Abroad iPhone: ವಿದೇಶದಲ್ಲಿ ಐಫೋನ್ ಖರೀದಿ ಅಗ್ಗವೆ…? ವಿದೇಶದಿಂದ ಐಫೋನ್ ಖರೀದಿಸುವ ಮುನ್ನ ಎಚ್ಚರ.
ವಿದೇಶಿ ಮಾರುಕಟ್ಟೆಯಲ್ಲಿ ಐಫೋನ್ ಖರೀದಿಸುವ ಮುನ್ನ ಈ ವಿಚಾರ ತಿಳಿದುಕೊಳ್ಳಿ .
Abroad iPhone Purchase Disadvantages: iPhone ಖರೀದಿಯ ಮೇಲೆ ಯಾರಿಗೆತಾನೇ ಆಸಕ್ತಿ ಇಲ್ಲ ಹೇಳಿ. ಜೀವನದಲ್ಲಿ ಒಮ್ಮೆಯಾದರೂ iPhone ಖರೀದಿಸಬೇಕು ಎಂದು ಎಲ್ಲರು ಬಯಸುತ್ತಾರೆ. ಏಕೆಂದರೆ iPhone ಬಳಸುವುದೇ ಒಂದು ರೀತಿಯ ವಿಶೇಷ ಎನ್ನಬಹುದು.
iPhone ನಲ್ಲಿ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ಪಡೆಯಬಹುದು. ಇನ್ನು ಮಾರುಕಟ್ಟೆಯಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ iPhone 15 ಸರಣಿಗಳು ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸುತ್ತಿವೆ.
ವಿದೇಶದಲ್ಲಿ iPhone ಖರೀದಿ
iPhone 15 ರ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. iPhone ಹೆಚ್ಚು ಸುರಕ್ಷಿತ ಫೀಚರ್ ಅನ್ನು ನೀಡುತ್ತದೆ. ಇನ್ನು ದೇಶಿಯ ಮಾರುಕಟ್ಟೆಗೂ ವಿದೇಶಿ ಮಾರುಕಟ್ಟೆಗೆ ಎಲ್ಲ ರೀತಿಯಲ್ಲಿ ಹೋಲಿಕೆ ಮಾಡಲಾಗುತ್ತದೆ. ಅದೇ ರೀತಿ iPhone ಖರೀದಿಸುವಾಗಲು ಕೂಡ ವಿದೇಶಿ iPhone ಗಳು ಅಗ್ಗವಾಗಿ ಸಿಗಬಹುದೇ ಎನ್ನುವ ಬಗ್ಗೆ ಎಲ್ಲರಲ್ಲೂ ಪ್ರಶ್ನೆ ಮೂಡುವುದು ಸಹಜ. ಇದೀಗ ವಿದೇಶಿ ಮಾರುಕಟ್ಟೆಯಲ್ಲಿ iPhone ಮೌಲ್ಯ ಎಷ್ಟಿದೆ? ಹಾಗೂ ವಿದೇಶಿ iPhone ಖರೀದಿ ಲಾಭದಾಯಕವೇ? ಎನ್ನುವ ಬಗ್ಗೆ ವಿವರ ತಿಳಿಯೋಣ.
ವಿದೇಶಿ ಮಾರುಕಟ್ಟೆಯಲ್ಲಿ iPhone ಖರೀದಿ ಅಗ್ಗವೆ..?
ಇನ್ನು Apple ಉತ್ಪನ್ನಗಳು ಒಂದು ದೇಶದಿಂದ ಮತ್ತೊಂದು ದೇಶದಲ್ಲಿ ವಿಭಿನ್ನ ಬೆಲೆಯನ್ನು ಹೊಂದಿರುತ್ತದೆ. ವಿಭಿನ್ನ ಆಮದು ತೆರಿಗೆ ಮತ್ತು ವಿನಿಮಯ ದರಗಳೇ ಈ ಬೆಲೆಯ ಏರಿಳಿತಕ್ಕೆ ಕಾರಣ ಎನ್ನಬಹುದು. ಇನ್ನು ಭಾರತದಲ್ಲಿ iPhone 15 Pro 1,34,900 ರೂ.ಗೆ ಲಭ್ಯವಿದ್ದರೆ, ಟರ್ಕಿಯಲ್ಲಿ ಅಂದಾಜು 2,00,000 ರೂ. ಮೌಲ್ಯವನ್ನು ಹೊಂದಿದೆ. ಭಾರತಕ್ಕೆ ಹೋಲಿಸಿದರೆ ಟರ್ಕಿಯಲ್ಲಿ iPhone ದುಬಾರಿಯಾಗಿದೆ.
