Free Update: ಸೆಪ್ಟೆಂಬರ್ 30 ರ ನಂತರ ಇಂತವರ ಆಧಾರ್ ಕಾರ್ಡ್ ನಿಷ್ಕ್ರಿಯ ಆಗಲಿದೆ, ಬೇಗನೆ ಈ ಕೆಲಸ ಮಾಡಿ.

ಆಧಾರ್ ಕಾರ್ಡ್ ಹೊಂದಿರುವ ಇಂತಹ ಜನರು ಆದಷ್ಟು ಬೇಗ ತಮ್ಮ ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕು.

Aadhaar Card Inactivatio:  ಯುಐಡಿಎಐ (UIDAI) ಆಧಾರ್ ಕಾರ್ಡ್ (Aadhar Card) ಸಂಬಂಧಿತ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇದೆ. ವೈಯಕ್ತಿಕ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.

ಇನ್ನು ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸಗಳು ಕೂಡ ಪೂರ್ಣಗೊಳ್ಳುವುದಿಲ್ಲ. ಆಧಾರ್ ಕಾರ್ಡ್ ನಲ್ಲಿ ಯಾವುದೇ ರೀತಿಯ ತಪ್ಪಿದ್ದಲ್ಲಿ ನೀವು ಮನೆಯಲ್ಲಿ ಕುಳಿತು ಆಧಾರ್ ನಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು.

UIDAI offers free Aadhaar update
Image Credit: News18

ಆಧಾರ್ ಕಾರ್ಡ್ ಹೊಂದಿರುವವರಿಗೆ ಬಿಗ್ ಅಪ್ಡೇಟ್
ನೂತನ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗಂತೂ ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗಿದೆ. ಆಧಾರ್ ಕಾರ್ಡ್ ಅನ್ನು 10 ವರ್ಷ ಗಳ ಬಳಿಕ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಜನರಿಗೆ ಯಾವುದೇ ಕೆಲಸ ಮಾಡಬೇಕಿದ್ದರೂ ಆಧಾರ್ ಕಾರ್ಡ್ ಬೇಕಿದೆ. ಆದರೆ ಇತ್ತೀಚಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು UIDAI ಈಗಾಗಲೇ ಆದೇಶ ಹೊರಡಿಸಿದೆ. ಹತ್ತು ವರ್ಷದಿಂದ ಒಮ್ಮೆಯೂ ಅಪ್ಡೇಟ್ ಮಾಡದೆ ಇರುವ ಆಧಾರ್ ಕಾರ್ಡ್ ನವೀಕರಣ ಕಡ್ಡಾಯವಾಗಿದೆ.

UIDAI ನೀಡಿದೆ ಉಚಿತ ಆಧಾರ್ ನವೀಕರಣ
ಈ ಹಿಂದೆ ಜೂನ್ 14 ರ ತನಕ ಆಧಾರ್ ನವೀಕರಣ ಪ್ರಕ್ರಿಯೆ ಉಚಿತವಾಗಿ ಸಿಗುತ್ತಿತ್ತು. ನಿಮ್ಮ ಆಧಾರ್ ಕಾರ್ಡ್ ನವೀಕರಣ ಬಾಕಿ ಇದ್ದರೆ ಜೂನ್ 14 ರ ನಂತರ ಆಧಾರ್ ನವೀಕರಣಕೆ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನುವ ಮಾಹಿತಿ ಹರಿದಾಡಿತ್ತು. ಆದರೆ ಇದೀಗ ಉಚಿತ ಆಧಾರ್ ನವೀಕರಣ ಗಡುವನ್ನು ಯುಐಡಿಎಐ ವಿಸ್ತರಿಸಿದೆ. ಇನ್ನು ಜನಸಾಮಾನ್ಯರಿಗೆ UIDAI ಆಧಾರ್ ನವೀಕರಣಕ್ಕೆ ಎಷ್ಟು ಸಮಯಾವಕಾಶವನ್ನು ನೀಡಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Aadhaar Card Free Update
Image Credit: News18

ಉಚಿತ ಆಧಾರ್ ನವೀಕರಣಕ್ಕೆ ದಿನಾಂಕ ವಿಸ್ತರಣೆ
ಮೈ ಆಧಾರ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ನಲಿ ಆಧಾರ್ ಅನ್ನು ನವೀಕರಿಸಿಕೊಳ್ಳಬಹುದು. https://myaadhaar.uidai.gov.in / ಗೆ ಭೇಟಿ ನೀಡುವ ಮೂಲಕ ಆಧಾರ್ ವಿವರ ಮತ್ತು ವಿಳಾಸದ ದಾಖಲೆಗಳನ್ನು ಆನ್ಲೈನ್ ನಲ್ಲಿ ಫ್ರೀ ಆಫ್ ಕಾಸ್ಟ್ ನಲ್ಲಿ ನವೀಕರಿಸಿಕೊಳ್ಳಬಹುದು.

Join Nadunudi News WhatsApp Group

ಇದೀಗ ಯುಐಡಿಎಐ ಉಚಿತ ಆಧಾರ್ ನವೀಕರಣದ ದಿನಾಂಕವನ್ನು ಸೆಪ್ಟೆಂಬರ್ 30, 2023 ರತನಕ ವಿಸ್ತರಿಸಿದೆ. ಇನ್ನು ಸೆಪ್ಟೆಂಬರ್ ತನಕ ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು.

ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸುವುದು ಹೇಗೆ
* https://myaadhaar.uidai.gov.in / ನಲ್ಲಿ ಲಾಗಿನ್ ಮಾಡಬೇಕು.

*ಅಲ್ಲಿ ಡಾಕ್ಯುಮೆಂಟ್ ಅಪ್ಡೇಟ್ ಆಯ್ಕೆ ಕಾಣುತ್ತದೆ. ಅಲ್ಲಿ ನಿಮ್ಮ ಆಧಾರ್ ವಿವರವನ್ನು ನೀಡಲಾಗುತ್ತದೆ.
*ವಿವರಗಳನ್ನು ಪರಿಶೀಲಿಸಿದ ನಂತರ ಹೈಪರ್ ಲಿಂಕ್ ಅನ್ನು ಆಯ್ಕೆ ಮಾಡಬೇಕು.

Date extension for free Aadhaar renewal
Image Credit: Msn

*ಡ್ರಾಫ್ ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳನ್ನು ಆಯ್ಕೆ ಮಾಡಬೇಕು

*ನಂತರ ಸ್ಕಾನ್ ಮಾಡಿದ ಪ್ರತಿಯನ್ನು ಅಪ್ಲೋಡ್ ಮಾಡಿ ನಂತರ ಶುಲ್ಕ ಪಾವತಿ ಆಯ್ಕೆ ಆರಿಸಬೇಕು.

Join Nadunudi News WhatsApp Group