Aadhar Name Change: ಮದುವೆಯ ಹೆಣ್ಣು ಮಕ್ಕಳು ಆಧಾರ್ ಕಾರ್ಡ್ ಹೆಸರು ಬದಲಿಸಬೇಕು ಏನು ಮಾಡಬೇಕು…? ಸುಲಭ ವಿಧಾನ.
ಮದುವೆಯ ನಂತರ ಆಧಾರ್ ಕಾರ್ಡ್ ಹೆಸರನ್ನ ಬದಲಾಯಿಸುವ ವಿಧಾನ.
Aadhar Card Initial Change: ಆಧಾರ್ ಕಾರ್ಡ್ (Aadhar Card) ನಮ್ಮ ದೇಶದ ಪ್ರಮುಖ ಗುರುತಿನ ಚೀಟಿ ಎಂದು ಹೇಳಬಹುದು. ಹೌದು ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸವನ್ನ ಮಾಡಲು ಸಾಧ್ಯವಿಲ್ಲ. ಹೌದು ಬ್ಯಾಂಕ್ ಖಾತೆಯಿಂದ ಹಿಡಿದು ಎಲ್ಲಾ ಕೆಲಸಗಳಿಗೆ Aadhar Card ಪ್ರಮುಖವಾದ ದಾಖಲೆ ಆಗಿದೆ. ಸದ್ಯ ಆಧಾರ್ ಕಾರ್ಡ್ ಅನ್ನು ತಮ್ಮ ಎಲ್ಲಾ ಇತರೆ ದಾಖಲೆಗಳಿಗೆ ಲಿಂಕ್ ಮಾಡಿರುವ ಕಾರಣ ಆಧಾರ್ ಕಾರ್ಡ್ ಮೂಲಕ ನಮ್ಮ ಗುರುತು ಬಹಳ ಸುಲಭವಾಗಿ ಹಿಡಿಯಬಹುದು ಎಂದು ಹೇಳಬಹುದು.
ನಮ್ಮ ದೇಶದಲ್ಲಿ ಮದುವೆಯ ನಂತರ ಹೆಂಡತಿಯ ಹೆಸರಿನ ಮುಂದೆ ಗಂಡನ ಹೆಸರನ್ನ ಹಾಕಿಸುವುದು ಸರ್ವೇ ಸಾಮಾನ್ಯ ಆಗಿದೆ. ಹೌದು ಮದುವೆಯ ನಂತರ ಹೆಣ್ಣು ಮಕ್ಕಳು ತಮ್ಮ ಗುರುತಿನ ಚೀಟಿಯಲ್ಲಿ ಗಂಡನ ಹೆಂಸರನ್ನ ಸೇರಿಸುತ್ತಾರೆ.
ಮದುವೆಯ ನಂತರ ಹೆಸರು ಬದಲಾಯಿಸುವ ಮಹಿಳೆಯರು
ಹೌದು ಮದುವೆಯ ನಂತರ ಸಾಕಷ್ಟು ಮಹಿಳೆಯರು ತಮ್ಮ ಹೆಸರನ್ನ ಬದಲಾಯಿಸಿಕೊಳ್ಳುತ್ತಾರೆ. ಹೌದು ಸಾಕಷ್ಟು ಯುವತಿಯರು ಮದುವೆಯ ನಂತರ ತನ್ನ ಇನಿಷಿಯಲ್ ನೇಮ್ ಆಗಿ ಗಂಡನ ಹೆಸರನ್ನ ಬದಲಿಸಿಕೊಳ್ಳುತ್ತಾರೆ. ಇನ್ನು ಹೆಸರನ್ನ ಬದಲಾಯಿಸಲು ಕೆಲವು ನಿಯಮಗಳು ಇದ್ದು ಆ ನಿಯಮಗಳ ಅಡಿಯಲ್ಲಿ ಯುವತಿಯರು ಹೆಸರನ್ನ ಬದಲಾಯಿಸಿಕೊಳ್ಳಬೇಕು.
