಗೆ ಮುಂದಿನ ಕಂತಿನ ಅನ್ನಭಾಗ್ಯ ಹಣ ಬರಲು ಸಾಧ್ಯವೇ ಇಲ್ಲ. ಸರ್ಕಾರಕ್ಕೆ ಅಕ್ಕಿಯ ದಾಸ್ತಾನಿನ ಸಮಸ್ಯೆ ಇರುವುದರಿಂದ ಅಕ್ಕಿ ಬದಲು ಹಣ ನೀಡುತ್ತಿದೆ ಹಾಗಾಗಿ ಮುಂದಿನ ಸಮಯದಲ್ಲೂ ಇದೆ ನಿಯಮ ಮುಂದುವರಿಯಲಿದ್ದು, ಪ್ರತಿಯೊಬ್ಬರು ಆದಷ್ಟು ಬೇಗ ಈ ಕೆಲಸವನ್ನು ಮಾಡಿಸಿಕೊಳ್ಳಿ.

Anna Bhagya Scheme Latest News Update
Image Credit: Kannada News Today

ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ಹಾಗು ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಬಹುದಾಗಿದೆ

Join Nadunudi News WhatsApp Group

ಮೊದಲನೇದಾಗಿ ಆಹಾರ ಹಾಗು ನಾಗರೀಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ https//aahara.kar.nic.in/Home/EService ಭೇಟಿ ನೀಡಿ, ಈ ಸ್ಥಿತಿ ವಿಭಾಗದಲ್ಲಿ ಯುಐಡಿ ಲಿಂಕ್ ಆಯ್ಕೆ ಮಾಡಿಕೊಳ್ಳಬೇಕು , ನಂತರ ಇಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ, ತದನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಿ ಗೋ ಎಂದು ಕ್ಲಿಕ್ ಮಾಡಿ, ಈಗ ನೋಂದಾಯಿತ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ ಅದನ್ನು ನಮೂದು ಮಾಡಿ,ನಂತರ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದು ಮಾಡಬೇಕು.

ಅಷ್ಟೇ ಅಲ್ಲದೆ ನಿಮಗೆ ಸಂಬಂಧ ಪಟ್ಟ ಆಹಾರ ಸರಬರಾಜು ಕಚೇರಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಹಾಗು ರೇಷನ್ ಕಾರ್ಡ್ ಲಿಂಕ್ ಅನ್ನು ಮಾಡಿಸಿಕೊಳ್ಳಬಹುದಾಗಿದೆ. ಅನ್ನಭಾಗ್ಯ ಯೋಜನೆಯ ಮುಂದಿನ ಕಂತಿನ ಹಣ ಶೀಘ್ರದಲ್ಲೇ ಬಿಡುಗಡೆ ಆಗಲಿದ್ದು, ಆದಷ್ಟು ಬೇಗ ಈ ಕೆಲಸವನ್ನು ಮಾಡಿಸಿಕೊಳ್ಳುವುದು ಮುಖ್ಯ ಆಗಿದೆ.

Join Nadunudi News WhatsApp Group