Abortion Law: ಹೆಣ್ಣು ಮದುವೆಯಾಗದೆ ಗರ್ಭ ಧರಿಸಬಹುದಾ…? ಭಾರತದ ಕಾನೂನು ಹೇಳುವುದೇನು…?
Abortion ಗೆ ಸಂಬಂಧಿಸಿದಂತೆ ಕಾನೂನಿಯ ನಿಯಮ ತಿಳಿದುಕೊಳ್ಳಿ.
Abortion Law And Rules In India: ಸಾಮಾನ್ಯವಾಗಿ ಪ್ರತಿ ಹೆಣ್ಣುಮಕ್ಕಳು ಕೂಡ ತಾಯ್ತನದ ಖುಷಿಯನ್ನು ಅನುಭವಿಸಲು ಇಷ್ಟಪಡುತ್ತಾರೆ. ಮದುವೆಯಾದ ಪ್ರತಿ ಮಹಿಳೆಯು ಕೂಡ ತಾನು ಗರ್ಭಿಣಿ ಆಗಬೇಕೆನ್ನುವ ನಿರೀಕ್ಷೆಯಲ್ಲಿರುತ್ತಾರೆ.
ಕೆಲವೊಮ್ಮೆ ಮದುವೆಯಾದವರು ಅಲ್ಲದೆ ಮದುವೆಯಾಗದೆ ಇರುವವರು ಕೂಡ ಮಾತೃತ್ವವನ್ನು ಪಡೆದಿರುವ ಸಾಕಷ್ಟು ಉದಾಹರಣೆಗಳಿವೆ. ಇನ್ನು ಭಾರತೀಯ ಕಾನೂನಿನಲ್ಲಿ ಗರ್ಭಪಾತಕ್ಕೆ ಅದರದ್ದೇ ಆದ ಕಾನೂನು ಇದೆ.
ಕಾನೂನಿನಲ್ಲಿ ಗರ್ಭಪಾತಕ್ಕೂ ನಿಯಮವಿದೆ
ಇನ್ನು ಮಹಿಳೆಯರಿಗೆ ಅನೇಕ ಸಮಯದಲ್ಲಿ ತಮಗೆ ಮಗು ಬೇಡ ಎನ್ನುವ ಅಭಿಪ್ರಾಯ ಬರುವುತ್ತದೆ. ಮದುವೆಯಾಗದ ಮಹಿಳೆಯರು ಅಥವಾ ಮದುವೆಯಾದ ಮಹಿಳೆರು ಕೆಲವೊಮ್ಮೆ ಗರ್ಭಪಾತ ಮಾಡಿಸಿಕೊಳ್ಳುವ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಆದರೆ ಭಾರತೀಯ ನ್ಯಾಯಾಲಯದಲ್ಲಿ ಗರ್ಭಪಾತಕ್ಕೆ ನಿಯಮವಿದೆ. ಇದೀಗ Abortion ಗೆ ಸಂಬಂಧಿಸಿದಂತೆ ಕಾನೂನು ಏನು ಹೇಳುತ್ತದೆ ಎನ್ನುವುದನ್ನು ನೋಡೋಣ.
ಮದುವೆಯಾಗದ ಮಹಿಳೆಯು ಗರ್ಭಿಣಿ ಆಗಬಹುದು
ಭಾರತದಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆಯು ತನ್ನ ಸ್ವ ಇಚ್ಛೆಯ ಮೇಲೆ ಗರ್ಭವನ್ನು ಧರಿಸಬಹುದು. ಮದುವೆಯ ಆಗದೆಯೂ ಕೂಡ ಮಹಿಳೆಯರು ಮಗುವನ್ನು ಪಡೆಯಲು ಕಾನೂನಿನಲ್ಲಿ ಯಾವುದೇ ವಿರೋಧವಿಲ್ಲ. ಸದ್ಯ ಸುಪ್ರೀಂ ಕೋರ್ಟ್ 26 ವಾರಗಳ ಕಾಲ ಗರ್ಭ ಹೊಂದಿರುವ ಮಹಿಳೆಯು ನಂತರ ಗರ್ಭಪಾತಕ್ಕೆ ಕೋರಿ ಹೈಕೋರ್ಟ್ ಮನವಿ ಸಲ್ಲಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿಗೆ. ಸುಪ್ರೀಂ ಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ನೀಡಿದೆ.
ಮಹಿಳೆಯರು ಎಷ್ಟು ಅವಧಿಯಾದ ಮೇಲೆ ಗರ್ಭಪಾತ ಮಾಡಿಸಿಕೊಳ್ಳಬಹುದು..?
ಎರಡು ಮಕ್ಕಳ ತಾಯಿಯಾಗಿರುವ ಮಹಿಳೆ ಮೂರನೇ ಮಗುವಿಗೆ 26 ವಾರಗಳ ನಂತರ ಗರ್ಭಪಾತಕ್ಕೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆ ಸುಪ್ರೀಂ ಕೋರ್ಟ್ ತನಿಖೆ ನಡೆಸಿ ತೀರ್ಪನ್ನು ನೀಡಿದೆ. ಭಾರತದಲ್ಲಿ ಗರ್ಭಪಾತಕ್ಕೆ ಸಂಬಂದಿಸಿದ ಕಾಯ್ದೆ ಕೇವಲ 24 ವಾರಗಳ ಕಾಲ ಮಾತ್ರ ಗರ್ಭಪಾತಕ್ಕೆ ಅವಕಾಶವನ್ನು ನೀಡುತ್ತದೆ.
ಆದರೆ ಈ ಮಹಿಳೆಯು 26 ವಾರಗಳ ನಂತರ ಗರ್ಭಪಾತಕ್ಕೆ ಮುಂದಾಗಿರುವ ಕಾರಣ ಸುಪ್ರೀಂ ಕೋರ್ಟ್ ಮಹಿಳೆಯು ಗರ್ಭಪಾತ ಮಾಡಿಸಿಕೊಳ್ಳುವುದಕ್ಕೆ ಒಪ್ಪಿಗೆ ನೀಡಿಲ್ಲ. 6 ತಿಂಗಳ ಬಳಿಕ ಮಹಿಳೆಯು ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.