Google Tv ಅಗ್ಗದ ಬೆಲೆಗೆ ಲಾಂಚ್ ಆಯಿತು 55 ಇಂಚಿನ ಗೂಗಲ್ ಟಿವಿ, ಹೊಸ ಟಿವಿ ಖರೀದಿಸುವವರಿಗೆ ಗುಡ್ ನ್ಯೂಸ್.
ಮಾರುಕಟ್ಟೆಗೆ G ಸರಣಿಯ ಸ್ಮಾರ್ಟ್ ಟಿವಿ ಪರಿಚಯಿಸಿದ Acer.
Acer G Series Google TV: ಇತ್ತೀಚಿಗೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ಬೇಡಿಕೆ ಹೆಚ್ಚಿದೆ. ಸದ್ಯ ಅನೇಕರ ಮನೆಯಲ್ಲಿ Smart TV ರಾರಾಜಿಸಿರುತ್ತದೆ. ಮನೆಯಲ್ಲಿ ಸ್ಮಾರ್ಟ್ ಟಿವಿ ಇದ್ದರೆ ಮನೆಗೊಂದು ಕಳೆ ಬರುತ್ತದೆ ಎನ್ನಬಹುದು. ಮಾರುಕಟ್ಟೆಯಲ್ಲಿ ವಿವಿದ ಸ್ಮಾರ್ಟ್ ಟಿವಿ ತಯಾರಕ ಕಂಪನಿಗಳು ಹಲವು ಮಾದರಿಯ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸುತ್ತ ಇರುತ್ತವೆ.
ಸ್ಮಾರ್ಟ್ ಫೀಚರ್ ನೊಂದಿಗೆ ಅನೇಕ ಟಿವಿಗಳು ಸದ್ಯ ಗ್ರಾಹಕರನ್ನು ಸೆಳೆಯುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ Acer ಕಂಪನಿ ತನ್ನ ನೂತನ ಸ್ಮಾರ್ಟ್ ಟಿವಿಯನ್ನು ಗ್ರಾಹಕರ ಆಯ್ಕೆಗೆ ನೀಡಿದೆ. Acer ಕಂಪನಿ ಭಾರತೀಯ ಮಾರುಕಟ್ಟೆಗೆ ತನ್ನ G ಸರಣಿಯಲ್ಲಿ ಸ್ಮಾರ್ಟ್ ಟಿವಿಯನ್ನು ಪರಿಚಯಿಸಿದೆ.
Acer G Series Google TV
ಮಾರುಕಟ್ಟೆಯಲ್ಲಿ Acer G Series Google TV ಅತ್ಯಾಕರ್ಷಕ ಫೀಚರ್ ನ ಮೂಲಕ ಬಿಡುಗಡೆಯಾಗಿದೆ. Acer G ಸರಣಿಯ ಟಿವಿ Dolby Atmos Sound, Motion Estimation, Motion Compensation (MEMC) technology, HDR 10 ಬೆಂಬಲವನ್ನು ಒಳಗೊಂಡಿದೆ. ಈ ಟಿವಿಯಲ್ಲಿ ನೀವು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಸ್ಕ್ರೀನ್ ನ ಆಯ್ಕೆಯನ್ನು ಪಡೆಯಬಹುದು.
ಈ ಸ್ಮಾರ್ಟ್ ಟಿವಿಗಳು ಡಾಲ್ಬಿ ಅಟ್ಮಾಸ್ ಧ್ವನಿಯೊಂದಿಗೆ ಮೂರು ಆಯಾಮದ ಧ್ವನಿಯನ್ನು ಸಹ ನೀಡುತ್ತವೆ. ಇದು ಬಳಕೆದಾರರ ವೀಕ್ಷಣೆಯ ಅನುಭವವನ್ನು ಹೆಚ್ಚಿಸುತ್ತದೆ. ಈ ಸ್ಮಾರ್ಟ್ MEMC ಟೆಕ್ನೋಲೊಜಿಯನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿ 24W ಸೌಂಡ್ ಔಟ್ ನೀಡುವ ಹೈ ಪಿಡ್ಯಾಲಿಟಿ ಸ್ಪೀಕರ್ ಗಳನ್ನೂ ಒಳಗೊಂಡಿದೆ. ಇನ್ನು ARM ಕಾರ್ಟೆಕ್ಸ್ A55 CPU ನಿಂದ ರನ್ನ ಆಗಲಿದ್ದು, 2GB RAM ಮತ್ತು 16GB ಇಂಟರ್ನಲ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ.
Acer G Series Google ಟಿವಿ ಬೆಲೆ ಎಷ್ಟಿದೆ..?
Acer G ಸರಣಿಯ 32 ಇಂಚಿನ ಟಿವಿ ಮಾದರಿಗೆ 21,999 ರೂ., ಇದರ 43 ಇಂಚಿನ G ಸರಣಿಯ ಟಿವಿ ರೂಪಾಂತರದ ಬೆಲೆ 42,999 ರೂ. ಹಾಗೆಯೆ ಈ ಸರಣಿಯ 55 ಇಂಚಿನ ಟಿವಿ ಮಾದರಿಯ ಬೆಲೆ 62,999 ರೂ. ಆಗಿದೆ. ಇನ್ನು ಏಸರ್ ಕಂಪನಿಯು ಈ ವರ್ಷ ಏಸರ್ ಹೆಚ್ ಪ್ರೊ ಸರಣಿಯ ಸ್ಮಾರ್ಟ್ ಟಿವಿಗಳನ್ನು ಪರಿಚಯಿಸಲಿದೆ. ಈ ಸರಣಿಯ ಟಿವಿಗಳು 43 ಇಂಚಿನ, 50 ಇಂಚಿನ ಮತ್ತು 55 ಇಂಚಿನ ಮೂರು ಗಾತ್ರದ ಆಯ್ಕೆಗಳಲ್ಲಿ ಲಭ್ಯವಿದೆ. ಎಲ್ಲಾ ಸ್ಮಾರ್ಟ್ ಟಿವಿಗಳು 4K ರೆಸಲ್ಯೂಷನ್ LCD ಪ್ಯಾನೆಲ್ ಅನ್ನು ಹೊಂದಿದ್ದು, LED ಬ್ಯಾಕ್ ಲೈಟಿಂಗ್ ನೊಂದಿಗೆ ಲಭ್ಯವಾಗಲಿದೆ.