DL And Aadhar: ನಿಮ್ಮ ಆಧಾರ್ ಕಾರ್ಡಿಗೆ ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವುದು ಹೇಗೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

DL ಅನ್ನು ಆಧಾರ್ ಕಾರ್ಡ್ ನೊಂದಿಗೆ ಆನ್ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಲಿಂಕ್ ಮಾಡುವ ವಿಧಾನ.

Aadhar Card Link With Driving Licence Online And Offline Process: ದೇಶದಲ್ಲಿ ವಾಹನ ಚಲಾಯಿಸಲು ಲೈಸೆನ್ಸ್ (Driving Licence) ಇರಬೇಕು ಮತ್ತು ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ ಪೊಲೀಸರಿಗೆ ದಂಡವನ್ನ ಕೊಡಬೇಕಾಗುತ್ತದೆ. ವಾಹನ ಸವಾರರಿಗೆ DL ಮುಖ್ಯ ದಾಖಲೆಯಾಗಿದೆ.

ಸದ್ಯ Driving licence ಹೊಂದಿರುವ ಪ್ರತಿಯೊಬ್ಬರು ಕೂಡ Aadhaar Link ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ನೀವು DL ಅನ್ನು ಆಧಾರ್ ಕಾರ್ಡ್ ನೊಂದಿಗೆ ಆನ್ಲೈನ್ ಮೂಲಕ ಅಥವಾ ಆಫ್ ಲೈನ್ ಮೂಲಕ ಲಿಂಕ್ ಮಾಡಬಹುದಾಗಿದೆ. ಹಾಗಾದರೆ ಆಧಾರ್ ಕಾರ್ಡ್ ಜೊತೆ ಡ್ರೈವಿಂಗ್ ಲೈಸನ್ಸ್ ಲಿಂಕ್ ಮಾಡುವುದು ಹೇಗೆ ಎಂದು ನಾವೀಗ ತಿಳಿಯೋಣ.

Aadhar Card Link With Driving Licence Online And Offline Process
Image Credit: Businessleague

ಆನ್ಲೈನ್ ಅಲ್ಲಿ ಲಿಂಕ್ ಮಾಡುವ ವಿಧಾನ
*ಮೊದಲು ನೀವು ನಿಮ್ಮ ಬ್ರೌಸರ್ ತೆರೆಯಿರಿ ಮತ್ತು ನಿಮ್ಮ ಡ್ರೈವಿಂಗ್ ಲೈಸೆನ್ಸ್ ನೀಡಿದ ರಾಜ್ಯದ ಸಂಬಂಧಿತ ರಸ್ತೆ ಸಾರಿಗೆ ಪೋರ್ಟಲ್‌ ಗೆ ಭೇಟಿ ನೀಡಿ. ‘Link Aadhaar’ ಆಯ್ಕೆಯನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.

*ಅಲ್ಲಿ ನಿಮಗೆ ಮೆನು ಕಾಣಿಸುತ್ತದೆ. ಪಟ್ಟಿಯಿಂದ ‘Driving Licence’ ಕ್ಲಿಕ್ ಮಾಡಿ. ಈಗ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ ಮತ್ತು ‘ವಿವರಗಳನ್ನು ಪಡೆಯಿರಿ’ ಕ್ಲಿಕ್ ಮಾಡಿ.

*ಅಲ್ಲಿ ನಿಮ್ಮ ಡ್ರೈವಿಂಗ್ ಪರವಾನಗಿ ವಿವರಗಳು ಕಾಣಿಸಿಕೊಳ್ಳುತ್ತವೆ. ನಂತರ ಅಲ್ಲಿ ನೀಡಿರುವ ಬಾಕ್ಸ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ನಿಮ್ಮ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಬೇಕು. ಈ ಮಾಹಿತಿಯನ್ನು ಭರ್ತಿಮಾಡಿದ ನಂತರ, ‘Submit’ ಕ್ಲಿಕ್ ಮಾಡಿ.

Join Nadunudi News WhatsApp Group

*ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು OTP ಪಡೆಯುತ್ತೀರಿ. ಆ OTP ಅನ್ನು ನಮೂದಿಸಿದರೆ ಡ್ರೈವಿಂಗ್ ಲೈಸೆನ್ಸ್ ಅನ್ನು ಆಧಾರ್‌ ನೊಂದಿಗೆ ಲಿಂಕ್ ಮಾಡುವ ಆನ್‌ ಲೈನ್ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

Aadhar Card Link With Driving Licence
Image Credit: India TV Hindi

ಆಫ್ ಲೈನ್ ಅಲ್ಲಿ ಲಿಂಕ್ ಮಾಡುವ ವಿಧಾನ
*ಮೊದಲು ನಿಮ್ಮ ಚಾಲನಾ ಪರವಾನಗಿಯನ್ನು ನೀಡಿರುವ RTO ಗೆ ಭೇಟಿ ನೀಡಬೇಕು.

*ಆಧಾರ್ ಲಿಂಕ್ ಮಾಡುವ ಫಾರ್ಮ್ ಅನ್ನು ಭರ್ತಿಮಾಡಿ, ಇದರಲ್ಲಿ ನೀವು ನಿಮ್ಮ DL ಹಾಗು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು.

*ಇದರ ಜೊತೆಗೆ ಆಧಾರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್‌ ನ ಸ್ವಯಂ -ದೃಢೀಕರಿಸಿದ ಪ್ರತಿಯನ್ನು ಲಗತ್ತಿಸಬೇಕು.

*ಮೌಲ್ಯಮಾಪನ ಮತ್ತು ಪರಿಶೀಲನೆಯನ್ನು RTO ಮೂಲಕ ಮಾಡಲಾಗುತ್ತದೆ.

*ಯಶಸ್ವಿ ಪರಿಶೀಲನೆಯ ನಂತರ ನಿಮ್ಮ DL ಅನ್ನು ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗಿದೆ ಎಂದು ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಬರುತ್ತದೆ.

Join Nadunudi News WhatsApp Group