Property Ownership: ಆಸ್ತಿಯ ಒಡೆತನಕ್ಕೆ ಕೇಂದ್ರದಿಂದ ಹೊಸ ಕಾನೂನು ಜಾರಿ, ಈ ಕೆಲಸ ಮಾಡದಿದ್ದರೆ ನೀವು ಆಸ್ತಿ ಮಾಲೀಕತ್ವವನ್ನು ಕಳೆದುಕೊಳ್ಳುತ್ತೀರಿ.
ದೇಶದಲ್ಲಿ ಆಸ್ತಿ ಮಾಲೀಕತ್ವಕ್ಕೆ ಹೊಸ ಕಾನೂನುನ್ನು ರೂಪಿಸಲು ಕೇಂದ್ರದ ಮೋದಿ ಸರ್ಕಾರ ಸಜ್ಜಾಗಿದೆ.
Aadhaar Link Compulsory For Property Ownership: ಸದ್ಯ ದೇಶದಲ್ಲಿ ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ವಂಚನೆ ಹೆಚ್ಚುತ್ತಿದೆ. ಕೇಂದ್ರ ಸರ್ಕಾರ ಹೆಚ್ಚುತ್ತಿರುವ ವಂಚನೆಗಳಿಗೆ ಬ್ರೇಕ್ ಹಾಕಲು ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ. ಆಸ್ತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಹೊಸ ನಿಯಮವನು ಪರಿಚಯಿಸುತ್ತ ಜನರಲ್ಲಿ ಜಾಗ್ರತಿ ಮೂಡಿಸುತ್ತಿದೆ.
ಇನ್ನು ಸರ್ಕಾರ ಎಷ್ಟೇ ಕ್ರಮ ಕೈಗೊಳ್ಳುತ್ತಿದ್ದರು ವಂಚನೆಯ ಪ್ರಕ್ರಿಯೆ ಒಂದಲ್ಲ ಒಂದು ವಿಧಾನದಲ್ಲಿ ನಡೆಯುತ್ತಿದೆ ಎನ್ನಬಹುದು. ಸದ್ಯ ದೇಶದಲ್ಲಿ ಆಸ್ತಿ ಒಡೆತನಕ್ಕೆ ಹೊಸ ಕಾನೂನು ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಆಸ್ತಿಯ ಒಡೆತನಕ್ಕೆ ಕೇಂದ್ರದಿಂದ ಹೊಸ ಕಾನೂನು ಜಾರಿ
ದೇಶದಲ್ಲಿ ಆಸ್ತಿ ಮಾಲೀಕತ್ವಕ್ಕೆ ಹೊಸ ಕಾನೂನುನ್ನು ರೂಪಿಸಲು ಕೇಂದ್ರದ ಮೋದಿ ಸರ್ಕಾರ ಸಜ್ಜಾಗಿದೆ. ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ವಂಚನೆಯನ್ನು ತಪ್ಪಿಸಲು ಭಾರತ ಸರ್ಕಾರ ಮುಂದಾಗಿದೆ. ನಿಮ್ಮ ಸ್ಥಿರಾಸ್ತಿಗಳ ಒಡೆತನದ ಹಕ್ಕನ್ನು ಪಡೆಯಲು ಇನ್ನುಮುಂದೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.
ಸ್ಥಿರಾಸ್ತಿಗಳ ಮಾಲೀಕತ್ವ ಪಡೆಯಲು Aadhaar Link ಕಡ್ಡಾಯ
ಸ್ಥಿರ ಆಸ್ತಿಗಳ ಮಾಲೀಕತ್ವವನ್ನು ಪಡೆಯಲು ಆಸ್ತಿ ದಾಖಲೆಯೊಂದಿಗೆ Aadhaar Link ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಭೂಮಿ ಮತ್ತು ಮನೆ ಖರೀದಿಯಲ್ಲಿ ಹೆಚ್ಚುತ್ತಿರುವ ವಂಚನೆಯನ್ನು ತಡೆಯುವ ಉದ್ದೇಶದಿಂದ ಹಾಗೂ ಬೇನಾಮಿ ಆಸ್ತಿಯನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಆಸ್ತಿ ದಾಖಲೆಗಳಿಗೆ ಆಧಾರ್ ಲಿಂಕ್ ಅನ್ನು ಕಡ್ಡಾಯಗೊಳಿಸಿದೆ.
Aadhaar Link ಮಾಡಿದರೆ ಆಗುವ ಪ್ರಯೋಜನ ಏನು..?
ನಿಮ್ಮ ಆಸ್ತಿ ದಾಖಾಲೆಗಳಿಗೆ ಆಧಾರ್ ಲಿಂಕ್ ಮಾಡದಿದ್ದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ನೀವು ಆಧಾರ್ ಲಿಂಕ್ ಮಾಡಲು ವಿಫಲವಾದರೆ ನಿಮಗೆ ಆಸ್ತಿ ವಿಚಾರವಾಗಿ ವಂಚನೆ ಆದಾಗ ಸರ್ಕಾರ ಹೊಣೆ ಹೊರುವುದಿಲ್ಲ. ರಿಜಿಸ್ಟ್ರಾರ್ ಕಚೇರಿಯಲ್ಲಿ ಖಾಸ್ರಾ ಸಂಖ್ಯೆಯ ಆಧಾರದ ಮೇಲೆ ಶೀರ್ಷಿಕೆಯನ್ನು ರಚಿಸಬೇಕಾಗುತ್ತದೆ. ಇದನ್ನು ಆಧಾರ್ ಗೆ ಲಿಂಕ್ ಮಾಡಬೇಕು.
ಮಾರಾಟದ ನಂತರ ನೋಂದಣಿ ಕೂಡ ನಡೆಯುತ್ತದೆ. ಭೂ ದಾಖಲೆಗಳನ್ನು ನವೀಕರಿಸಲಾಗುತ್ತದೆ. ಅರ್ಧದಷ್ಟು ಆಸ್ತಿ ಮಾರಾಟವಾಗಿದ್ದರೂ, ನೋಂದಣಿಯಾದ ತಕ್ಷಣ ದಾಖಲೆಯನ್ನು ನವೀಕರಿಸಲಾಗುತ್ತದೆ. ಬಯೋಮೆಟ್ರಿಕ್ಸ್ ನೊಂದಿಗೆ ನೀವು ಮನೆಯಿಂದಲೇ ಆಸ್ತಿಯನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ. ಆಸ್ತಿ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡುವುದರಿಂದ ಅಕ್ರಮ ಅತಿಕ್ರಮಣಗಳಿಂದ ರಕ್ಷಣೆ ಸಿಗುವುದರ ಜೊತೆಗೆ ಸುಲಭವಾಗಿ ಸಾಲ ಲಭ್ಯವಾಗಲಿದೆ.