Driving Licence Rule: ಆಧಾರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಹೊಸ ರೂಲ್ಸ್, ಈ ರೀತಿ ಕಡ್ಡಾಯವಾಗಿ ಲಿಂಕ್ ಮಾಡಬೇಕು.

ಈ ಸುಲಭ ವಿಧಾನದ ಮೂಲಕ ನೀವು Aadhaar Card ಅನ್ನು ನಿಮ್ಮ DL ಗೆ ಲಿಂಕ್ ಮಾಡಿ.

Aadhaar Link For Driving Licence: ಸಾಮಾನ್ಯವಾಗಿ ವಾಹನ ಮಾಲೀಕರು Driving Licence ಅನ್ನು ಕಡ್ಡಾಗಿ ಹೊಂದಿರಬೇಕು. ವಾಹನ ಸವಾರರಿಗೆ DL ಮುಖ್ಯ ದಾಖಲೆಯಾಗಿದೆ. ಇನ್ನು ಕೇಂದ್ರ ಸರ್ಕಾರ ಇತ್ತೀಚೆಗಂತೂ ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧಿಸಿದಂತೆ ಅನೇಕ ನಿಯಮವನ್ನು ಜಾರಿಗೆ ತಂದಿದೆ. ಇದೀಗ DL ನಿಯಮದಲ್ಲಿ ಬದಲಾವಣೆ ತಂದಿರುವ ಕೇಂದ್ರ ಸರ್ಕಾರ ಸದ್ಯ DL ಗೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. DL ಹೊಂದಿರುವ ಪ್ರತಿಯೊಬ್ಬರು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

Aadhaar Link For Driving Licence
Image Credit: Businessleague

ಆಧಾರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸನ್ಸ್ ಇದ್ದವರಿಗೆ ಹೊಸ ರೂಲ್ಸ್
ಸದ್ಯ ಭಾರತೀಯ ಪ್ರಜೆ ಆದವರಿಗೆ Aadhaar Card ಎಷ್ಟು ಮುಖ್ಯ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಈಗಂತೂ ಆಧಾರ್ ಮಾಹಿತಿಯನ್ನು ಎಲ್ಲ ವೈಯಕ್ತಿಕ ದಾಖಲೆಗಳಿಗೆ ಲಿಂಕ್ ಮಾಡುವಂತೆ ಸರ್ಕಾರ ಆದೇಶ ನೀಡಿದೆ.

Pan Card , Ration Card , Bank Account ಸೇರಿದಂತೆ ಇನ್ನಿತರ ವೈಯಕ್ತಿಕ ದಾಖಲೆಗಳಿಗೂ ಆಧಾರ್ ಲಿಂಕ್ ಕಡ್ಡಾಯವಾಗಿದೆ. ಸದ್ಯ Driving licence ಹೊಂದಿರುವ ಪ್ರತಿಯೊಬ್ಬರು ಕೂಡ Aadhaar Link ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ನೀವು ನಿಮ್ಮ DL ಅನ್ನು ಆಧಾರ್ ಗೆ ಸುಲಭವಾಗಿ ಆನ್ಲೈನ್ ನಲ್ಲಿ ಕೂಡ ಲಿಂಕ್ ಮಾಡಬಹುದು. ಈ ಸುಲಭ ವಿಧಾನದ ಮೂಲಕ ನೀವು Aadhaar Card ಅನ್ನು ನಿಮ್ಮ DL ಗೆ ಲಿಂಕ್ ಮಾಡಿಕೊಳ್ಳಬಹುದು.

ಈ ರೀತಿಯಾಗಿ ಇಂದೇ ಲಿಂಕ್ ಮಾಡಿ ನಿಮ್ಮ DL ಜೊತೆ ಆಧಾರ್
*ಮೊದಲು ನೀವು ನಿಮ್ಮ ಬ್ರೌಸರ್ ತೆರೆಯಿರಿ ಮತ್ತು ನಿಮ್ಮ ಡ್ರೈವಿಂಗ್ ಲೈಸೆನ್ಸ್ ನೀಡಿದ ರಾಜ್ಯದ ಸಂಬಂಧಿತ ರಸ್ತೆ ಸಾರಿಗೆ ಪೋರ್ಟಲ್‌ ಗೆ ಭೇಟಿ ನೀಡಿ. ‘Link Aadhaar’ ಆಯ್ಕೆಯನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.

Driving Licence Rule
Image Credit: Kashmirstudentalerts

*ಅಲ್ಲಿ ನಿಮಗೆ ಮೆನು ಕಾಣಿಸುತ್ತದೆ. ಪಟ್ಟಿಯಿಂದ ‘Driving Licence’ ಕ್ಲಿಕ್ ಮಾಡಿ.
ಈಗ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ ಮತ್ತು ‘ವಿವರಗಳನ್ನು ಪಡೆಯಿರಿ’ ಕ್ಲಿಕ್ ಮಾಡಿ.

Join Nadunudi News WhatsApp Group

*ಅಲ್ಲಿ ನಿಮ್ಮ ಡ್ರೈವಿಂಗ್ ಪರವಾನಗಿ ವಿವರಗಳು ಕಾಣಿಸಿಕೊಳ್ಳುತ್ತವೆ. ನಂತರ ಅಲ್ಲಿ ನೀಡಿರುವ ಬಾಕ್ಸ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು.

*ಈ ಮಾಹಿತಿಯನ್ನು ಭರ್ತಿಮಾಡಿದ ನಂತರ, ‘Submit’ ಕ್ಲಿಕ್ ಮಾಡಿ.

*ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು OTP ಪಡೆಯುತ್ತೀರಿ. ಆ OTP ಅನ್ನು ನಮೂದಿಸಿದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡುವ ಆನ್‌ ಲೈನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

Join Nadunudi News WhatsApp Group