Account Close: ಸೆ 30 ರ ನಂತರ ಇಂತಹ ಜನರ ಬ್ಯಾಂಕ್ ಖಾತೆ ಬಂದ್, ಹಣ ತಗೆಯಲು ಮತ್ತು ಹಾಕಲು ಸಾಧ್ಯವಿಲ್ಲ.
ಇದೀಗ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
Aadhaar Link To Small saving Scheme: ಭಾರತ ಸರ್ಕಾರ ಜನರಿಗೆ ಆರ್ಥಿಕವಾಗಿ ನೆರವಾಗಲು ಸಾಕಷ್ಟು ಸಣ್ಣ ಉಳಿತಾಯ ಯೋಜನೆಗಳನ್ನು (Small saving Scheme) ಪರಿಚಯಿಸಿದೆ. ಈಗಾಗಲೇ ಅಂಚೆ ಇಲಾಖೆಯ ಸಣ್ಣ ಉಳಿತಾಯ ಖಾತೆಗಳಿಗೆ, ಬ್ಯಾಂಕ್ ಖಾತೆಗಳಿಗೆ Aadhar Link ಮಾಡುವಂತೆ ಸರ್ಕಾರ ಸೂಚನೆ ನೀಡಿದೆ. ಈ ತಿಂಗಳ ಅಂತ್ಯದೊಳಗೆ ನೀವು ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಬೇಕಿದೆ.
ಉಳಿತಾಯ ಖಾತೆಗೆ ಆಧಾರ್ ಲಿಂಕ್ ಆಗದಿದ್ದರೆ ನೀವು ಹೂಡಿಕೆಯ ಆಯ್ಕೆಯ ಯಾವುದೇ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. October ನಿಂದ ಹೊಸ ಹೊಸ ನಿಯಮಗಳು ಪರಿಚಯವಾಗಲಿದೆ. ಹೀಗಾಗಿ ನೀವು ಈ ತಿಂಗಳೊಳಗೆ ಸರ್ಕಾರ ಈ ಆದೇಶವನ್ನು ಪೂರ್ಣಗೊಳಿಸುವುದು ಉತ್ತಮ. ಇದೀಗ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದವರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಸರ್ಕಾರ ಸೂಚನೆಯನ್ನು ನಿರ್ಲಕ್ಷಿಸಿದರೆ ನೀವು ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಸೆ. 30 ರ ನಂತರ ಇಂತಹ ಜನರ ಬ್ಯಾಂಕ್ ಖಾತೆ ಬಂದ್
ನೀವು ಉಳಿತಾಯ ಯೋಜನೆಗಳಾದ Public Provident Fund , National Saving Certificate ನಂತಹ ಯಾವುದೇ ಸಣ್ಣಾ ಉಳಿತಾಯ ಯೋಜನೆಗಳನ್ನು ನಿಮ್ಮ Aadhar Card ನ ಜೊತೆ ಲಿಂಕ್ ಮಾಡಬೇಕಿದೆ. ಇನ್ನು ನೀವು ಸಣ್ಣ ಉಳಿತಾಯ ಖಾತೆಯನ್ನು ಹೊಂದಿದ್ದು, Septembar 30 ರೊಳಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಂಚೆ ಇಲಾಖೆ ನಿಮ್ಮ ಉಳಿತಾಯ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ.
ಇನ್ನು ಮೂರು ದಿನಗಳಲ್ಲಿ ಈ ಕೆಲಸ ಪೂರ್ಣಗೊಳಿಸಿ
ನಿಮ್ಮ ಅಂಚೆ ಕಚೇರಿ ಖಾತೆಯಲ್ಲಿನ ಬ್ಯಾಲೆನ್ಸ್ 50,000 ರೂಪಾಯಿಯನ್ನು ಮೀರಿದ್ದರೆ ಅಥವಾ ಖಾತೆಯಿಂದ ಒಂದು ತಿಂಗಳಲ್ಲಿ ಎಲ್ಲಾ ವರ್ಗಾವಣೆಗಳು ಮತ್ತು ಬ್ಯಾಲೆನ್ಸ್ಗಳ ಮೊತ್ತವು 10 ಸಾವಿರ ರೂಪಾಯಿಗಿಂತ ಅಧಿಕವಾಗಿದ್ದರೆ,
ಅಂಚೆ ಕಚೇರಿ ಸಣ್ಣ ಉಳಿತಾಯ ಖಾತೆಯೊಂದಿಗೆ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹಣಕಾಸು ವರ್ಷಕ್ಕೆ ಖಾತೆಯಲ್ಲಿನ ಎಲ್ಲ ಕ್ರೆಡಿಟ್ ಗಳ ಒಟ್ಟು ಮೊತ್ತವು 1 ಲಕ್ಷ ರೂ. ಗಿಂತ ಹೆಚ್ಚಿದ್ದರೆ ಪಾನ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ. ಹೀಗಾಗಿ ಇನ್ನು ಮೂರು ದಿನಗಳಲ್ಲಿ ನೀವು ಈ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಬೇಕಿದೆ.