Aadhaar Card: ಎಲ್ಲಾ ಕೆಲಸಕ್ಕೂ ಆಧಾರ್ ಕಾರ್ಡ್ ಬಳಸುವವರೇ ಎಚ್ಚರ, 8 ದಿನದಲ್ಲಿ ಈ ಕೆಲಸ ಮಾಡದಿದ್ದರೆ ದಂಡ ಖಚಿತ.

ಆಧಾರ್ ಕಾರ್ಡ್ ಬಳಕೆದಾರರು ಇನ್ನು 8 ದಿನದ ಒಳಗಾಗಿ ಈ ಕೆಲಸ ಮಾಡದಿದ್ದರೆ ದಂಡ ಖಚಿತ.

Aadhaar Update Online Process: ದೇಶದಲ್ಲಿ Aadhaar Card ಎಲ್ಲ ವೈಯಕ್ತಿಕ ದಾಖಲೆಗಳಿಗಿಂತಲೂ ಹೆಚ್ಚು ಪ್ರಮುಖವಾಗಿದೆ. ಆಧಾರ್ ನ ಮಾಹಿತಿ ನೀಡದೆ ನೀವು ಇಂದಿನ ಕಾಲದಲ್ಲಿ ಯಾವುದೇ ಕೆಲಸವನ್ನು ಪೂರ್ಣಗೊಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರೆ ತಪ್ಪಾಗಲಾರದು.

ಇನ್ನು UIDAI ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಆಗಾಗ ಹೊಸ ಹೊಸ ನಿಯಮವನ್ನು ಪರಿಚಯಿಸುತ್ತ ಇರುತ್ತದೆ. ಆಧಾರ್ ಹೊಂದಿರುವ ಪ್ರತಿಯೊಬ್ಬರೂ ಕೂಡ UIDAI ನಿಯಮವನ್ನು ಪಾಲಿಸುವುದು ಅಗತ್ಯವಾಗಿದೆ. ಸದ್ಯ UIDAI ಹೊಸ ನಿಯಮವನ್ನು ಜಾರಿಗೊಳಿಸಿದ್ದು, 8 ದಿನದಲ್ಲಿ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

Aadhaar Update Online Process
Image Credit: Navi

ಎಲ್ಲಾ ಕೆಲಸಕ್ಕೂ ಆಧಾರ್ ಕಾರ್ಡ್ ಬಳಸುವವರೇ ಎಚ್ಚರ
UIDAI ಹೊಸ ನಿಯಮದ ಪ್ರಕಾರ, 10 ವರ್ಷ ಹಳೆಯ Aadhar Card ನ ಮಾಹಿತಿಯನ್ನು ನವೀಕರಿಸುವುದು ಅವಶ್ಯಕ. ಮಾರ್ಚ್ 14 ರೊಳಗೆ ನಿಮ್ಮ 10 ವರ್ಷದ Aadhar Card ನಲ್ಲಿ ಹೆಸರು ಅಥವಾ ವಿಳಾಸವನ್ನು ನೀವು ನವೀಕರಿಸಿದರೆ, ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಸಾಮಾನ್ಯವಾಗಿ ಆಧಾರ್‌ ನಲ್ಲಿ ಪ್ರತಿ ವಿವರವನ್ನು (ಜನ್ಮ ದಿನಾಂಕ ಮತ್ತು ಬಯೋಮೆಟ್ರಿಕ್ ಡೇಟಾ) ನವೀಕರಿಸಲು ರೂ. 50 ಶುಲ್ಕವಿದೆ. ನೀವು Off Line ನಲ್ಲಿ ಇದನ್ನು ನವೀಕರಿಸಿದರೂ ಸಹ, ನೀವು UIDAI ನಿಗದಿಪಡಿಸಿದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೀಗಾಗಿ ನಿಮ್ಮ Aadhar Card ಅನ್ನು ಮಾರ್ಚ್ 14 ರೊಳಗೆ ಉಚಿತವಾಗಿ ನವೀಕರಿಸಿಕೊಳ್ಳಿ.

8 ದಿನದಲ್ಲಿ ಈ ಕೆಲಸ ಮಾಡದಿದ್ದರೆ ದಂಡ ಖಚಿತ
UIDAI ಈ ಹಿಂದೆ ಡಿಸೆಂಬರ್ 14, 2023 ರವರೆಗೆ ಆಧಾರ್ ಅನ್ನು ಉಚಿತವಾಗಿ Update ಮಾಡುವ ಸೌಲಭ್ಯವನ್ನು ನೀಡಿತ್ತು. ನಂತರ ಅದನ್ನು ಮಾರ್ಚ್ 14 2024 ರ ವರೆಗೆ ವಿಸ್ತರಿಸಲಾಗಿದೆ. 10 ವರ್ಷಗಳ ಹಿಂದೆ Aadhar Card ಮಾಡಿದವರಿಗೆ ಅಥವಾ ಅದನ್ನು ನವೀಕರಿಸದವರಿಗೆ ಇದೀಗ UIDAI ಒಂದೊಳ್ಳೆ ಅವಕಾಶವನ್ನು ನೀಡಿದೆ. ಇನ್ನು 8 ದಿನಗಳ ಕಾಲ Online ನಲ್ಲಿ ಯಾವುದೇ ಶುಲ್ಕವಿಲ್ಲದೆ Aadhar Card ಅನ್ನು ನವೀಕರಿಸಿಕೊಳ್ಳಬಹುದು. ಮಾರ್ಚ್ 14 ರ ನಂತರ ಈ ಸೇವೆಗೆ ನೀವು ದಂಡದ ರೂಪದಲ್ಲಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

UIDAI Free Aadhaar Update
Image Credit: Jagran

Online ಅಲ್ಲಿ Aadhaar Card ಅನ್ನು ಈ ರೀತಿಯಾಗಿ ನವೀಕರಿಸಿ
•ಮೊದಲು UIDAI Website ಗೆ ಭೇಟಿ ನೀಡಬೇಕು.

Join Nadunudi News WhatsApp Group

•UIDAI Website ನಲ್ಲಿ ಲಾಗಿನ್ ಆಗಿ Password ರಚಿಸಬೇಕು.

•ನಂತರ ನನ್ನ ಆಧಾರ್ ಮೇಲೆ ಟ್ಯಾಬ್ ಮಾಡಿ ಆಧಾರ್ ವಿವರಗಳನ್ನು ನವೀಕರಿಸಿ ನಮೂದಿಸಬೇಕು.

•ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.

•ನಂತರ ನೀವು ಬದಲಾವಣೆ ಮಾಡಬೇಕಾದ ವಿವರವನ್ನು ಭರ್ತಿ ಮಾಡಬೇಕು.

•ನಂತರ ಡಾಕ್ಯುಮೆಂಟ್ಸ್ ಅಪ್ಡೇಟ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.

•ಇಲ್ಲಿ ನೀವು ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ನೋಡುತ್ತಿರಿ.

•ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ನಂತರ ವಿಳಾಸವನ್ನು ನವೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಅಪ್‌ ಲೋಡ್ ಮಾಡಿ.

•ನಂತರ, ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸ್ವೀಕರಿಸಿ.

•ನಂತರ ನೀವು ನವೀಕರಣ ವಿನಂತಿ ಸಂಖ್ಯೆ (URN) ಸಂಖ್ಯೆ 14 ಅನ್ನು ಪಡೆಯುತ್ತೀರಿ.

•ಇದರ ಮೂಲಕ ನೀವು ಆಧಾರ್ ನವೀಕರಣ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದು.

Join Nadunudi News WhatsApp Group