Abishek: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅಂಭಿ ಪುತ್ರನ ಲಗ್ನ ಪತ್ರಿಕೆ, ಮದುವೆಯ ದಿನಾಂಕ ಫಿಕ್ಸ್.
ಅಭಿಷೇಕ್ ಮತ್ತು ಅವಿವಾ ಅವರ ಮದುವೆಯ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Abishek Ambareesh Marriage Card: ಸದ್ಯ ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ (Ambareesh) ಅವರ ಪುತ್ರನಾದ ಅಭಿಷೇಕ್ ಅಂಬರೀಷ್ (Abishek Ambareesh) ಅವರ ವಿವಾಹದ ವಿಷಯ ಸಕತ್ ಸುದ್ದಿಯಲ್ಲಿ ಇದೆ ಎಂದು ಹೇಳಬಹುದು.
ಹೌದು ಕಳೆದ ಕೆಲವು ತಿಂಗಳುಗಳ ಹಿಂದೆ ಅದ್ದೂರಿಯಾಗಿ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದ ಅಭಿಷೇಕ್ ಅಂಬರೀಷ್ ಅವರು ಈಗ ಹಸೆಮಣೆಯನ್ನ ಏರಲು ರೆಡಿಯಾಗಿದ್ದಾರೆ ಎಂದು ಹೇಳಬಹುದು. ಸದ್ಯ ಮದುವೆಯ ದಿನಾಂಕವನ್ನ ನಿಗದಿ ಮಾಡಲಾಗಿದ್ದು ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವಿವಾ ಬಿದ್ದಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಅಭಿಷೇಕ್
ಹೌದು ಅವಿವಾ ಮತ್ತು ಅಭಿಷೇಕ್ ಅವರು ಕಳೆದ ಕೆಲವು ಸಮಯಗಳಿಂದ ಒಬ್ಬರನ್ನ ಒಬ್ಬರು ಬಹಳ ಇಷ್ಟಪಟ್ಟಿದ್ದು ಸದ್ಯ ಇಬ್ಬರು ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದು ಈಗ ಹಸೆಮಣೆಯನ್ನ ಏರಲು ತಯಾರಾಗಿದ್ದಾರೆ. ಮುಂದಿನ ತಿಂಗಳು 5 ನೇ ತಾರೀಕಿನಂದು ಇಬ್ಬರು ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯನ್ನ ಮಾಡಿಕೊಳ್ಳಲಿದ್ದಾರೆ.
ವೈರಲ್ ಆಗಿದೆ ಅಂಭಿ ಪುತ್ರನ ಲಗ್ನ ಪತ್ರಿಕೆ
ಜೂನ್ 5 ನೇ ತಾರೀಕಿನಂದು ಅಭಿಷೇಕ್ ಅಂಬರೀಷ್ ಅವರು ಹಸೆಮಣೆಯನ್ನ ಇರಲಿದ್ದು ಇಬ್ಬರ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.ಸದ್ಯ ಅಭಿಷೇಕ್ ಅವರು ಮದುವೆಯ ತಯಾರಿಯಲ್ಲಿ ಇದ್ದು ಲಗ್ನ ಪತ್ರಿಕೆ ಹಂಚಿಕೆ ಮಾಡಲಾಗುತ್ತಿದೆ. ಗಣ್ಯ ವ್ಯಕ್ತಿಗಳು, ಚಿತ್ರರಂಗದ ನಟ ನಟಿಯರ ಮನೆಗೆ ತಾವೇ ಹೋಗಿ ಮದುವೆಗೆ ಆಹ್ವಾವನವನ್ನ ನೀಡುತ್ತಿದ್ದಾರೆ ಅಭಿಷೇಕ್ ಅಂಬರೀಷ್.