Mahantesh Bilagi Life History: ಬಡತನದಿಂದ ಬೆಳೆದು ಬಂದ ಮಹಾಂತೇಶ್ ಬೀಳಗಿ ಅವರ ಕೊಡುಗೆ ರಾಜ್ಯಕ್ಕೆ ಅಪಾರವಾಗಿದೆ. ಹೌದು, ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತಿದ್ದ ಬಡ ರೈತನ ಮಗ IAS ಅಧಿಕಾರಿಯಾಗಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ ನವೆಂಬರ್ 25, 2025 ರ ಸಂಜೆ 5:30 ರ ಸುಮಾರಿಗೆ ಮಹಾಂತೇಶ್ ಬೀಳಗಿ ಅಗಲಿದ್ದಾರೆ. ಬಡತನ, ತಾಯಿಯ ಶ್ರಮ, ಕಷ್ಟಗಳನ್ನ ದಾಟಿ ಸಾಧನೆ ಮಾಡಿದ ಮಹಾಂತೇಶ್ ಬೀಳಗಿ ಅವರ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿದೆ. ಬಡತನ ಇದ್ದರು ಕೂಡ ಸಾಧನೆ ಮಾಡಬಹುದು ಎನ್ನುದಕ್ಕೆ ಇರುವ ಉತ್ತಮ ಉದಾಹರಣೆ ಆಗಿದ್ದಾರೆ. ಇದೀಗ ನಾವು ಮಹಾಂತೇಶ್ ಬೀಳಗಿ ಅವರ ಸ್ಫೂರ್ತಿದಾಯಕ ಜೀವನ ಚರಿತ್ರೆ ಬಗ್ಗೆ ನಾವೀಗ ತಿಳಿದುಕೊಳ್ಳೋಣ.
ರೊಟ್ಟಿ ಮಾರಿ ಬೆಳೆದ ಕುಟುಂಬ
ಮಾರ್ಚ್ 27, 1974 ರಂದು ರಾಮದುರ್ಗ ತಾಲೂಕು, ಬೆಳಗಾವಿ ಯಲ್ಲಿ ಮಹಾಂತೇಶ್ ಬೀಳಗಿ ಅವರ ಜನನವಾಗುತ್ತದೆ. ತಂದೆ ಬಸಪ್ಪ ಬಿಳಗಿ (ರೈತ), ತಾಯಿ ಲಕ್ಷ್ಮೀಬಾಯಿ. ಬಡ ಕುಟುಂಬದಲ್ಲಿ ಬೆಳೆದ ಮಹಾಂತೇಶ್ ಬೀಳಗಿ ಅವರು ತಂದೆ ಅವರನ್ನು ಬಹುಬೇಗ ಕಳೆದುಕೊಳ್ಳುತ್ತಾರೆ. ತಾಯಿ ಲಕ್ಷ್ಮೀಬಾಯಿ ಒಂಟಿಯಾಗಿ 5 ಮಕ್ಕಳನ್ನು ಸಾಕುತ್ತಾರೆ. ರೊಟ್ಟಿ ಮಾರಿ ಕುಟುಂಬವನ್ನು ನೆಡೆಸುತಿದ್ದರು. ಮಹಾಂತೇಶ್ ಮತ್ತು ಅವರ ಸಹೋದರರು ಕೂಡ ಅಂಗಡಿಯಲ್ಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡರು.
(ನೆರೆಹೊರೆಯವರು – “ಅವರ ತಾಯಿ ‘ನೀನು ಓದು, ನಾನು ರೊಟ್ಟಿ ಮಾರುತ್ತೇನೆ’ ಎಂದು ಹೇಳಿ ಬೆಂಬಲಿಸಿದರು. ಈ ಕಷ್ಟಗಳು ಮಹಾಂತೇಶ್ ಅವರನ್ನು ಇನ್ನಷ್ಟು ದೃಢಗೊಳಿಸಿದವು.” ಬಸವಣ್ಣನವರ ಭಕ್ತರಾಗಿ, ಧಾರ್ಮಿಕ ಮೌಲ್ಯಗಳನ್ನು ಬೆಳೆಸಿಕೊಂಡ ಅವರು, ಬಡತನವನ್ನು ಗೆದ್ದು ಇತರರಿಗೆ ಸಹಾಯ ಮಾಡುವುದು ಅವರ ಗುರಿಯಾಗಿತ್ತು.)
