Aadhaar Surname: ಆಧಾರ್ ಕಾರ್ಡ್ ಹೊಂದಿರುವ ದೇಶದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್, ಈಗ ಈ ಕೆಲಸ ಇನ್ನಷ್ಟು ಸುಲಭ.
ಮದುವೆಯಾಗಿರುವ ಮಹಿಳೆಯರಿಗೆ ಆಧಾರ್ ಸಂಬಂಧಿತ ಮಹತ್ವದ ಮಾಹಿತಿ.
Aadhaar Card Surname Change Process: ಸದ್ಯ ದೇಶದಲ್ಲಿ Aadhaar Card ಎಷ್ಟು ಮುಖ್ಯ ಎನ್ನುವುದು ಈಗಾಗಲೇ ಎಲ್ಲರಿಗು ತಿಳಿದೇ ಇದೆ. 5 ವರ್ಷದ ಮಗುವಿನಿಂದ ಹಿಡಿದು ಎಲ್ಲ ವಯಸ್ಸಿನವರು ಕಡ್ಡಾಯವಾಗಿ Aadhaar Card ದಾಖಲೆಯನ್ನು ಮಾಡಿಸಿಕೊಳ್ಳಬೇಕಿದೆ.
ಯಾವುದೇ ರೀತಿಯ ಕೆಲಸಗಳಿಗೂ ಕೂಡ ಆಧಾರ್ ಮುಖ್ಯ ದಾಖಲೆಯಾಗಿ ಗುರುತಿಸಿಕೊಂಡಿದೆ. ನಿಮ್ಮ ಇನ್ನಿತರ ವೈವೈಕ್ತಿಕ ದಾಖಲೆಯನ್ನು ಮಾಡಿಸಬೇಕಿದ್ದರು ಕೂಡ ನೀವು ಆಧಾರ್ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕಿದೆ. ಸದ್ಯ ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಮಹತ್ವದ ಮಾಹಿತಿ
ಸದ್ಯ ಇದೀಗ ಮದುವೆಯಾಗಿರುವ ಮಹಿಳೆಯರಿಗೆ ಆಧಾರ್ ಸಂಬಂಧಿತ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಸಾಮಾನ್ಯವಾಗಿ ಮದುವೆಗೂ ಮುನ್ನ ಮಹಿಳೆರು ತಮ್ಮ ಆಧಾರ್ ನಲ್ಲಿ ತಮ್ಮ ಹೆಸರನ್ನು ಮಾತ್ರ ನೋಂದಾಯಿಸುತ್ತಾರೆ. ಇನ್ನು ಮದುವೆಯಾದ ಬಳಿಕ ಮಹಿಳೆಯರು ಆಧಾರ್ ನಲ್ಲಿ ತಮ್ಮ ಹೆಸರಿನೊಂದಿಗೆ ತಮ್ಮ ಗಂಡನ ಹೆಸರನ್ನು ಸೇರಿಸಲು ಬಯಸುತ್ತಾರೆ.
ನೀವು ನಿಮ್ಮ ಆಧಾರ್ ನಲ್ಲಿ ನಿಮ್ಮ ಗಂಡನ ಉಪನಾಮವನ್ನು ಸೇರಿಸಲು ಬಯಸಿದರೆ ಅದರ ಆಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ನಿಮ್ಮ ಆಧಾರ್ ನಲ್ಲಿನ ಉಪನಾಮ ಬದಲಾವಣೆಯ ಬಗ್ಗೆ ಸುಲಭ ಮಾಹಿತಿ ಇಲ್ಲಿದೆ. ನೀವು ಈರೀತಿ ಮಾಡುದರಿಂದ ಯಾರ ಸಹಾಯವಿಲ್ಲದೆ ನಿಮ್ಮ ಆಧಾರ್ ನಲ್ಲಿ ನಿಮ್ಮ ಗಂಡನ ಉಪನಾಮವನ್ನು ಸೇರಿಸಿಕೊಳ್ಳಬಹುದು. ಆಧಾರ್ ನಲ್ಲಿ ಉಪನಾಮವನ್ನು ಬದಲಿಸಿಕೊಳ್ಳಲು ಈ ಹಂತಗಳನ್ನು ಅನುಸರಿಸಬೇಕಾಗುತ್ತದೆ.
ಈ ರೀತಿಯಾಗಿ ಆಧಾರ್ ನಲ್ಲಿ ಉಪನಾಮ ಬದಲಿಸಿಕೊಳ್ಳಿ
*ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನಿಡುವ ಮೂಲಕ ಆಧಾರ್ ನಲ್ಲಿ ನಿಮ್ಮ ಗಂಡನ ಉಪನಾಮವನ್ನು ಸೇರಿಸಿಕೊಳ್ಳಬಹುದು.
*ನಿಮ್ಮ ಪತಿಯ ಜೊತೆ ನೀವು ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
*ನೀವು ತಿದ್ದುಪಡಿ ಫಾರ್ಮ್ ಅನ್ನು ಭರ್ತಿಮಾಡಿ ಅದರಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್‌ನಲ್ಲಿ ನೀವು ಬದಲಾಯಿಸಲು ಬಯಸುವ ಆಧಾರ್ ಸಂಖ್ಯೆ ಸೇರಿದಂತೆ ಇನ್ನಿತರ ಮಾಹಿತಿಯನ್ನು ನೀಡಬೇಕು.
*ನಿಮ್ಮ ಗಂಡನ ಆಧಾರ್ ಕಾರ್ಡ್ ಮತ್ತು ಮದುವೆಯ ಪ್ರಮಾಣಪತ್ರವನ್ನು ಒಳಗೊಂಡಿರುವ ದಾಖಲೆಗಳು ನಿಮಗೆ ಬೇಕಾಗಬಹುದು. ಈ ಭರ್ತಿಮಾಡಿದ ಫಾರ್ಮ್‌ನೊಂದಿಗೆ ಕೆಲವು ಸಂಬಂಧಿತ ದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕು.
*ನಂತರ ನಿಮ್ಮ ಫೋಟೋ ಕ್ಲಿಕ್ ಮಾಡಲಾಗುತ್ತದೆ ಮತ್ತು ನಂತರ ನಿಮ್ಮ ಬಯೋಮೆಟ್ರಿಕ್ ತೆಗೆದುಕೊಳ್ಳಲಾಗುತ್ತದೆ.
*ಇದಾದ ಬಳಿಕ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿಯನ್ನು ಅಧಿಕಾರಿಯಿಂದ ನವೀಕರಿಸಲಾಗುತ್ತದೆ.
*ನಂತರ ನಿಗದಿತ ಶುಲ್ಕವನ್ನು ಪಾವತಿಸಿದರೆ ನಿಮ್ಮ ಉಪನಾಮ ಸೇರ್ಪಡೆ ಮುಗಿಯುತ್ತದೆ.