Aadhaar Shila: 87 ರೂ ಹೂಡಿಕೆ ಮಾಡಿದರೆ ಸಿಗಲಿದೆ 11 ಲಕ್ಷ ರೂ, ಮಹಿಳೆಯರಿಗಾಗಿ LIC ಯಿಂದ ಬಂಪರ್ ಯೋಜನೆ.
ಮಹಿಳೆಯರಿಗೆ ಲಾಭದಾಯಕವಾದ ಇನ್ನೊಂದು ಯೋಜನೆ ಪರಿಚಯಿಸಿದ LIC.
LIC Aadhaar Shila Scheme: ಭಾರತದ ಅತಿ ದೊಡ್ಡ ಸಂಸ್ಥೆ ಲೈಫ್ ಇನ್ಸೂರೆನ್ಸ್ ಕಾರ್ಪರೇಷನ್ ಆಪ್ ಇಂಡಿಯಾ (ಎಲ್‌ಐಸಿ) ದೇಶಾದ್ಯಂತ ಹಲವು ದಿಟ್ಟ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಮಹಿಳಾ ಹಾಗು ಮಕ್ಕಳ ಏಳಿಗೆಗಾಗಿ ಹಾಗು ಅವರು ಆರ್ಥಿಕವಾಗಿ ಸಬಲರಾಗಲು ಎಲ್‌ಐಸಿ(LIC) ಮಹಿಳೆಯರಿಗಾಗಿ ನಿಧಿ ಪೆಟ್ಟಿಗೆ ತೆರೆಯುತ್ತದೆ, ಭಾರತದ ಅತಿದೊಡ್ಡ ಸಂಸ್ಥೆ ಎನಿಸಲ್ಪಟ್ಟಿರುವ ಎಲ್ಐಸಿ, ಮಹಿಳೆಯರ ಪರವಾಗಿ ಕೆಲಸ ಮಾಡುತ್ತಿದೆ, ಅವರಿಗಾಗಿ ಆಧಾರ್ ಶಿಲಾ ಯೋಜನೆಯನ್ನು ನಡೆಸಲಾಗುತ್ತಿದೆ.
ಈ ಯೋಜನೆಗೆ ಸೇರುವ ಮೊದಲು, ಮಹಿಳೆಯರು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ, ಪ್ರಮುಖವಾಗಿ ಮೊದಲು ಮಹಿಳೆಯರು ತಮ್ಮ ಖಾತೆಯನ್ನು ತೆರೆಯಬೇಕಾಗುತ್ತದೆ, ಅದರಲ್ಲಿ ಅವರು ಹೂಡಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಮಹಿಳೆಯರು ದಿನಕ್ಕೆ ರೂ 87 ಉಳಿಸಿದರೆ, ಪ್ಲಾನಿನ ಮುಕ್ತಾಯದ ಮೇಲೆ ಒಂದು ದೊಡ್ಡ ಮೊತ್ತವನ್ನು ಪಡೆಯುತ್ತೀರಿ.
ಆಧಾರ್ ಶಿಲಾ ಯೋಜನೆಗೆ ಸಂಬಂಧಿಸಿದ ಪ್ರಮುಖ ವಿಷಯಗಳು
ಎಲ್‌ಐಸಿಯ ಹಲವು ಯೋಜನೆಗಳಲ್ಲಿ ಶ್ರೇಷ್ಠ ಯೋಜನೆ ಆಧಾರ್ ಶಿಲಾ ಯೋಜನೆಯಾಗಿದ್ದು, ಮಹಿಳೆಯರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯುತ್ತಾರೆ. ಈ ಯೋಜನೆಗೆ ಪ್ರಮುಖವಾಗಿ ವಯಸ್ಸಿನ ಮಾನದಂಡಗಳನ್ನು ನಿಗದಿಪಡಿಸಲಾಗಿದೆ. ಅಂದರೆ 8 ವರ್ಷದಿಂದ 55 ವರ್ಷದೊಳಗಿನ ಮಹಿಳೆಯರು ಯೋಜನೆಗೆ ಸೇರಬಹುದು. ಹಾಗು 10 ರಿಂದ 20 ವರ್ಷಗಳವರೆಗೆ ಯೋಜನೆಯನ್ನು ಖರೀದಿಸಬಹುದು.
ಈ ಯೋಜನೆಯಲ್ಲಿ ಮುಕ್ತಯಾದ ವಯಸ್ಸು 55 ಆಗಿರುತ್ತದೆ. ಇದಲ್ಲದೆ, ಮಹಿಳೆಯು 15 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಮೊತ್ತವು 2 ಲಕ್ಷದಿಂದ ಗರಿಷ್ಠ 5 ಲಕ್ಷದ ವರೆಗೆ ಇರುತ್ತದೆ. ಕೊನೆಗೆ 11 ಲಕ್ಷ ರೂಪಾಯಿ ಪಡೆಯಬಹುದು . ಇದರಲ್ಲಿ ಮಹಿಳೆಯರು ಹೂಡಿಕೆ ಮಾಡುವ ವಿಧಾನ ರೂ. 11 ಲಕ್ಷದ ಲಾಭವನ್ನು ಪಡೆಯಲು ಬಯಸಿದರೆ ನೀವು ದಿನಕ್ಕೆ ರೂ 87 ಹೂಡಿಕೆ ಮಾಡಬೇಕಾಗುತ್ತದೆ.
ಈ ಪರಿಸ್ಥಿತಿಯಲ್ಲಿ, ಪ್ರೀಮಿಯಂ ವಾರ್ಷಿಕ 31,755 ರೂ. 10 ವರ್ಷಗಳ ಅವಧಿಯಲ್ಲಿ ಒಟ್ಟು ಠೇವಣಿ ಮೊತ್ತವು 3,17,550 ರೂ. ಅದೇ ಸಮಯದಲ್ಲಿ, ನೀವು 70 ವರ್ಷ ವಯಸ್ಸಿನಲ್ಲಿ ಹಣವನ್ನು ಹಿಂಪಡೆದರೆ, ನೀವು ಸುಲಭವಾಗಿ 11 ಲಕ್ಷ ರೂ. ಪಡೆಯಬಹುದಾಗಿದೆ.
ಎಲ್‌ಐಸಿಯ ಈ ಅತ್ಯುತ್ತಮ ಯೋಜನೆ ಮಹಿಳೆಯರನ್ನು ಶ್ರೀಮಂತರನ್ನಾಗಿ ಮಾಡುವುದರ ಮೂಲಕ ಮಹಿಳೆಯರ ಮನಸ್ಸನ್ನು ಗೆದ್ದಿರುತ್ತದೆ. ಈ ಯೋಜನೆಯನ್ನು ಮಹಿಳೆಯರು ಸರಿಯಾಗಿ ಪಾಲಿಸಿದರೆ ಭವಿಷ್ಯದಲ್ಲಿ ತುಂಬಾ ಒಳ್ಳೆಯ ಮೊತ್ತವನ್ನು ಪಡೆಯಬಹುದು. ಎಲ್‌ಐಸಿಯ ಆಧಾರ್ ಶಿಲಾ ಯೋಜನೆ ಪ್ರತಿ ಹೆಣ್ಣು ಮಕ್ಕಳಿಗೆ ಆಶಾದಾಯಕವಾಗಿದೆ. ಇಷ್ಟೇ ಅಲ್ಲದೆ ಎಲ್‌ಐಸಿಯ ಹಲವು ಯೋಜನೆಗಳು ಒಂದಕ್ಕೊಂದು ಜಾರಿಗೆ ಬರುತ್ತಿರುತ್ತದೆ.