Saving Scheme: ಅಂಚೆ ಕಚೇರಿಯಲ್ಲಿ ಖಾತೆ ಇದ್ದವರು ತಕ್ಷಣ ಈ ಕೆಲಸ ಮಾಡಿ, ಇಲ್ಲವಾದರೆ ಬ್ಲಾಕ್ ಆಗಲಿದೆ ನಿಮ್ಮ ಖಾತೆ.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಇದ್ದವರು ಇಂದೇ ಈ ಕೆಲಸ ಮಾಡಿ.
Post Office Saving Account Rules: ಜನರು ಹೆಚ್ಚಾಗಿ ತಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡಲು ಅಂಚೆ ಕಚೇರಿಯ ವಿವಿದ ಯೋಜನೆಯನ್ನು ಬಳಸಿಕೊಳ್ಳುತ್ತಾರೆ. Post Office ಗ್ರಾಹಕರಿಗೆ ಈಗಾಗಲೇ ಹಲವು ಯೋಜನೆಗಳನ್ನು ಪರಿಚಯಿಸಿದೆ. ಇದೀಗ Post Office ನಲ್ಲಿ ಖಾತೆಯನ್ನ ಹೊಂದಿರುವವರಿಗೆ ಮಹತ್ವದ ನಿಯಮವನ್ನು ಜಾರಿಗೆ ತರಲಾಗಿದೆ.
ನೀವು ಭವಿಷ್ಯದ ಅಗತ್ಯತೆಗಾಗಿ ಸಾರ್ವಜನಿಕ ಭವಿಷ್ಯ ನಿಧಿ , ರಾಷ್ಟೀಯ ಉಳಿತಾಯ ಪ್ರಮಾಣ ಪತ್ರ , ಹಿರಿಯ ನಾಗರಿಕರ ಉಳಿತಾಯ ಯೋಜನೆಯಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದರೆ ನಿಯಮದ ಬಗ್ಗೆ ತಿಳಿಯುದು ಬಹಳ ಮುಖ್ಯ. ಕೇಂದ್ರದ ಈ ನಿಯಮದ ಬಗ್ಗೆ ನೀವು ತಿಳಿದುಕೊಳ್ಳುವುದು ಮುಖ್ಯವಾಗಿದೆ.
ಅಂಚೆ ಕಚೇರಿಯಲ್ಲಿ ಖಾತೆ ಇದ್ದವರು ತಕ್ಷಣ ಈ ಕೆಲಸ ಮಾಡಿ
ಅಂಚೆ ಕಚೇರಿಯಲ್ಲಿ ಸಾಕಷ್ಟು ಸಣ್ಣ ಉಳಿತಾಯ ಯೋಜನೆಗಳಿವೆ. ಇದೀಗ ಅಂಚೆ ಇಲಾಖೆಯ ಸಣ್ಣ ಉಳಿತಾಯ ಖಾತೆಗಳಿಗೆ Aadhaar Link (Aadhaar Link With Post Office Account) ಮಾಡುವಂತೆ ಸರಕಾರ ಸೂಚನೆ ನೀಡಿದೆ. ನಿಗದಿತ ಸಮಯದೊಳಗೆ ನೀವು Post Office ನ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಬೇಕಿದೆ. ಉಳಿತಾಯ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ಹೂಡಿಕೆಯ ಆಯ್ಕೆಯ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ಈ ಕೆಲಸ ಆಗದಿದ್ದರೆ ಬ್ಲಾಕ್ ಆಗಲಿದೆ ನಿಮ್ಮ ಖಾತೆ
ಇನ್ನು ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಂಚೆ ಇಲಾಖೆ ನಿಮ್ಮ ಉಳಿತಾಯ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ. ನೀವು ಅಂಚೆ ಕಚೇರಿಯಾ ಉಳಿತಾಯ ಯೋಜನೆಗಳು, Public provident Fund , National Saving Certificate ನಂತಹ ಯಾವುದೇ ಸಣ್ಣ ಉಳಿತಾಯ ಯೋಜನೆಗಳನ್ನು ನಿಮ್ಮ Aadhaar Card ನ ಜೊತೆ ಲಿಂಕ್ ಮಾಡಬೇಕಿದೆ.
ನಿಮ್ಮ ಅಂಚೆ ಕಚೇರಿ ಖಾತೆಯಲ್ಲಿನ ಬ್ಯಾಲೆನ್ಸ್ 50,000 ರೂಪಾಯಿಯನ್ನು ಮೀರಿದ್ದರೆ ಅಥವಾ ಖಾತೆಯಿಂದ ಒಂದು ತಿಂಗಳಲ್ಲಿ ಎಲ್ಲಾ ವರ್ಗಾವಣೆಗಳು ಮತ್ತು ಬ್ಯಾಲೆನ್ಸ್ಗಳ ಮೊತ್ತವು 10 ಸಾವಿರ ರೂಪಾಯಿಗಿಂತ ಅಧಿಕವಾಗಿದ್ದರೆ, ಅಂಚೆ ಕಚೇರಿ ಸಣ್ಣ ಉಳಿತಾಯ ಖಾತೆಯೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಣಕಾಸು ವರ್ಷಕ್ಕೆ ಖಾತೆಯಲ್ಲಿನ ಎಲ್ಲ ಕ್ರೆಡಿಟ್ ಗಳ ಒಟ್ಟು ಮೊತ್ತವು 1 ಲಕ್ಷ ರೂ. ಗಿಂತ ಹೆಚ್ಚಿದ್ದರೆ ಪಾನ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ. ಇಂದೇ ನಿಮ್ಮ ಉಳಿತಾಯ ಖಾತೆಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿಕೊಳ್ಳಿ.