Accident Insurance: ವರ್ಷಕ್ಕೆ 20 ರೂ ಹೂಡಿಕೆ ಮಾಡಿದರೆ ಸಿಗಲಿದೆ 2 ಲಕ್ಷ ರೂ, ಕೇಂದ್ರದ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ.

ನೀವು ಈ ವಿಮೆಯ ಬಗ್ಗೆ ಮಾಹಿತಿ ತಿಳಿದುಕೊಂಡು ವಿಮಾ ಪಾಲಿಸಿಯ ಲಾಭ ಪಡೆದುಕೊಳ್ಳಿ.

PM Accident Insurance: ಭಾರತೀಯ ಜೀವ ವಿಮೆ ಜನರಿಗಾಗಿ ವಿವಿಧ ವಿಮಾ ಯೋಜನೆಯನ್ನು ಜಾರಿಗೊಳಿಸುತ್ತಿವೆ. ಈಗಾಗಲೇ ದೇಶದ ಸಾಕಷ್ಟು ಜನರು ಜೀವ ವಿಮೆಯನ್ನು ನೋಂದಣಿಯಿಸಿಕೊಂಡಿದ್ದಾರೆ. ಜೀವ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ವಿಮಾ ಪಾಲಿಸಿಗಳು ಸಹಾಯವಾಗುತ್ತದೆ. ಜೀವ ವಿಮಾ ಪಾಲಿಸಿಗಳು ಅನಿರೀಕ್ಷಿತ ಅಪಘಾತಗಳು ಸಂಭವಿಸಿದಾಗ ನೆರವಾಗುತ್ತದೆ.

ಕಡಿಮೆ ಪ್ರಿಮಿಯಂ ನಲ್ಲಿ ಸರ್ಕಾರದ ಬೆಂಬಲದಿಂದ ನಡೆಸುವ ಸಾಕಷ್ಟು ವಿಮಾ ಯೋಜನೆಗಳಿಗೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ವಿಮಾ ಪಾಲಿಸಿಗಳು ಹೆಚ್ಚು ಉಪಯೋಗಕಾರಿಯಾಗಿದೆ. ಇದೀಗ ಕೇಂದ್ರ ಸರ್ಕಾರ ಹೊಸ ಅಪಘಾತ ವಿಮೆಯನ್ನು (Accident Insurance)  ಜಾರಿಗೊಳಿಸಿದೆ. ನೀವು ಈ ವಿಮೆಯ ಬಗ್ಗೆ ಮಾಹಿತಿ ತಿಳಿದುಕೊಂಡು ವಿಮಾ ಪಾಲಿಸಿಯ ಲಾಭ ಪಡೆದುಕೊಳ್ಳಿ.

PM Accident Insurance
Image Source: Bizz Buzz

ಪ್ರಧಾನ ಮಂತ್ರಿ ಅಪಘಾತ ವಿಮಾ ಯೋಜನೆ
ನಿಮಗೆ ವರ್ಷದಲ್ಲಿಈ ಅತಿ ಕಡಿಮೆ ಹೂಡಿಕೆಯಲ್ಲಿ ಸಿಗುವ ಪಾಲಿಸಿ ಎಂದರೆ ಅದು ಪ್ರಧಾನ ಮಂತ್ರಿ ಅಪಘಾತ ವಿಮಾ ಯೋಜನೆ. ಈ ಯೋಜನೆಯಲ್ಲಿ ಅತಿ ಕಡಿಮೆ ಹೂಡಿಕೆಯಿಂದ ನೀವು ದೊಡ್ಡ ಮೊತ್ತವನ್ನು ಪಡೆಯಬಹುದು. 18 ರಿಂದ 70 ವರ್ಷದ ಒಳಗಿನವರು ಈ ಪ್ರಧಾನ ಮಂತ್ರಿ ಅಪಘಾತ ವಿಮಾ ಯೋಜನೆಗೆ ಸೇರಲು ಅರ್ಹರಾಗಿರುತ್ತಾರೆ.

ನೀವು ಖಾತೆ ಹೊಂದಿರುವ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಸೇರಿಕೊಳ್ಳಬಹುದು. ಸರ್ಕಾರೀ ಮತ್ತು ಖಾಸಗಿ ಕಂಪನಿಗಳು ಕೂಡ ಈ ವಿಮಾ ಪಾಲಿಸಿಯನ್ನು ನೀಡುತ್ತವೆ. ಪ್ರಿಮಿಯಂ ನ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಯಿಂದ ವಾರ್ಷಿಕವಾಗಿ ಕಡಿತಗೊಳಿಸಲಾಗುತ್ತದೆ. ಇನ್ನು ಈ ಯೋಜನೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡಿದರೆ ಎಷ್ಟು ಲಾಭ ಸಿಗಲಿದೆ ಎನ್ನುವ ಬಗ್ಗೆ ವಿವರವನ್ನು ತಿಳಿಯೋಣ.

PM Accident Insurance
Image Source: India Today

ವರ್ಷಕ್ಕೆ 20 ರೂ ಹೂಡಿಕೆ ಮಾಡಿದರೆ ಸಿಗಲಿದೆ 2 ಲಕ್ಷ ರೂ
ಅಪಘಾತ ವಿಮಾ ಯೋಜನೆ ಅಡಿಯಲ್ಲಿ ನೀವು ವರ್ಷಕ್ಕೆ 20 ರೂ. ಹೂಡಿಕೆ ಮಾಡಿದರೆ 2 ಲಕ್ಷ ಹಣವನ್ನು ಪಡೆಯಬಹುದು. ಅಪಘಾತದಲ್ಲಿ ಜೀವಹಾನಿ ಅಥವಾ ದೈಹಿಕ ಅಸಾಮರ್ಥ್ಯವನ್ನು ಅನುಭವಿಸುವ ವ್ಯಕ್ತಿಗಳಿಗೆ ರೂ. 2 ಲಕ್ಷಗಳ ವಿಮೆಯನ್ನು ನೀಡಲಾಗುತ್ತದೆ. ಇನ್ನು 215 ರಲ್ಲಿಯೇ ಈ ಪ್ರಧಾನ ಮಂತ್ರಿ ಅಪಘಾತ ವಿಮಾ ಯೋಜನೆ ಜಾರಿಗೊಳಿಸಲಾಗಿತ್ತು. ಈ ವೇಳೆ ವಾರ್ಷಿಕವಾಗಿ 12 ರೂ. ಪಾವತಿಸಬೇಕಿತ್ತು. ಆದರೆ ಕಳೆದ ವರ್ಷದಲ್ಲಿ ಪ್ರಿಮಿಯಂ ಮೊತ್ತವನ್ನು 12 ರಿಂದ 20 ಕ್ಕೆ ಹೆಚ್ಚಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group