ಮದುವೆಯ ನಂತರ ಹೆಸರು ಬದಲಾಯಿಸಲು ಬೇಕಾಗುವ ದಾಖಲೆಗಳು ಏನು
ಮದುವೆಯ ನಂತರ ಮಹಿಳೆಯರು ತಮ್ಮ ಹೆಸರಿನ ಗಂಡನ ಉಪನಾಮವನ್ನ ಸೇರಿಸಲು ಹೆಚ್ಚಿನ ಕಷ್ಟಪಡುವ ಅಗತ್ಯ ಇಲ್ಲ ಮತ್ತು ಬಹಳ ಸುಲಭವಾಗಿ ಈ ದಾಖಲೆಗಳನ್ನ ನೀಡುವುದರ ಮೂಲಕ ಹೆಸರನ್ನ ಬದಲಾಯಿಸಿಕೊಳ್ಳಬಹುದು. ಇನ್ನು ಹೆಸರನ್ನ ಬದಲಾಯಿಸಲು ಮೊದಲನೆಯದಾಗಿ ಮಹಿಳೆಯರು ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು ನಂತರ ಅಲ್ಲಿ ಕೆಲವು ದಾಖಲೆ ನೀಡುವುದರ ಮೂಲಕ ಹೆಸರು ಬದಲಾಯಿಸುವ ಪ್ರಕ್ರಿಯೆ ಮಾಡಬೇಕು.
ಆಧಾರ್ ಕಾರ್ಡ್ ಹೆಸರು ಬದಲಾಯಿಸುವ ಪ್ರಕ್ರಿಯೆ
* ಸೇವಾ ಕೇಂದ್ರದಲ್ಲಿ ಅರ್ಜಿ ಫಾರ್ಮ್ ಭರ್ತಿ ಮಾಡಬೇಕು
*ಅರ್ಜಿ ಫಾರ್ಮ್ ನಲ್ಲಿ ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ನಂಬರ್ ಮತ್ತು ವಿಳಾಸವನ್ನ ಸರಿಯಾಗಿ ಭರ್ತಿ ಮಾಡಬೇಕು.
*ಅರ್ಜಿಯಲ್ಲಿ ಕೇಳಿದ ಎಲ್ಲಾ ದಾಖಲೆಗಳನ್ನ ಅರ್ಜಿ ಫಾರ್ಮ್ ಜೊತೆಗೆ ಲಗತ್ತಿಸಬೇಕು.
*ಇನ್ನು ಅರ್ಜಿ ಜೊತೆಗೆ ಪತಿಯ ಆಧಾರ್ ಕಾರ್ಡ್, ಮದುವೆಯ ಧ್ರಡೀಕರಣ ಪಾತ್ರ ಮತ್ತು ಮದುವೆಯ ಕಾರ್ಡ್ ಕಾಗತ್ತಿಸಬೇಕು.
*ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅರ್ಜಿಯನ್ನ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುತ್ತದೆ.
*ಅರ್ಜಿ ಸ್ವೀಕಾರ ಮಾಡಿದ ನಂತರ ನಿಮ್ಮ ಬೆರಳಚ್ಚು ಪರೀಕ್ಷೆ ಮಾಡಲಾಗುತ್ತದೆ.
*ಅರ್ಜಿ ಜೊತೆಗೆ ನಿಮ್ಮ ಫೋಟೋ ಕ್ಲಿಕ್ ಮಾಡಲಾಗುತ್ತದೆ.
ಈ ಹಂತವನ್ನ ಪೂರ್ಣ ಮಾಡಿದ ನಂತರ 50 ರೂಪಾಯಿ ಸರ್ಕಾರೀ ಶುಲ್ಕವನ್ನ ಪಾವತಿ ಮಾಡಬೇಕಾಗುತ್ತದೆ. ಇದಾದ ಕೆಲವು ದಿನದ ನಂತರ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗಿ ನಿಮ್ಮ ಮನೆಗೆ ಪೋಸ್ಟ್ ಮೂಲಕ ಬರುತ್ತದೆ.