Aadhar Verification: ಆಧಾರ್ ವೆರಿಫಿಕೇಷನ್ ಈಗ ಬಹಳ ಸುಲಭ, ಖಾಸಗೀಕರಣ ಆಗಲಿದೆ ಆಧಾರ್ ಕಾರ್ಡ್.
ಆಧಾರ್ ಕಾರ್ಡ್ ವೆರಿಫಿಕೇಷನ್ ಕುರಿತಂತೆ ಮಹತ್ವದ ನಿರ್ಧಾರ ತಗೆದುಕೊಂಡಿದೆ ಕೇಂದ್ರ ಸರ್ಕಾರ.
Aadhar Card Verification Update: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhar Card) ಪ್ರಮುಖ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ರೀತಿಯ ಕೆಲಸ ಆಗಬೇಕಿದ್ದರು ಕೂಡ ಆಧಾರ್ ಕಾರ್ಡ್ ಮುಖ್ಯ ಪುರಾವೆಯಾಗಿದೆ.
ಆಧಾರ್ ಕಾರ್ಡ್ ಇಲ್ಲದೆ ಯಾವ ರೀತಿಯ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ. ಇನ್ನು ಆಧಾರ್ ಕಾರ್ಡ್ ಗೆ ಇನ್ನಿತರ ಮುಖ್ಯ ದಾಖಲೆಗಳನ್ನು ಲಿಂಕ್ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಇದೀಗ ಆಧಾರ್ ಕಾರ್ಡ್ ಸಂಬಂಧಿತ ಹೊಸ ಮಾಹಿತಿಯೊಂದು ಲಭಿಸಿದೆ.
ಆಧಾರ್ ಕಾರ್ಡ್ ಕುರಿತು ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಇದೀಗ ಕೇಂದ್ರ ಸರ್ಕಾರ ಆಧಾರ್ ಧ್ರಡೀಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಆಧಾರ್ ಕಾರ್ಡ್ ದೃಡೀಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಪ್ರಸ್ತುತ ಆಧಾರ್ ಕಾರ್ಡ್ ಧ್ರಡೀಕರಣವನ್ನು ಸಾರ್ವಜನಿಕ ವಲಯದ ಸಂಸ್ಥೆಗಳು ಅಥವಾ ಸಚಿವಾಲಯಗಳು ಮಾಡುತ್ತವೆ. ಹಾಗಾಗಿ ಕೇಂದ್ರ ಸರ್ಕಾರ ಆಧಾರ್ ದೃಡೀಕರಣವನ್ನ ಇನ್ನಷ್ಟು ವಿಸ್ತರಿಸುವ ಗುರಿ ಹೊಂದಿದೆ.
ಆಧಾರ್ ದೃಡೀಕರಣದ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ
ಆಧಾರ್ ಧ್ರಡೀಕರಣವನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆಧಾರ್ ದೃಡೀಕರಣಕ್ಕೆ ಸಂಬಂಧಿಸಿದಂತೆ ಜನಸಾಮಾನ್ಯರಿಗೆ ಉತ್ತಮ ಸೇವೆಯನ್ನು ನೀಡಲು ಕೇಂದ್ರದ ಮೋದಿ ಸರ್ಕಾರ ಮುಂದಾಗಿದೆ.
ಸರ್ಕಾರಿ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳಿಂದ ಆಧಾರ್ ದೃಡೀಕರಣವನ್ನು ಸಕ್ರಿಯಗೊಳಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಹಾಗೆಯೆ ಜೂನ್ 14 ರ ತನಕ ಉಚಿತ ಆಧಾರ್ ನವೀಕರಣವನ್ನು ಯುಐಡಿಎಐ ಕಲ್ಪಿಸಿದೆ. ಜೂನ್ 14 ರ ನಂತರ ಎಂದಿನಂತೆ ಆಧಾರ್ ನವೀಕರಣಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ.