Free Aadhaar: ಸೆಪ್ಟೆಂಬರ್ 14 ರೊಳಗೆ ಆಧಾರ್ ಸಂಬಂಧಿತ ಈ ಕೆಲಸವನ್ನು ಮುಗಿಸಿಕೊಳ್ಳಿ.

ಸೆಪ್ಟೆಂಬರ್ 14 ರೊಳಗೆ ಆಧಾರ್ ಸಂಬಂಧಿತ ಈ ಕೆಲಸವನ್ನು ಮುಗಿಸಿಕೊಳ್ಳಿ

Aadhaar Free Update Deadline: ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಕೆಲಸಕ್ಕೆ ಆಧಾರ್ ಕಾರ್ಡ್ ಬಹಳ ಮುಖ್ಯ. ಶಾಲೆಗೆ ದಾಖಲಾತಿಯಿಂದ ಹಿಡಿದು ಯಾವುದೇ ನೋಂದಣಿಯವರೆಗೆ ಆಧಾರ್ ಕಾರ್ಡ್ ದಾಖಲೆ ಇಲ್ಲದೆ ಯಾವುದೂ ಸಾಧ್ಯವಿಲ್ಲ. ಆಧಾರ್ ಕಾರ್ಡ್‌ನ ಜಾಗದಲ್ಲಿ ಯಾವುದೇ ಬೇರೆ ದಾಖಲೆ ಇದ್ದರೆ ಅದರ ಸ್ಥಾನವನ್ನು ತುಂಬಲು ಅಸಾಧ್ಯ.

ಎಲ್ಲ ವಯಸ್ಸಿನವರಿಗೂ ಕೂಡ ಆಧಾರ್ ಕಾರ್ಡ್ ಅಗತ್ಯವಾಗಿದೆ. ಸದ್ಯ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆಯನ್ನು ನೀಡಿದೆ. ಆಧಾರ್ ಹೊಂದಿರುವವರು ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ. ಈ ದಿನಾಂಕದೊಳಗೆ ಆಧಾರ್ ಸಂಬಂಧಿತ ಈ ಕೆಲಸವನ್ನು ಮಾಡಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.

Aadhaar Free Update
Image Credit: Thequint

ಸೆಪ್ಟೆಂಬರ್ 14 ರೊಳಗೆ ಆಧಾರ್ ಸಂಬಂಧಿತ ಈ ಕೆಲಸವನ್ನು ಮುಗಿಸಿಕೊಳ್ಳಿ
ಸದ್ಯ UIDAI ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತ ಹೊಸ ಅಪ್ಡೇಟ್ ನೀಡಿದೆ. ಜನಸಮಾನ್ಯರಿಗೆ ಸಹಾಯವಾಗಲು UIDAI ಆನ್ಲೈನ್ ಪೋರ್ಟಲ್ ನಲ್ಲಿ ಆಧಾರ್ ನವೀಕರಣಕ್ಕೆ ಅವಕಾಶವನ್ನು ನೀಡಿತ್ತು. ಇದಲ್ಲದೆ ಉಚಿತ ನವೀಕರಣವನ್ನು ಕೂಡ ಘೋಷಿಸಿತ್ತು. ಸೆಪ್ಟೆಂಬರ್ 14 ಉಚಿತ ನವೀಕರಣಕ್ಕೆ ಕೊನೆಯ ದಿನಾಂಕವಾಗಿದೆ.

ನೀವು ಸೆಪ್ಟೆಂಬರ್ 14 ರೊಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು. ಇದಕ್ಕೆ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ. ಆದರೆ ಸೆಪ್ಟಬರ್ 14 ರ ನಂತರ ನೀವು ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ನವೀಕರಣ ಮಾಡಿದ್ರೆ ಇದಾಕ್ಕಾಗಿ ಶುಲ್ಕ ಪಾವತಿಸಬೇಕಾಗುತ್ತದೆ. ಸೆಪ್ಟೆಂಬರ್ 14 ರ ನಂತರ ನೀವು ಆಧಾರ್ ನವೀಕರಣಕ್ಕೆ 50 ರೂ. ಶುಲ್ಕವನ್ನು ಪಾವತಿಸಬೇಕಾಗಬಹುದು. ಆನ್ಲೈನ್ ಆಧಾರ್ ನವೀಕರಣ ಮಾಡುವುದು ಹೇಗೆ ಎನ್ನುವ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದೆ.

Aadhaar Free Update Deadline
Image Credit: Timesofindia

ಈ ರೀತಿಯಾಗಿ ನಿಮ್ಮ Aadhaar Card ಅನ್ನು ನವೀಕರಿಸಿಕೊಳ್ಳಿ
*ಮೊದಲು UIDAI Website ಆಗಿರುವ https://myaadhaar.uidai.gov.in/ ಗೆ ಭೇಟಿ ನೀಡಬೇಕು.

Join Nadunudi News WhatsApp Group

*UIDAI Website ನಲ್ಲಿ ಲಾಗಿನ್ ಆಗಿ Password ರಚಿಸಬೇಕು.

*ನಂತರ My Aadhaar ಮೇಲೆ ಟ್ಯಾಬ್ ಮಾಡಿ ಆಧಾರ್ ವಿವರಗಳನ್ನು ನವೀಕರಿಸಿ ನಮೂದಿಸಬೇಕು.

*ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.

•ನಂತರ ನೀವು ಬದಲಾವಣೆ ಮಾಡಬೇಕಾದ ವಿವರವನ್ನು ಭರ್ತಿ ಮಾಡಬೇಕು.

•ನಂತರ ಡಾಕ್ಯುಮೆಂಟ್ಸ್ ಅಪ್ಡೇಟ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.

•ಇಲ್ಲಿ ನೀವು ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ನೋಡುತ್ತಿರಿ.

•ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ನಂತರ ವಿಳಾಸವನ್ನು ನವೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಅಪ್‌ ಲೋಡ್ ಮಾಡಿ.

•ನಂತರ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸ್ವೀಕರಿಸಿ.

•ನಂತರ ನೀವು ನವೀಕರಣ ವಿನಂತಿ ಸಂಖ್ಯೆ (URN) ಸಂಖ್ಯೆ 14 ಅನ್ನು ಪಡೆಯುತ್ತೀರಿ.

•ಇದರ ಮೂಲಕ ನೀವು ಆಧಾರ್ ನವೀಕರಣ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದು.

Aadhaar Free Update 2024
Image Credit: Business-standard

Join Nadunudi News WhatsApp Group