Aadhaar Renewal Fee: ಆಧಾರ್ ಕಾರ್ಡ್ ಇದ್ದವರಿಗೆ ಸಂತಸದ ಸುದ್ದಿ, ಶುಲ್ಕ ಮನ್ನಾ ಮಾಡಿದ ಸರ್ಕಾರ.

Aadhar Card Renewal And Update: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhar Card) ಪ್ರಮುಖ ದಾಖಲೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇನ್ನು ಯಾವುದೇ ಕಚೇರಿ ಸಂಬಂಧಿತ ಕೆಲಸಕ್ಕೆ ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ. ಆಧಾರ್ ನೊಂದಿಗೆ ಎಲ್ಲ ರೀತಿಯ ವೈಯಕ್ತಿಕ ದಾಖಲೆಯನ್ನು ಲಿಂಕ್ ಮಾಡುವಂತೆ ಈಗಾಗಲೆ ಸರ್ಕಾರ ಸೂಚಿಸಿದೆ. ಇದೀಗ ಆಧಾರ್ ಕಾರ್ಡ್ ಸಂಬಂಧಿತ ಇನ್ನೊಂದು ಮಾಹಿತಿ ಹೊರಬಂದಿದೆ.

UIDAI said that Aadhaar card can be updated online without paying any fee.
Image Credit: indiatimes

ಆಧಾರ್ ಕಾರ್ಡ್ ಹೊಂದಿದವರಿಗೆ ಸಂತಸದ ಸುದ್ದಿ
ಆಧಾರ್ ಕಾರ್ಡ್ ಹೊಂದಿರುವವರಿಗೆ ಸಂತಸದ ಸುದ್ದಿ ಹೊರಬಿದ್ದಿದೆ. UIDAI ಇತ್ತೀಚಿಗೆ ಮಹತ್ವದ ಘೋಷಣೆ ಮಾಡಿದೆ. ಆಧಾರ್ ಕಾರ್ಡ್ ನಲ್ಲಿ ವಿವರಗಳನ್ನು ನವೀಕರಿಸಲು ಒಂದು ರೂಪಾಯಿ ಕೂಡ ಪಾವತಿಸುವ ಅಗತ್ಯವಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ.

There is no need to pay any fee for renewal of Aadhaar card, fee waived by Govt.
Image Credit: economictimes.indiatimes

ಆಧಾರ್ ನವೀಕರಣ ಶುಲ್ಕ ಮನ್ನಾ
UIDAI ಆಧಾರ್ ನವೀಕರಣ ಶುಲ್ಕವನ್ನು ಮನ್ನಾ ಮಾಡಲು ಮುಂದಾಗಿದೆ. ಆದರೆ ಇದು ಆಧಾರ್ ಕಾರ್ಡ್ ವಿವರಗಳನ್ನು ಆನ್ಲೈನ್ ನಲ್ಲಿ ನವೀಕರಿಸಲು ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬೇಕಾಗಿದೆ.

ಅಲ್ಲದೆ ಈ ಪ್ರಯೋಜನವೂ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಆಧಾರ್ ಕಾರ್ಡ್ ಹೊಂದಿದವರು ಆಧಾರ್ ಕೇಂದ್ರಕ್ಕೆ ಹೋಗಿ ಕಾರ್ಡ್ ವಿವರಗಳನ್ನು ನವೀಕರಿಸಲು ಬಯಸಿದರೆ, ಅವರು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ರೂ. 50 ಶುಲ್ಕ ವಿಧಿಸಲಾಗುತ್ತದೆ.

UIDAI has clarified that there is no need to pay any fee for renewing Aadhaar card.
Image Credit: krishijagran

ಈ ಉಚಿತ ಆಧಾರ್ ನವೀಕರಣ ಸೌಲಭ್ಯವನ್ನು ಪಡೆದುಕೊಳ್ಳಲು UIDAI ಜನರನ್ನು ವಿನಂತಿಸುತ್ತಿದೆ. ಈ ಸೌಲಭ್ಯವು ಮೂರು ತಿಂಗಳವರೆಗೆ ಲಭ್ಯವಿರುತ್ತದೆ. ಉಚಿತ ನವೀಕರಣ ಸೌಲಭ್ಯವು ಮಾರ್ಚ್ 15, 2023 ರಿಂದ ಜೂನ್ 14, 2023 ರವರೆಗೆ ಪಡೆಯಬಹುದು ಎಂದು ವಿವರಿಸಿದೆ.

Join Nadunudi News WhatsApp Group

ಈ ಸೀಮಿತ ಅವಧಿಯ ಒಳಗೆ ನೀವು ಆಧಾರ್ ಕಾರ್ಡ್ ನಲ್ಲಿರುವ ತೊಂದರೆಗಳನ್ನು ಸರಿಪಡಿಸಿದರೆ ನೀವು ಉಚಿತವಾಗಿ ಸರಿಪಡಿಸಿಕೊಳ್ಳಬಹುದು. ಸೀಮಿತ ಅವಧಿಯವಳಗೆ ಆಧಾರ್ ಕಾರ್ಡ್ ಅನ್ನು ಸರಿಪಡಿಸಿಕೊಳ್ಳದಿದ್ದರೆ ನಂತರದ ದಿನಗಳಲ್ಲಿ ಶುಲ್ಕ ಪಾವತಿಸಬೇಕಾಗುತ್ತದೆ.

Join Nadunudi News WhatsApp Group