Darshan Latest News: ದರ್ಶನ್ ಎದೆ ಮೇಲಿನ ಟಾಟೂ ಬಗ್ಗೆ ಮಾತನಾಡಿದ ಆಶಿಕಾ ರಂಗನಾಥ್ ಮತ್ತು ಅಭಿಷೇಕ್.

Abhishek Ambareesh And Ashika Ranganath About Darshan Tattoo: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಇದೀಗ ಅಭಿಮಾನಿಗಳ ಮೇಲಿನ ಪ್ರೀತಿಯಿಂದಾಗಿ ತಮ್ಮ ಎದೆ ಮೇಲೆ ನನ್ನ ಪ್ರೀತಿಯ ಸೆಲೆಬ್ರಟಿಸ್ ಎಂದು ಟ್ಯಾಟೋ (Tattoo)  ಹಾಕಿಸಿಕೊಂಡಿದ್ದಾರೆ.

Actor Darshan got a tattoo for his fans
Image Credit: instagram

ಇನ್ನು ತಮ್ಮ ಪ್ರೀತಿಯ ನಟನ ಹೆಸರನ್ನು ಅಭಿಮಾನಿಗಳು ಟ್ಯಾಟೂ ಹಾಕಿಸಿಕೊಳ್ಳುವುದು ಸಾಮಾನ್ಯ ಆದರೆ ಇದೆ ಮೊದಲ ಬಾರಿ ನಟ ದರ್ಶನ್ ಅವರು ಅಭಿಮಾನಿಗಳಿಗಾಗಿ ಟ್ಯಾಟೂ ಹಾಕಿಸಿಕೊಂಡಿರುವುದು ಗಮನಾರ್ಹವಾಗಿದೆ.

Actor Darshan got a tattoo on his chest for his fans
Image Credit: zee news

ಇದೀಗ ದರ್ಶನ್ ಅವರ ಟ್ಯಾಟೋ ಬಗ್ಗೆ ಸಂದಾಲ್ ವುಡ್ ನ ಸ್ಟಾರ್ ನಟ ನಟಿಯರಾದ ಅಭಿಷೇಕ್ ಅಂಬರೀಷ್ (Abishek Ambareesh) ಹಾಗೂ ಆಶಿಕಾ ರಂಗನಾಥ್ (Ashika Ranganath)  ಮಾತನಾಡಿದ್ದಾರೆ.

ದರ್ಶನ್ ಟ್ಯಾಟೂ ಬಗ್ಗೆ ಮಾತನಾಡಿದ ಅಭಿಷೇಕ್ ಅಂಬರೀಷ್
“ನಾನು ಯಾವತ್ತೂ ಇದನ್ನು ಪ್ರಸ್ತಾಪ ಮಾಡಿಲ್ಲ. ಜನ ಹೇಗೆ ತಗೋತಾರೋ ಏನೋ ಗೊತ್ತಿಲ್ಲ. ಕೆಲ ವರ್ಷಗಳ ಹಿಂದೆ ಒಮ್ಮೆ ದರ್ಶನ್ ಅವರನ್ನು ಭೇಟಿ ಆದಾಗ ತುಂಬಾ ಸುಸ್ತಾದಂತೆ ಕಾಣುತ್ತಿದ್ದರು.

ಅವರು ಜಿಮ್ ಅದು ಇದು ಅಂತ ಬರಿ ಎರೆಡೆರಡು ಗಂಟೆ ಮಾತ್ರ ನಿದ್ದೆ ಮಾಡುತ್ತಿದ್ದರು ಎಂದು ಗೊತ್ತಾಯಿತು. ನಾನು ಹೇಳಿದೆ ಸರ್ ಸ್ವಲ್ಪ ರೆಸ್ಟ್ ಮಾಡಿ. ಜಿಮ್ ವರ್ಕೌಟ್ ಬಿಟ್ಟು ಆರಾಮಾಗಿರಿ ಎಂದು ಹೇಳಿದ್ದೆ.

Join Nadunudi News WhatsApp Group

Actor Abhishek Ambareesh talked about the tattoo on Darshan's chest
Image Credit: instagram