ಮಹಾಂತೇಶ್ ಬೀಳಗಿ ಶಿಕ್ಷಣ ಪಯಣ
ಆರಂಭದಲ್ಲಿ ಸರ್ಕಾರೀ ಶಾಲೆಯಲ್ಲಿ ಶಿಕ್ಷಣವನ್ನು ಪಡೆದ ಮಹಾಂತೇಶ್ ಬೀಳಗಿ ಅವರು ಧಾರವಾಡದಲ್ಲಿ ಇಂಗ್ಲಿಷ್ ಟ್ಯೂಷನ್ ಕಲಿಸಿ ಶಿಕ್ಷಣ ಪೂರ್ಣಗೊಳಿಸಿದ ಮಹಾಂತೇಶ್ UPSC ಪರೀಕ್ಷೆಗೆ ತಯಾರಿ ಮಾಡಿದರು. 2012 ರಲ್ಲಿ ಕರ್ನಾಟಕ ಕೇಡರ್ IAS ಆಯ್ಕೆಯಾದರು. ಇದು ಅವರ ಜೀವನದ ದೊಡ್ಡ ಗೆಲುವು. (ಗುರುಗಳು – “ಬಾಲ್ಯದಿಂದಲೇ ಓದಿಗೆ ಶ್ರದ್ಧೆಯುಳ್ಳವರು. ಸರಳ ಜೀವನದಲ್ಲಿ ದೃಢ ಸಂಕಲ್ಪ ಹೊಂದಿದವರು. ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಾ, ಕಷ್ಟಗಳು ನಿಮ್ಮನ್ನು ತಡೆಯಬಾರದು. ಶ್ರಮ ಮಾಡಿ ಕನಸುಗಳನ್ನು ನನಸು ಮಾಡಿಕೊಳ್ಳಿ” ಎಂದು ಹೇಳುತ್ತಿದ್ದರು. ಯುವಕರನ್ನು ಪ್ರೇರೇಪಿಸುತ್ತಿದ್ದರು.) ಅವರ ಶಿಕ್ಷಣ ಹಾದಿ ಬಡವರಿಗೂ IAS ಸಾಧ್ಯ ಎಂಬ ಸಂದೇಶ ನೀಡುತ್ತದೆ.
ಮಹಾಂತೇಶ್ ಬೀಳಗಿ ವೃತ್ತಿ ಜೀವನ
IAS ಆಗಿ ಆರಂಭಿಕ ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡಿದ ಮಹಾಂತೇಶ್ ಬೀಳಗಿ, ಜನರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುವಾಗ, ವಿದ್ಯುತ್ ಸಮಸ್ಯೆಗಳನ್ನು ಕಡಿಮೆ ಮಾಡಿ, ಗ್ರಾಮೀಣ ಪ್ರದೇಶಗಳಿಗೆ ಸುಗಮ ಸರಬರಾಜು ನೀಡುತ್ತಿದ್ದರು. ಖನಿಜ ಅಭಿವೃದ್ಧಿ ನಿಗಮದ (KSMCL) ವ್ಯವಸ್ಥಾಪಕ ನಿರ್ದೇಶಕರಾಗಿ, ಖನಿಜ ಸಂಪನ್ಮೂಲಗಳ ಅಭಿವೃದ್ಧಿಗೆ ನಾಯಕತ್ವ ನೀಡುತ್ತಿದ್ದರು. ಬೀದರ್ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣ ಅಭಿವೃದ್ಧಿಯಲ್ಲಿ ಬದಲಾವಣೆ ತಂದರು. ಅವರ ಸೇವೆಯಲ್ಲಿ ಬಡವರಿಗೆ ಆಧ್ಯತೆ. ಜಿಲ್ಲಾ ಪಂಚಾಯಿತಿ CEO ಆಗಿ ಹಲವು ಜಿಲ್ಲೆಗಳಲ್ಲಿ ಕೆಲಸ ಮಾಡಿ ಧಕ್ಷತೆಯ ಗುರುತು ಮಾಡಿಕೊಂಡರು. ಅವರ ಕೆಲಸದಿಂದ ರಾಜ್ಯದ ಆರ್ಥಿಕತೆಗೆ ಕೊಡುಗೆ ಅಪಾರವಾಗಿದೆ.
ಮಹಾಂತೇಶ್ ಬೀಳಗಿ ದುರಂತದ ನೆನಪು
ನವೆಂಬರ್ 25, 2025 ರ ಸಂಜೆ, ವಿಜಯಪುರದಿಂದ ಕಲಬುರಗಿಗೆ ಕುಟುಂಬದ ಮದುವೆಗೆ ಹೋಗುತ್ತಿದ್ದಾಗ ಜೇವರ್ಗಿ ತಾಲೂಕು, ಗೌನಹಳ್ಳಿ ಕ್ರಾಸ್ ಬಳಿ (ಕಲಬುರಗಿ – ಬೀದರ್ ರಾಷ್ಟ್ರೀಯ ಹೆದ್ದಾರಿ 150E) ಟೊಯೊಟಾ ಇನ್ನೋವಾ ಕ್ರಿಸ್ಟಾ ಕಾರ್ ಅಪಘಾತವಾಗಿ ಮಹಾಂತೇಶ್ ಬೀಳಗಿ (51), ಅವರ ಸಹೋದರ ಶಂಕರ್ ಬೀಳಗಿ (48) ಮತ್ತು ಸಂಬಂಧಿ ಈರಣ್ಣ ಶಿರಸಂಗಿ (55) ಮರಣ ಹೊಂದುತ್ತಾರೆ. ಮಹಾಂತೇಶ್ ಬೀಳಗಿ ಅವರ ಸಾವು ರಾಜ್ಯದ ಅಧಿಕಾರ ವ್ಯವಸ್ಥೆಗೆ ದೊಡ್ಡ ನಷ್ಟ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

