Aadhar 24/7: ಆಧಾರ್ ಕಾರ್ಡ್ ಬಳಸುವವರಿಗೆ ಕೇಂದ್ರದಿಂದ 24 /7 ಹೊಸ ಸೇವೆ ಆರಂಭ.

ಆಧಾರ್ ಕಾರ್ಡ್ ನ ಮೂಲಕ ಹೊಸ ಸೇವೆಯನ್ನು ಆರಂಭಿಸಿದ ಸರ್ಕಾರ.

Aadhar Card Service: ಆಧಾರ್ ಕಾರ್ಡ್(Aadhar Card) ಜನರ ಅಗತ್ಯವಾದ ದಾಖಲೆಯಾಗಿದೆ. ಈಗಿನ ಕಾಲದಲ್ಲಿ ಆಧಾರ್ ಕಾರ್ಡ್ ಇಲ್ಲದೆ ಯಾವ ಕೆಲಸವೂ ಸಹ ನಡೆಯುವುದಿಲ್ಲ. ಆಧಾರ್ ಕಾರ್ಡ್ ನಿಂದಲೇ ಈಗ ಎಲ್ಲ ಕೆಲಸವನ್ನು ಸಹ ಪೂರೈಸಿಕೊಳ್ಳಬಹುದು. ಇದೀಗ ಸರ್ಕಾರ ಭಾರತೀಯರಿಗೆ ಆಧಾರ್ ಕಾರ್ಡ್ ಮೂಲಕ ಹೊಸದೊಂದು ಸೇವೆಯನ್ನು ಕಲ್ಪಿಸಿಕೊಟ್ಟಿದೆ.

New Information for Aadhaar Card Users
Image Credit: Navi

ಆಧಾರ್ ನಲ್ಲಿ ಹೊಸ ಸೇವೆ
ಯುಐಡಿ ಎ ಐ ಆಧಾರ್ ಕಾಯಿದೆ 2016 ರ ನಿಬಂಧನೆಗಳ ಅಡಿಯಲ್ಲಿ ಭಾರತ ಸರ್ಕಾರವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಿದ ಶಾಶನಬದ್ದ ಪ್ರಾಧಿಕಾರವಾಗಿದ್ದು ಈ ಪ್ರಾಧಿಕಾರವು ಟೋಲ್ -ಫ್ರೀ ಸಂಖ್ಯೆಯನ್ನು ಹೊಂದಿದೆ.

ಈಗಾಗಲೇ ಆಧಾರ್ ಪ್ರಾಧಿಕಾರ ಟೋಲ್ ಫ್ರೀ ಸಂಖ್ಯೆಯನ್ನು ಹೊಂದಿದ್ದು ಹಲವಾರು ವಿಧದಲ್ಲಿ ಉಚಿತ ಸೇವೆ ನೀಡುತ್ತಾ ಬರುತ್ತಿದೆ. ಬಳಕೆದಾರರಿಗೆ ಇನ್ನಷ್ಟು ಪ್ರಯೋಜನ ನೀಡಲು ಮುಂದಾಗಿದೆ. ಹಾಗೆಯೇ UIDAI ಯ ಮಾನ್ಯ ಟೋಲ್ ಫ್ರೀ ಸಂಖ್ಯೆ 1947 ರಲ್ಲಿ ಆಗಿದ್ದು, ಇದನ್ನು 2016 ರಲ್ಲಿ ಪರಿಚಯಿಸಲಾಗಿತ್ತು. ಈ ಟೋಲ್ ಫ್ರೀ ಸಂಖ್ಯೆ ಎಲ್ಲಾ ಸಮಯದಲ್ಲೂ ಬಳಕೆಗೆ ಲಭ್ಯವಿದೆ.

New Information for Aadhaar Card Users
Image Credit: News18

ಆಧಾರ್ UIDAI ಹೊಸ ಸೇವೆ
ಈ ವರ್ಷದ ಆರಂಭದಲ್ಲಿ UIDAI ಈ ಟೋಲ್ ಫ್ರೀ ಸಂಖ್ಯೆಯಲ್ಲಿ ಹಲವಾರು ಹೊಸ ಸೇವೆಗಳನ್ನು ಹೊರ ತಂದಿತ್ತು. ಇದರೊಂದಿಗೆ IVRS ನಲ್ಲಿ ಹೊಸ ಸೇವೆಗಳನ್ನು ಸಹ ನೀಡಲಾಗಿದ್ದು ಈ ಮೂಲಕ ಜನರು ತಮ್ಮ ಆಧಾರ್ ನೋಂದಣಿ ಅಥವಾ ನವೀಕರಣ ಸ್ಥಿತಿ ಪಿವಿಸಿ ಕಾರ್ಡ್ ಸ್ಥಿತಿಯನ್ನು ಕಂಡುಕೊಳ್ಳಲು ಎಸ್ ಎಂ ಎಸ್ ಸೇವೆ ಪಡೆದುಕೊಳ್ಳಬಹುದು.

ಇದಕ್ಕಾಗಿ UIDAI ಟೋಲ್ ಫ್ರೀ ಸಂಖ್ಯೆ ಅಂದರೆ 24 X7 ಗೆ ಕರೆ ಮಾಡಬಹುದು ಎಂದು UDAI ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಜೊತೆಗೆ ಚಾಟ್ ಬಾಟ್ ಆಧಾರ್ ಮಿತ್ರಕ್ಕೂ ಎಂಟ್ರಿ ಕೊಟ್ಟು ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group