ಇಷ್ಟು ಕಷ್ಟ ಯಾಕೆ, ಅವರು ನಾನು ಏನೇ ಮಾಡಿದರು ನಮ್ಮ ಅಭಿಮಾನಿಗಳಿಗೆ ಮೋಸ ಮಾಡಲ್ಲ, ಅವರು ನನ್ನಿಂದ ಅಪೇಕ್ಷೆ ಪಡ್ತಾರೆ. ನಾನು ಹೀಗೆ ಕಾಣಿಸ್ಬೇಕು ಅಂತ. ಅದಕ್ಕೆ ನಿದ್ದೆ ಕೆಟ್ಟರು ಪರವಾಗಿಲ್ಲ. ನಾನು ಜಿಮ್ ಗೆ ಹೋಗುತ್ತೇನೆ ಎಂದಿದ್ದರು. ಅದರಲ್ಲಿ ಅವರ ವ್ಯಕ್ತಿತ್ವ ತಿಳಿಯುತ್ತದೆ. ಪ್ಯಾನ್ಸ್ ಗೋಸ್ಕರ ಬದುಕುತ್ತಾರೆ ಅವರು. ಎದೆ ಬಗದ್ರೆ ಪ್ಯಾನ್ಸ್ ಇದ್ದಾರೆ” ಎಂದಿದ್ದಾರೆ.

“ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ನನ್ನ ಅಭಿಮಾನಿಗಳು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಯೋಚಿಸುತ್ತಾರೆ.

ನನ್ನ ಪ್ರಕಾರ ಬರಿ ಭಾರತೀಯ ಚಿತ್ರರಂಗ ಅಲ್ಲ, ಪ್ರಪಂಚದ ಚಿತ್ರರಂಗದಲ್ಲೇ ಅಭಿಮಾನಿಗಳ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿರೋದು ಇವರು ಒಬ್ಬರೇ.

Actor Abhishek Ambareesh spoke about actor Darshan's personality
Image Credit: instagram

ಎಲ್ಲರು ಭಾವುಕರಾದರು ನಾನು ಭಾವುಕನಾದೆ. ನಾನು ಭಾವುಕನಾದೆ. ನಾನು ಫೋನ್ ಮಾಡಿದಾಗ ಹೇಳಿದೆ, ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಾ ಅಂತ. ಆದ ಅವರು ನಾನು ಬಾಯಿ ಮಾತಿಗೆ ಹೇಳಲ್ಲ ಎದೆ ಬಗೆದರೆ ಅವರೇ ಇರೋದು ಅಂತ, ಎಲ್ಲರ ಹೆಸರು ಹಾಕಿಕೊಳ್ಳೋಕೆ ಆಗಲ್ಲ, ನನ್ನ ಸೆಲೆಬ್ರಿಟಿಸ್ ಅಂದು ಒಂದೇ ಸಾಲಿನಲ್ಲಿ ಹಾಕಿದ್ದೇನೆ ಅಂದರು.

ಇನ್ನು ಮುಂದೆ ಯಾರೇ ದರ್ಶನ್ ಅವರ ಬಗ್ಗೆ ಮಾತನಾಡಬೇಕು ಅಂದ್ರು ಇದು ಅವರ ವ್ಯಕ್ತಿತ್ವ ಅಂತ ತಿಳ್ಕೊಂಡು ಮಾತನಾಡ್ಲಿ” ಎಂದು ಅಭಿಷೇಕ್ ಹೇಳಿದ್ದಾರೆ.

Abhishek said that from now on, whoever should talk about Darshan should understand that this is his personality.
Image Credit: instagram

ದರ್ಶನ್ ಟ್ಯಾಟೂ ಬಗ್ಗೆ ಮಾತನಾಡಿದ ಆಶಿಕಾ ರಂಗನಾಥ್
ಇನ್ನು ನಟಿ ಆಶಿಕಾ ರಂಗನಾಥ್ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ದರ್ಶನ್ ಅವರ ಟ್ಯಾಟೂ ಬಗ್ಗೆ ಮಾತನಾಡಿದ್ದಾರೆ.”ಡಿ. ಬಾಸ್ ಸೂಪರ್, ಈತ್ತಿಚೆಗೆ ಅವರು ಟ್ಯಾಟೂ ಮಾಡಿಸಿಕೊಂಡ್ರು, ನನ್ನ ಸೆಲೆಬ್ರಿಟಿಸ್ ಎಂದು.

Actress Ashika Ranganath spoke about Darshan's tattoo
Image Credit: instagram

ಅವರಿಗೆ ಹ್ಯಾಟ್ಸಾಪ್. ಯಾಕಂದ್ರೆ ಅವರು ಅಭಿಮಾನಿಗಳನ್ನು ಅಷ್ಟು ಪ್ರೀತಿಸುತ್ತಾರೆ.ನಮ್ಮ ಅಭಿಮಾನಿಗಳನ್ನು ನಾನು ಅದೇ ರೀತಿ ಪ್ರೀತಿಸುವ ಅವಕಾಶ ಸಿಗುತ್ತೆ ಎನಿಸುತ್ತದೆ. ಅವರದ್ದು ಅಷ್ಟು ದೊಡ್ಡ ಜರ್ನಿ” ಎಂದು ಆಶಿಕಾ ರಂಗನಾಥ್ ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ.

Join Nadunudi News WhatsApp Group