ವಿದೇಶದಿಂದ iPhone ಖರೀದಿಸುವ ಮುನ್ನ ಈ ವಿಚಾರ ತಿಳಿದಿರಲಿ
*US ನಿಂದ ನೀವು ಐಫೋನ್ ಖರೀದಿಸಿದರೆ ಅದರಲ್ಲಿ eSIM ಅನ್ನು ಮಾತ್ರ ಬಳಸಲು ಸಾಧ್ಯವಾಗುತ್ತದೆ. US ನಿಂದ ಐಫೋನ್ ಖರೀದಿಸುವಾಗ ನೀವು ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದಾಗ್ಯೂ, ಐಫೋನ್ ಗಳ US ರೂಪಾಂತರಗಳು ಭಾರತೀಯ eSIM ಗಳಾದ Airtel, Jio ಮತ್ತು Vi ಅನ್ನು ಸಹ ಬೆಂಬಲಿಸುತ್ತವೆ.
*ಆಪಲ್ ವಾಚ್ ಕರೆಗಳು ಮತ್ತು ಡೇಟಾಕ್ಕಾಗಿ ಸೆಲ್ಯುಲಾರ್ ಸಂಪರ್ಕವನ್ನು ಸಹ ನೀಡುತ್ತದೆ, ಆದರೆ ಈ ವೈಶಿಷ್ಟ್ಯವು ಎಲ್ಲಾ ದೇಶಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ಆಪಲ್ ವಾಚ್ ನೀವು ವಾಚ್ ಖರೀದಿಸುತ್ತಿರುವ ದೇಶಕ್ಕೆ ಸೆಲ್ಯುಲಾರ್ ಬ್ಯಾಂಡ್ ಗಳನ್ನು ಹೊಂದಿದೆಯೇ ಎಂಬುದನ್ನು ಮೊದಲೇ ಪರಿಶೀಲಿಸಿ.
*ಅಧಿಕೃತ Apple ಸ್ಟೋರ್ ನಿಂದ ಅಥವಾ ಕನಿಷ್ಠ ಅಧಿಕೃತ ಅಂಗಡಿಯಿಂದ Apple ಸರಕುಗಳನ್ನು ಖರೀದಿಸುವುದರಿಂದ ನಕಲಿ ಉತ್ಪನ್ನಗಳನ್ನು ಪಡೆಯುವುದನ್ನು ತಡೆಯಬಹುದು. ಆದರೆ ವಿದೇಶದಿಂದ iPhone ಖರೀದಿಸುತ್ತಿದ್ದರೆ ನಿಮಗೆ ಬೇರೆ ಆಯ್ಕೆಗಳಿರುವುದಿಲ್ಲ. ಹೀಗಾಗಿ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
*ದುಬೈ ಸೇರಿದಂತೆ ಯುಎಇಯಲ್ಲಿ ಮಾರಾಟವಾಗುವ ಆಪಲ್ ಸಾಧನಗಳು ಫೇಸ್ ಟೈಮ್ ಅನ್ನು ಬೆಂಬಲಿಸುವುದಿಲ್ಲ.
*ಭಾರತವನ್ನು ಹೊರತುಪಡಿಸಿ ನೀವು ಬೇರೆ ಯಾವುದೇ ದೇಶದಿಂದ ಆಪಲ್ ಉತ್ಪನ್ನಗಳನ್ನು ಖರೀದಿಸುತ್ತಿದ್ದರೆ, ಅದಕ್ಕಾಗಿ ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ವಿದೇಶದಿಂದ ಯಾವುದೇ ವಸ್ತುಗಳನ್ನು ಆಮದು ಮಾಡಿಕೊಳ್ಳುವಾಗ ತೆರಿಗೆ ಶುಲ್ಕಗಳು ಅನ್ವಯವಾಗುತ್ತದೆ.