Pension Policy: ಪಿಂಚಣಿ ಪಡೆಯುವ ಎಲ್ಲರಿಗೂ ಕೇಂದ್ರದಿಂದ ಹೊಸ ರೂಲ್ಸ್, ಅಕ್ಟೋಬರ್ 25 ಕೊನೆಯ ದಿನಾಂಕ.
ಪಿಂಚಣಿ ಪಡೆಯುವ ಅರ್ಹರು ಅಕ್ಟೋಬರ್ 25 ರೊಳಗೆ ಈ ಕೆಲಸ ಮಾಡುದು ಉತ್ತಮ.
Aadhar NPCI Link With Pension Scheme: ಕೇಂದ್ರ ಸರ್ಕಾರದ ಪ್ರಮುಖವಾದ ಯೋಜನೆಯಲ್ಲಿ ಪಿಂಚಣಿ ಯೋಜನೆ ಕೂಡ ಒಂದು. ಜನರ ವೃದ್ದಾಪ್ಯ ಜೀವನಕ್ಕೆ ಆರ್ಥಿಕ ಸ್ಥಿರತೆ ನೀಡುವ ಉದ್ದೇಶದಿಂದ ಸರಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿವೆ.
ದೇಶದಲ್ಲಿ ಕೋಟ್ಯಾಂತರ ಜನರು ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ. ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು, ಅಂಚೆ ಇಲಾಖೆಗಳು ಜನರಿಗೆ Pension Scheme ಗಳನ್ನೂ ಪರಿಚಯಿಸುತ್ತವೆ. ಇದೀಗ ಪಿಂಚಣಿ ಪಡೆಯುವ ಎಲ್ಲರಿಗೂ ಕೇಂದ್ರದಿಂದ ಹೊಸ ರೂಲ್ಸ್ ಒಂದು ಜಾರಿಗೆ ಬಂದಿದೆ ಅದೇನೆಂದು ನಾವೀಗ ತಿಳಿದುಕೊಳ್ಳೋಣ.
ಪಿಂಚಣಿ ಪಡೆಯುವ ಅರ್ಹರಿಗೆ ಕೇಂದ್ರ ಸರ್ಕಾರದ ಹೊಸ ನಿಯಮ
ಜನರು ನಿವೃತ್ತಿಯ ನಂತರ ಯಾವುದೇ ಚಿಂತೆಯಿಲ್ಲದೆ ಜೀವನ ನಡೆಸಲು ಜನರು ಹೆಚ್ಚಾಗಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೆ.
ಇದೀಗ ಪಿಂಚಣಿ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮತ್ತು ಮೈತ್ರಿ ಯೋಜನೆಗಳನ್ನು ನೇರ ಹಣ ಸಂದಾಯ ಯೋಜನೆಯಡಿ ತರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವ ಅರ್ಹ ಫಲಾನುಭವಿಗಳ Bank ಮತ್ತು Post Office ಖಾತೆಗಳಲ್ಲಿ NPCI LInk ಮತ್ತು Aadhar Card ಜೋಡಣೆ ಯನ್ನು ಕಡ್ಡಾಯಗೊಳಿಸಲಾಗಿದೆ.
NPCI Link ಮತ್ತು Aadhar Card Link ಗೆ ಅಕ್ಟೋಬರ್ 25 ಕೊನೆಯ ದಿನಾಂಕ
ಪಿಂಚಣಿ ಪಡೆಯುತ್ತಿರುವ ಎಲ್ಲ ಅರ್ಹ ಫಲಾನುಭವಿಗಳ Bank ಮತ್ತು Post Office ಖಾತೆಗಳಲ್ಲಿ NPCI LInk ಮತ್ತು Aadhar Card ಜೋಡಣೆ ಆಗದೆ ಇರುದರಿಂದ ಅಕ್ಟೋಬರ್ 25 ರೊಳಗೆ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಸಂಬಂಧಪಟ್ಟ ಬ್ಯಾಂಕ್, ಅಂಚೆ ಕಚೇರಿ, ನಾಡ ಕಛೇರಿ ಹಾಗೂ ತಾಲ್ಲೂಕು ಕಛೇರಿಗಳಿಗೆ ಭೇಟಿ ನೀಡಿ ಆಧಾರ್ ಕಾರ್ಡ್,
ಬ್ಯಾಂಕ್ ಖಾತೆ ಅಥವಾ ಅಂಚೆ ಖಾತೆಗಳನ್ನು ನೀಡುವ ಮೂಲಕ NPCI LInk ಮತ್ತು Aadhar Card ಜೋಡಣೆ ಮಾಡಿಕೊಳ್ಳಬೇಕು. ಈ ನಿಯಮ ವನ್ನು ಉಲ್ಲಂಘಿಸಿದರೆ ಸರ್ಕಾರವು ಕಾಲ ಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಗಳಿಗೆ ಅರ್ಹ ಫಲಾನುಭವಿಗಳೆ ಜವಾಬ್ದಾರರಾಗಿರುತ್ತಾರೆ.