Aadhaar Card Xerox Ban: ಇದೀಗ ಸೈಬರ್ ವಂಚನೆಗಳಿಗೆ ಬ್ರೇಕ್ ಹಾಕಲು UIDAI ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ಹಿಂದೆ ಹೋಟೆಲ್ ಗಳು, ಸಿನಿಮಾ ಥಿಯೇಟರ್ ಗಳು, ಖಾಸಗಿ ಕಂಪನಿ ಗಳು, ಅಥವಾ ಇವೆಂಟ್ ಗೆ ಟಿಕೆಟ್ ಬುಕ್ ಮಾಡುವಾಗ ಆಧಾರ್ ಕಾರ್ಡ್ ಜೆರಾಕ್ಸ್ ಕೊಡುತ್ತಿದ್ದೆವು, ಆದರೆ ಇನ್ನುಮುಂದೆ ಇದು ಸಾಧ್ಯವಿಲ್ಲ. ಇದೀಗ UIDAI ಹೊಸ ನಿಯಮ ಜಾರಿಗೊಳಿಸುತ್ತಿದ್ದು, ಇದರಿಂದ ನಿಮ್ಮ ಡೇಟಾ ಸೋರಿಕೆಯ ಆತಂಕ ಕಡಿಮೆ ಆಗಿ, ವೈಯಕ್ತಿಕ ಮಾಹಿತಿಯನ್ನು ಹೆಚ್ಚು ಸುರಕ್ಷಿತಗೊಳಿಸುತ್ತದೆ. ಇದೀಗ ನಾವು ಆಧಾರ್ ಕಾರ್ಡ್ ಜೆರಾಕ್ಸ್ ಸಂಪೂರ್ಣ ನಿಷೇಧ ಮಾಡಲು ಕಾರಣ ಏನು..? ಮತ್ತು ಇದಕ್ಕೆ ಬದಲಿ ಪರಿಹಾರ ಏನು ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಆಧಾರ್ ಜೆರಾಕ್ಸ್ ಗೆ ಗುಡ್ ಬೈ
ಹಿಂದಿನಿಂದಲೂ ಆಧಾರ್ ಕಾಯ್ದೆ 2009 ರ ಸೆಕ್ಷನ್ 8 ಪ್ರಕಾರ ಆಧಾರ್ ಕಾರ್ಡ್ ಜೆರಾಕ್ಸ್ ಸಂಗ್ರಹಿಸುವುದು ಕಾನೂನುಬಾಹಿರವಾಗಿದೆ. ಆದರೂ ಹೋಟೆಲ್ ಗಳು, ಜಿಮ್ ಗಳು, ಶಾಲಾ-ಕಾಲೇಜುಗಳು, ಇವೆಂಟ್ ಕಂಪನಿಗಳು ಲಕ್ಷಾಂತರ ಜನರ ಆಧಾರ್ ಜೆರಾಕ್ಸ್ ಸಂಗ್ರಹಿಸುತ್ತಿವೆ. ಇದರಿಂದ ಸಾವಿರಾರು ಜನರ ಡೇಟಾ ಲೀಕ್ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಕಾರಣಕ್ಕಾಗಿ ಆಧಾರ್ ಕಾರ್ಡ್ ಜೆರಾಕ್ಸ್ ಸಂಪೂರ್ಣ ನಿಷೇಧ ಮಾಡಲಾಗುತ್ತಿದೆ.
ಆಧಾರ್ ಕಾರ್ಡ್ ಜೆರಾಕ್ಸ್ ಕೊಡುವುದರಿಂದ ಆಗುವ ಸಮಸ್ಯೆಗಳು
* 2023 – 24 ರಲ್ಲಿ 5000 ಕ್ಕೂ ಅಧಿಕ ಆಧಾರ್ ಡೇಟಾ ಲೀಕ್ ಪ್ರಕರಣಗಳು ವರದಿಯಾಗಿದೆ.
* ನಕಲಿ ಸಿಮ್ ಕಾರ್ಡ್ ಪಡೆದುಕೊಳ್ಳಲು ಆಧಾರ್ ಕಾರ್ಡ್ ಬಳಕೆ ಮಾಡಿಕೊಳ್ಳಲಾಗುತ್ತಿದೆ.
* ಬ್ಯಾಂಕ್ ಖಾತೆ ತೆರೆಯಲು ಆಧಾರ್ ಜೆರಾಕ್ಸ್ ದುರ್ಬಳಕೆ ಆಗುತ್ತಿದೆ.
ಹೊಸ ನಿಯಮಗಳು ಜಾರಿ
* QR Code Scanning
mAadhaar ಅಪ್ಲಿಕೇಶನ್ ಮೂಲಕ QR ಕೋಡ್ ಅಥವಾ Physical card ನ QR ಸ್ಕ್ಯಾನ್ ಮಾಡಿ ಸೆಕೆಂಡ್ ಗಳಲ್ಲಿ ವೆರಿಫೈ ಮಾಡಿಕೊಳ್ಳಬಹುದಾಗಿದೆ.
* New Offline Verification App
ಇಂಟರ್ನೆಟ್ ಇಲ್ಲದೆಯೂ ಸಹ ಕೆಲಸ ಮಾಡುತ್ತದೆ. ಸಂಸ್ಥೆಗಳು ತಮ್ಮ ಮೊಬೈಲ್ ನಲ್ಲಿ ಈ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಂಡು ಸ್ಕ್ಯಾನ್ ಮಾಡಿಕೊಳ್ಳಬಹುದು.
* XML Offline Verification
mAadhaar ಅಪ್ಲಿಕೇಶನ್ ಬಳಸಿಕೊಂಡು e-Aadhaar ಡೌನ್ಲೋಡ್ ಮಾಡಿ, ಆ XML ಫೈಲ್ ಶೇರ್ ಮಾಡಿ ವೆರಿಫೈ ಮಾಡಿಕೊಳ್ಳಬಹುದು.
* Virtual Aadhaar ID (VID)
16 ಅಂಕಿಯ ತಾತ್ಕಾಲಿಕ ನಂಬರ್ ಜನರೇಟ್ ಮಾಡಿ, ಅದನ್ನು ಕೊಟ್ಟರೆ ನಿಜವಾದ ಆಧಾರ್ ನಂಬರ್ ಬಯಲಾಗುವುದಿಲ್ಲ.
* Masked Aadhaar
ಕೊನೆಯ 4 ಅಂಕಿಗಳು ಮಾತ್ರ ಕಾಣುವಂತೆ ಡೌನ್ಲೋಡ್ ಮಾಡಿಕೊಳ್ಳಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

