Ads By Google

Aadhar Update: ಮೊಬೈಲ್ ಮೂಲಕ ಆಧಾರ್ ಕಾರ್ಡ್ ಅಡ್ರೆಸ್ ಚೇಂಜ್ ಮಾಡುವುದು ಹೇಗೆ…? ಇಲ್ಲಿದೆ ಸುಲಭ ವಿಧಾನ

Aadhar Card Address Change Online

Image Source: India Today

Ads By Google

Aadhar Card Address Change Online: ದೇಶದಲ್ಲಿ ಆಧಾರ್ ಕಾರ್ಡ್ (Aadhar Card) ಇದು ಬಹಳ ಮುಖ್ಯವಾದ ದಾಖಲೆ ಆಗಿದೆ. ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡ್ (Aadhar Card) ಕಡ್ಡಾಯ ಆಗಿದ್ದು, ಆಧಾರ್ ಕಾರ್ಡ್ ಇಲ್ಲದೇ ಯಾವ ಕೆಲಸವನ್ನು ಕೂಡ ಮಾಡಲು ಸಾಧ್ಯವಿಲ್ಲಾ. ಹೀಗಿರುವಾಗ ನಿಮ್ಮ ಆಧಾರ್ ಕಾರ್ಡಿನಲ್ಲಿರುವ ನಿಮ್ಮ ಮನೆ ವಿಳಾಸವನ್ನು ಬದಲಾಯಿಸಬೇಕಾದರೆ ಚಿಂತಿಸುವ ಅಗತ್ಯ ಇಲ್ಲ. ಬಹಳ ಕಡಿಮೆ ಸಮಯದಲ್ಲಿ ಮನೆಯಲ್ಲೇ ಕುಳಿತು ಈ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ. ಹೀಗಿದೆ ಈ ವಿಚಾರದ ಸಂಪೂರ್ಣ ಮಾಹಿತಿ .

Image Credit: News 18

ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಕಡ್ಡಾಯವಾಗಿದೆ

ಭಾರತದಲ್ಲಿ ಆಧಾರ್ ಕಾರ್ಡ್ ನ ಮಹತ್ವ ಹೆಚ್ಚಿದೆ, ಎಲ್ಲಾ ಕಾರ್ಯಗಳಿಗೂ ಆಧಾರ್ ಕಾರ್ಡ್ ಮುಖ್ಯ ಆಗಿದ್ದು, ಕಳೆದ ಹತ್ತು ವರ್ಷಗಳಿಂದ ಆಧಾರ್ ಕಾರ್ಡ ಅನ್ನು ಬಳಸುತ್ತಿರುವವರು ಅಪ್ಡೇಟ್ ಮಾಡಿಕೊಳ್ಳಿ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ UIDAI ಈ ಹಿಂದೆಯೇ ತಿಳಿಸಿದೆ. ಅಷ್ಟೇ ಅಲ್ಲದೆ ಆಧಾರ್ ತಿದ್ದುಪಡಿ ಅಥವಾ ನವೀಕರಣಕ್ಕೆ ಯಾವುದೇ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಇಲ್ಲ ಬಹಳ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿಯೇ ನವೀಕರಣ ಮಾಡುವ ಅವಕಾಶವನ್ನು ಕೂಡ ಒದಗಿಸಿಕೊಡಲಾಗಿದೆ.

Image Credit: News 18

ಆಧಾರ್ ಕಾರ್ಡ್ ನಲ್ಲಿ ಮನೆ ವಿಳಾಸವನ್ನು ಈ ರೀತಿಯಾಗಿ ಬದಲಾಯಿಸಿಕೊಳ್ಳಿ

ಮೊಬೈಲ್ ನಲ್ಲಿ ಆನ್ಲೈನ್ ಮೂಲಕವೇ ಈ ಕೆಲಸವನ್ನು ಮಾಡಿಕೊಳ್ಳಲು ಸಾಧ್ಯವಾಗಿದ್ದು, ಮೊದಲನೇದಾಗಿ https://myaadhar.uidai.gov.in / ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ, ನಂತರ ಆಧಾರ್ ಸಂಖ್ಯೆ ಹಾಗು ಕ್ಯಾಪ್ಚ್ ಸಂಖ್ಯೆಯನ್ನು ನಮೂದು ಮಾಡಬೇಕು. ಈಗ ನಿಮ್ಮ ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ , ನಂತರ ಒಟಿಪಿ ನಮೂದಿಸಿ ಈಗ ನೀವು ಯುಐಡಿಎಐ ವೆಬ್ಸೈಟ್ ಲಾಗಿನ್ ಆಗಿದ್ದೀರಿ.

ತದನಂತರ ಹೊಸ ಪುಟ ತೆರೆಯುತ್ತದೆ ಆಗ ಅಪ್ಡೇಟ್ ಆಧಾರ ಆನ್ಲೈನ್ ಅಥವಾ ಕುಟುಂಬ ಮುಖ್ಯಸ್ಥರ ಆಧಾರಿತ ವಿಳಾಸ ಅಪ್ಡೇಟ್ ಎಂಬ ಎರಡು ಆಯ್ಕೆ ಕಾಣುತ್ತದೆ. ಅದರಲ್ಲಿ ಮೊದಲ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಆಧಾರ ನವೀಕರಿಸಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಈಗ ಅಗತ್ಯ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಿ, ಆನ್ಲೈನ್ ಪೇಮೆಂಟ್ ಮಾಡಬೇಕು. ಶುಲ್ಕ ಪಾವತಿ ಮಾಡಿದ ನಂತರ ನಿಮ್ಮ ಆಧಾರ್ ನವೀಕರಣ ಆಗುತ್ತದೆ. ಮನೆ ವಿಳಾಸ ಬದಲಾಯಿಸಲು ರೇಷನ್ ಕಾರ್ಡ್, ವಿದ್ಯುತ್ ಬಿಲ್ ಇನ್ನಿತರ ಮನೆಯ ಯಾವುದೇ ಗುರುತಿನ ಚೀಟಿ ದಾಖಲೆಗಳನ್ನು ಒದಗಿಸಬೇಕು.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in