CSC e-Governance Aadhaar Recruitment: ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಕಾಯುತ್ತಿರುವವರಿಗೆ ಇದೀಗ ಒಂದೊಳ್ಳೆ ಸಿಹಿ ಸುದ್ದಿ. ನೀವು ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ ಹುಡುಕುತಿದ್ದರೆ, ಈ ಮಾಹಿತಿ ನಿಮಗೆ ಉಪಯುಕ್ತ ಆಗಲಿದೆ. ಇದೀಗ 10 ನೇ ತರಗತಿ, ITI, 12ನೇ ತರಗತಿ ಅಥವಾ ಡಿಪ್ಲೊಮಾ ಪಾಸ್ ಆದವರಿಗೆ ಭಾರತ ಸರ್ಕಾರದ ಆಧಾರ್ ಸೇವಾ ಕೇಂದ್ರದಲ್ಲಿ ಉದ್ಯೋಗಕ್ಕೆ ಆಹ್ವಾನ ಮಾಡಲಾಗಿದೆ. ಹಾಗಾದರೆ ಈ ಹುದ್ದೆಗೆ ಯಾರು ಅರ್ಜಿ ಸಲ್ಲಿಸಬಹುದು..? ಸಂಬಳ ಎಷ್ಟು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಆಧಾರ್ ಸೇವಾ ಕೇಂದ್ರದಲ್ಲಿ ನೇಮಕಾತಿ ಆರಂಭ
ಇದೀಗ CSC e-Governance Services India Ltd ಅಡಿಯಲ್ಲಿ 282 ಆಧಾರ್ ಮೇಲ್ವಿಚಾರಕ ಮತ್ತು ಆಪರೇಟರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಭಾರತ ಸರ್ಕಾರದ ಅಡಿಯಲ್ಲಿ ವೃತ್ತಿ ಜೀವನವನ್ನು ನೆಡೆಸಲು ಬಯಸುವವರಿಗೆ ಇದು ಉತ್ತಮ ಅವಕಾಶ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. 18 ವರ್ಷ ಮೇಲ್ಪಟ್ಟ ಅಭ್ಯರ್ಥಿಗಳು ಜನವರಿ 31 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ಅರ್ಹತೆ
- ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ITI, 12ನೇ ತರಗತಿ ಅಥವಾ ಡಿಪ್ಲೊಮಾ ಪಾಸ್ ಆಗಿರಬೇಕು
- 01-01-2026 ಕನಿಷ್ಠ 18 ವರ್ಷ ವಯಸ್ಸಾಗಿರಬೇಕು
- UIDAI ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಆಧಾರ್ ಸೂಪರ್ ವೈಸರ್ ಮತ್ತು ಆಪರೇಟರ್ ಸರ್ಟಿಫಿಕೇಟ್ ಪಡೆದುಕೊಂಡಿರಬೇಕು
ಕೆಲಸದ ಸ್ಥಳ
ದೇಶದ ವಿವಿಧ ರಾಜ್ಯಗಳ ಜಿಲ್ಲಾ ಕೇಂದ್ರಗಳು, ಮುಖ್ಯವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಇತರೆ 23 ರಾಜ್ಯಗಳಲ್ಲಿ. ಕರ್ನಾಟಕದಲ್ಲಿ ನಿರ್ದಿಷ್ಟ ದೊಡ್ಡ ವ್ಯಾಪ್ತಿಯ ಹುದ್ದೆಗಳು ಪ್ರಸ್ತುತ ಘೋಷಣೆಯಲ್ಲಿ ಇಲ್ಲ, ಆದರೆ ರಾಷ್ಟ್ರೀಯ ಮಟ್ಟದಲ್ಲಿ ಅರ್ಜಿ ಸಲ್ಲಿಸಬಹುದು.
