Abhishek Marriage: ಫಿಕ್ಸ್ ಆಯಿತು ಅಂಬಿ ಪುತ್ರದ ಮದುವೆಯ ದಿನಾಂಕ, ಹಸೆಮಣೆ ಏರಲು ರೆಡಿಯಾದ ಅಭಿಷೇಕ್.
ಅಭಿಷೇಕ್ ಅಂಬರೀಷ್ ಮತ್ತು ಅವೀವಾ ಬಿಡ್ಡಪ್ಪ ಅವರ ಮದುವೆಯ ದಿನಾಂಕ ನಿಗದಿಯಾಗಿದೆ.
Abhishek Ambareesh And Aviva Marriage Date: ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಅಭಿಷೇಕ್ ಅಂಬರೀಷ್ (Abhishek Ambareesh) ಅವರು ಇದೀಗ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ತಿಂಗಳಿಂದ ಅಭಿಷೇಕ್ ಹಾಗೂ ಅವಿವಾ (Aviva) ಮದುವೆಯ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು.
ಇದೀಗ ಸುಮಲತಾ ಹಾಗೂ ಅಂಬರೀಷ್ ಅವರ ಪುತ್ರನ ವಿವಾಹಕ್ಕೆ ದಿನಾಂಕ ನಿಗದಿಯಾಗಿದೆ. ನಟಿ ಸುಮಲತಾ ಅವರು ಮಗನ ವಿವಾಹ ಸಂಭ್ರಮದಲ್ಲಿದ್ದಾರೆ. ಅವಿವಾ ಹಾಗೂ ಅಭಿಷೇಕ್ ಹಸೆಮಣೆ ಏರುವ ದಿನಾಂಕದ ಬಗ್ಗೆ ಮಾಹಿತಿ ತಿಳಿಯೋಣ.
ಅಭಿಷೇಕ್ ಅವಿವಾ ವಿವಾಹಕ್ಕೆ ಡೇಟ್ ಫಿಕ್ಸ್
ಕಳೆದ ವರ್ಷ ಡಿಸೇಂಬರ್ 11 ರಂದು ಅಭಿಷೇಕ್ ಹಾಗೂ ಅವಿವಾ ಅವರ ನಿಶ್ಚಿತಾರ್ಥ ನೆರವೇರಿದೆ. ನಿಶ್ಚಿತಾರ್ಥ ಆದ ಬಳಿಕ ಈ ಜೋಡಿಯ ಮದುವೆಯ ದಿನಾಂಕದ ಬಗ್ಗೆ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿದೆ. ಇದೀಗ ಈ ಜೋಡಿ ಹಸೆಮಣೆ ಏರುವ ದಿನಾಂಕ ಖಾತರಿಯಾಗಿದೆ.
ಜೂನ್ 5 ಮತ್ತು 6 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಹಾಗೂ ಅವಿವಾ ವಿವಾಹ ಬಹಳ ಅದ್ದೂರಿಯಾಗಿ ನಡೆಯಲಿದೆ. ಮಂಡ್ಯದಲ್ಲಿ ಅಭಿಷೇಕ್ ಹಾಗೂ ಅವಿವಾ ಆರತಕ್ಷತೆ ನಡೆಯಲಿದೆ. ಅಭಿಷೇಕ್ ಹಾಗೂ ಅವಿವಾ ಕುಟುಂಬದವರು ಮದುವೆಯ ಸಿದ್ದತೆಯಲ್ಲಿ ತೊಡಗಿದ್ದಾರೆ.
ತಮ್ಮ ಮದುವೆಗೆ ತಾವೇ ಉಡುಗೆಗಳನ್ನು ತಯಾರಿಸುತ್ತಿರುವ ಅವಿವಾ
ಖ್ಯಾತ ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರು ಮಾಜಿ ಸಂಸದೆ,ನಟಿ ಸುಮಲತಾ ಅವರ ಪುತ್ರನ ಕೈಹಿಡಿಯಲಿದ್ದಾರೆ. ಅಭಿಷೇಕ್ ಹಾಗೂ ಅವಿವಾ ತಮ್ಮ ಹಲವು ವರ್ಷದ ಪ್ರೀತಿಗೆ ಮದುವೆಯ ಮುದ್ರೆ ಹಾಕಲಿದ್ದಾರೆ.
ಇನ್ನು ಅವಿವಾ ಬಿದ್ದಪ್ಪ ಕೂಡ ಫ್ಯಾಶನ್ ಡಿಸೈನರ್ ಆಗಿದ್ದು, ತಮ್ಮ ಮದುವೆಗೆ ತಮಗೆ ಹಾಗೂ ಅಭಿಷೇಕ್ ಗೆ ತಾವೇ ಉಡುಗೆಯನ್ನು ತಯಾರಿಸಲಿದ್ದಾರೆ. ಅಭಿಷೇಕ್ ಹಾಗೂ ಅವಿವಾ ವಿವಾಹವನ್ನು ನೋಡಲು ಇಡೀ ಕನ್ನಡ ಚಿತ್ರರಂಗ ಹಾಗು ಅಭಿಷೇಕ್ ಅಭಿಮಾನಿಗಳು ಕಾಯುತ್ತಿದ್ದಾರೆ.