ABZO Motors: ಸಿಂಗಲ್ ಚಾರ್ಜ್ ನಲ್ಲಿ 180 Km ಮೈಲೇಜ್, ಮಾರುಕಟ್ಟೆ ಬಂತು ಇನ್ನೊಂದು ಅಗ್ಗದ EV ಬೈಕ್.

ABZO Motors ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್.

ABZO VS01 Motor Cycle: ಮಾರುಕಟ್ಟೆಯಲ್ಲಿ Electric Bike ಹೆಚ್ಚಿನ ಬೇಡಿಕೆ ಪಡೆಯುತ್ತಿದೆ ಎನ್ನಬಹುದು. ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆಯ ಏರಿಕೆಯ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಇನ್ನು ದೇಶದ ವಿವಿಧ ವಾಹನ ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೆಚ್ಚು ಹೆಚ್ಚು Electric ರೂಪಾಂತರವನ್ನೇ ಪರಿಚಯಿಸುತ್ತಿದೆ.

ಇದೀಗ ಮಾರುಕಟ್ಟೆಯಲ್ಲಿ ABZO Motors ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಲಿ ಸಿದ್ಧತೆ ಮಾಡಿಕೊಂಡಿದೆ. ಇನ್ನಿತರ ಎಲೆಕ್ಟ್ರಿಕ್ ರೂಪಾಂತರಕೆ ಹೋಲಿಸಿದರೆ ಈ ABZO Motors Electric Bike ವಿಭಿನ್ನ ಲುಕ್ ನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಈ ವಿಭಿನ್ನ ಲುಕ್ ಇರುವ ಹೊಸ ಎಲೆಕ್ಟ್ರಿಕ್ ಮಾದರಿಯ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

180 km mileage on a single charge
Image Credit: Deshgujarat

ABZO VS01 Motor Cycle
ಕಂಪನಿಯು 72 V 40Ah ಲಿಥಿಯಂ ಐಯಾನ್ ಬ್ಯಾಟರಿಯನ್ನು ABZO VS01 Motor Cycleನಲ್ಲಿ ಅಳವಡಿಸಿದ್ದು ಮಾರುಕಟ್ಟೆಯಲ್ಲಿ ಈ Bike ಸುಮಾರು 1 .8 ಲಕ್ಷದಿಂದಾ 2 .22 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಈ Electric Motor Cycle ನ ವಿಶೇಷವೆಂದರೆ ಇದು Retro Theme ಕ್ರೂಸರ್ ಡಿಸೈನ್ ಅನ್ನು ಹೊಂದಿದೆ.

ಇನ್ನು ಹೆಚ್ಚಿನ ಕಾರ್ಯಕ್ಷಮತೆಗಾಗಿ Eco , Normal , Sports ಎಂಬ ಮೂರು Riding Mode ಅನ್ನು ಹೊಂದಿದೆ. ಈ ಮೂರು ರೈಡಿಂಗ್ ಮೋಡ್ ಗಳು ಕ್ರಮವಾಗಿ 45 ಕಿಲೋಮೀಟರ್, 65 ಕಿಲೋಮೀಟರ್, 85 ಕಿಲೋಮೀಟರ್ ವೇಗವನ್ನು ತಲುಪುತ್ತದೆ.

ABZO VS01 Motor Cycle
Image Credit: Electricvehicles

ಸಿಂಗಲ್ ಚಾರ್ಜ್ ನಲ್ಲಿ ಬರೋಬ್ಬರಿ 180 ಕಿಲೋಮೀಟರ್ ಮೈಲೇಜ್
ನೂತನ ABZO VS01 Motor Cycle ನಲ್ಲಿ ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, 6 .3 KW ನ ಗರಿಷ್ಟ ಪವರ್ ಮತ್ತು 190 Nm ಗರಿಷ್ಟ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ವೇಗದ ಚಾರ್ಜಿಂಗ್ ನ ಮೂಲಕ ಕೇವಲ 2 ರಿಂದ 3 ಗಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಇನ್ನು ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 180 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

Join Nadunudi News WhatsApp Group

Join Nadunudi News WhatsApp Group