Acer: ಆಕರ್ಷಕ ಲುಕ್ ಮತ್ತು 80 Km ಮೈಲೇಜ್, ಅಗ್ಗದ ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಮುಗಿಬಿದ್ದ ಜನರು.

ಅಗ್ಗದ ಬೆಲೆಗೆ ಆಕರ್ಷಕ ಸ್ಕೂಟರ್ ಲಾಂಚ್ ಮಾಡಿದ Acer

Acer MUVI 125 4G Electric Scooter: ದೇಶದ ವಿವಿಧ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಇತ್ತೀಚಿಗೆ Electric ಮಾದರಿಯನ್ನು ಹೆಚ್ಚಾಗಿ ಪರಿಚಯಿಸುತ್ತಿದೆ. ಮಾರುಕಟ್ಟೆಯಲ್ಲಿ Electric ವಾಹನಗಳ ಬೇಡಿಕೆ ಹೆಚ್ಚಿದ್ದು ಇಂಧನ ಚಾಲಿತ ವಾಹನಗಳು ಮೂಲೆಗುಂಪಾಗಿದೆ.

Laptop ಸೇರಿದಂತೆ ಇನಿತರ ಟೆಕ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿರುವ ACER ಕಂಪನಿ ಇದೀಗ ಭಾರತೀಯ ಆಟೋ ವಲಯದಲ್ಲಿ Electric Scoter ಅನ್ನು ಪರಿಚಯಿಸಲು ತಯಾರಾಗಿದೆ. Acer ಕಂಪನಿ ಇದೀಗ ಮಾರುಕಟ್ಟೆಯಲ್ಲಿ ತನ್ನ ನೂತನ Acer MUVI 125 4G Electric Scooter ಅನ್ನು ಪರಿಚಯಿಸಿದೆ. ಈ ನೂತನ ಸ್ಕೂಟರ್ ಕಾಲೇಜು ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಪ್ರಯಾಣಿಕರಿಗೆ ಉತ್ತಮ ಆಯ್ಕೆ ಆಗಿದೆ.

Acer MUVI 125 4G Electric Scooter
Image Credit: Electric-vahan

Acer MUVI 125 4G Electric Scooter Battery Capacity & Mileage
EV India Expo 2023 ರಲ್ಲಿ Acer ತನ್ನ ನೂತನ Acer MUVI 125 4G Electric Scooter ಅನ್ನು ಅನಾವರಣಗೊಳಿಸಿದೆ. ಗಂಟೆಗೆ ಗರಿಷ್ಟ 75 ಕಿಲೋಮೀಟರ್ ವೇಗವನ್ನು ನೀಡುವ ಈ ಸ್ಕೂಟರ್ ಬಹಳ ಹಗುರವಾಗಿದೆ. ಇನ್ನು Acer MUVI 125 4G Electric Scooter ಬದಲಾಯಿಸಬಹುದಾದ ಬ್ಯಾಟರಿ ವಿನ್ಯಾಸವನ್ನು ಪಡೆದಿದೆ. ಈ ಹೊಚ್ಚ ಹೊಸ Acer MUVI 125 4G Electric Scooter 80 ಕಿಲೋಮೀಟರು ಮೈಲೇಜ್ ನೀಡಲಿದೆ. ಈ ನೂತನ ಸ್ಕೂಟರ್ 84kg ತೂಕವನ್ನು ಪಡೆದಿದೆ.

Acer MUVI 125 4G Electric Scooter Feature
ಇನ್ನು eBikeGo Private Limited ಸಹಯೋಗದೊಂದಿಗೆ ನೂತನ Acer MUVI 125 4G Electric Scooter ಅನ್ನು ಪರಿಚಯಿಸಲಾಗಿದೆ. Acer MUVI 125 4G Electric Scooter 6-inch wheels, data-driven design and customizable options ಅನ್ನು ಪಡೆದುಕೊಂಡು  ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

Acer MUVI 125 4G Electric Scooter Price
Image Credit: Evupdatemedia

Acer MUVI 125 4G Electric Scooter Price
Acer MUVI 125 4G Electric Scooter ಅನ್ನು 1 ಲಕ್ಷ ಬೆಲೆಯಲ್ಲಿ ಪರಿಚಯಿಸಲಾಗಿದೆ. ಈ ಸ್ಕೂಟರ್ ಬಿಳಿ, ಕಪ್ಪು ಮತ್ತು ಬೂದು ಬಣ್ಣದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. Acer MUVI 125 4G Electric Scooter ಕೇಂದ್ರ ಮತ್ತು ರಾಜ್ಯ-ಮಟ್ಟದ ಸರ್ಕಾರಿ ಸಬ್ಸಿಡಿಗಳಿಗೆ ಅರ್ಹತೆ ಪಡೆದುಕೊಂಡಿದೆ. ಸದ್ಯ ಈ ಸ್ಕೂಟರ್ ಗೆ ತುಂಬಾ ಬೇಡಿಕೆ ಉಂಟಾಗಿದ್ದು ಎಲೆಕ್ಟ್ರಿಕ್ ಸ್ಕೂಟರ್ ಕ್ಷೇತ್ರದಲ್ಲಿ ಈ ಸ್ಕೂಟರ್ ಇನ್ನೊಂದು ಹೊಸ ದಾಖಲೆ ಬರೆಯಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group

Join Nadunudi News WhatsApp Group