ಈ ರೀತಿಯಾಗಿ ಅರ್ಜಿ ಸಲ್ಲಿಸಿ
- ಅಧಿಕೃತ ಪೋರ್ಟಲ್ cscspv.in ಅಥವಾ UIDAI ನ್ಯೂಸ್ ಸೆಕ್ಷನ್ ಗೆ ಭೇಟಿಕೊಡಿ
- Recruitment/Apply Online ಲಿಂಕ್ ಕ್ಲಿಕ್ ಮಾಡಿ
- ನಂತರ ರಿಜಿಸ್ಟ್ರೇಷನ್ ಅಥವಾ ಲಾಗಿನ್ ಮೇಲೆ ಕ್ಲಿಕ್ ಮಾಡಿ
- ಫಾರ್ಮ್ ಭರ್ತಿ ಮಾಡಿ, ಡಾಕ್ಯುಮೆಂಟ್‌ಗಳು ಅಪ್‌ಲೋಡ್ ಮಾಡಿ (ಸರ್ಟಿಫಿಕೇಟ್, ಶೈಕ್ಷಣಿಕ ಮಾರ್ಕ್‌ಶೀಟ್, PVC, ಫೋಟೋ ಇತ್ಯಾದಿ)
- ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಮಾಡಿ
- ಸಬ್‌ಮಿಟ್ ಮಾಡಿ, ಪ್ರಿಂಟ್ ತೆಗೆದುಕೊಳ್ಳಿ
2025 ಡಿಸೆಂಬರ್ 27 ರಿಂದ ಅರ್ಜಿ ಆಹ್ವಾನ ಮಾಡಲಾಗಿದ್ದು 31 ಜನವರಿ 2026 ಕೊನೆಯ ದಿನಾಂಕ ಆಗಿದೆ.
ಪರೀಕ್ಷಾ ಪ್ರಕ್ರಿಯೆ
- 100 MCQ ಪ್ರಶ್ನೆಗಳು, 120 ನಿಮಿಷ
- ನೆಗೆಟಿವ್ ಮಾರ್ಕ್ ಇಲ್ಲ
- ಪಾಸಿಂಗ್ ಅಂಕ, Supervisor ಗೆ 55+ ಅಂಕಗಳು, Operator ಗೆ 50+ ಅಂಕಗಳು
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಮತ್ತು ಕಡ್ಡಾಯ ಅರ್ಹತೆ
- UIDAI ಅನುಮೋದಿತ ಟೆಸ್ಟಿಂಗ್ ಏಜೆನ್ಸಿ (ಮುಖ್ಯವಾಗಿ NSEIT)ಯಿಂದ ಪಡೆದ Aadhaar Supervisor/Operator Certificate
- ಕಂಪ್ಯೂಟರ್ ಬೇಸಿಕ್ ಜ್ಞಾನ (MS Office, ಇಂಟರ್ನೆಟ್)
- ಸ್ಥಳೀಯ ಭಾಷೆಯಲ್ಲಿ ಓದುವ/ಬರೆಯುವ/ಮಾತನಾಡುವ ಸಾಮರ್ಥ್ಯ
ಅರ್ಜಿ ಸಲ್ಲಿಸುವವರಿಗೆ ಕೆಲವು ಸಲಹೆ
- ಮೊದಲು NSEIT ಪರೀಕ್ಷೆ ಪಾಸ್ ಮಾಡಿ ಸರ್ಟಿಫಿಕೇಟ್ ಪಡೆಯಿರಿ – ಇಲ್ಲದಿದ್ದರೆ ಅರ್ಜಿ ತಿರಸ್ಕರಣೆ ಆಗುತ್ತದೆ
- ಅಧಿಕೃತ ವೆಬ್ಸೈಟ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು
- ಹೊಸ ಅಪ್ಡೇಟ್ ಗಾಗಿ ಅಧಿಕೃತ ವೆಬ್ಸೈಟ್ ನಲ್ಲಿ ಪದೇಪದೇ ಚೆಕ್ ಮಾಡಿ
- ಕರ್ನಾಟಕಕ್ಕೆ ಸಂಬಂಧಿಸಿದಂತೆ https://ceg.karnataka.gov.in/aadhaar ಅಥವಾ ಸ್ಥಳೀಯ CSC ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸಿ
Disclaimer: This information is provided for awareness purposes only. For personalised legal advice, consult a qualified professional and refer to official government notifications.

